ರಾಜ್ಯ ಸಭೆ ಪ್ರವೇಶಿಸಲು ಆಸಕ್ತಿ ಇಲ್ಲ, ಜೆಡಿಎಸ್ ಬಲಪಡಿಸುವತ್ತ ನನ್ನ ದೃಷ್ಟಿ; ದೇವೇಗೌಡ ಸ್ಪಷ್ಟನೆ

ಬೆಂಗಳೂರು, ಜ 12:        ರಾಜ್ಯಸಭಾ ಚುನಾವಣೆಗೆ  ಸ್ಪರ್ಧಿಸಲು  ಮಾಜಿ ಪ್ರಧಾನಿ ದೇವೇಗೌಡ ಅವರು ಆಸಕ್ತಿ ಹೊಂದಿಲ್ಲ.  ರಾಜ್ಯಸಭೆ  ಸದಸ್ಯನಾಗಲು      ಪ್ರಯತ್ನ ನಡೆಸುತ್ತಿದ್ದೇನೆ  ಎಂದು  ಹಬ್ಬಿರುವ       ವದಂತಿಗಳಲ್ಲಿ  ಯಾವುದೇ  ಸತ್ಯಾಂಶವಿಲ್ಲ  ಎಂದು  ಸ್ವತಃ  ದೇವೇಗೌಡ      ಅವರು    ಸ್ಪಷ್ಟಪಡಿಸಿದ್ದಾರೆ.  

ಸುದ್ದಿಸಂಸ್ಥೆಯೊಂದಕ್ಕೆ       ನೀಡಿದ ಸಂದರ್ಶನದಲ್ಲಿ ಅವರು ಸಂಸತ್ತಿನ ಮೇಲ್ಮನೆಗೆ      ಹೋಗಲು  ತಾವು  ಯಾವುದೇ ಆಸಕ್ತಿ ಹೊಂದಿಲ್ಲ ಎಂದು      ತಿಳಿಸಿದ್ದಾರೆ.  

ಜೆಡಿಎಸ್  ಪರಮೋಚ್ಛ ನಾಯಕ  ದೇವೇಗೌಡರು  ರಾಜ್ಯಸಭೆ      ಪ್ರವೇಶಿಸಲು    ಇದು  ಸೂಕ್ತ      ಸಮಯ ಎಂದು ಪಕ್ಷದ ಮುಖಂಡರು ಇತ್ತೀಚೆಗೆ ಹೇಳಿದ್ದರು.  ಪಕ್ಷದ ವಕ್ತಾರ ತನ್ವೀರ್ ಅಹ್ಮದ್, ಇತ್ತೀಚೆಗೆ ಪಕ್ಷದ ಸಮಾವೇಶದಲ್ಲಿ ಮಾತನಾಡಿ      ಕೇಂದ್ರಮಟ್ಟದಲ್ಲಿ   ಕರ್ನಾಟಕದ ಪರವಾಗಿ  ಪ್ರಬಲವಾದ ದ್ವನಿ  ಎತ್ತುವುದು  ಈಗ ಅತ್ಯಂತ ಆಗತ್ಯವಾಗಿದ್ದು, ದೇವೇಗೌಡರ ರಾಷ್ಟ್ರ  ರಾಜಕಾರಣದಲ್ಲಿ  ಗೌರವ ಹೊಂದಿರುವ ಹಿರಿಯ  ನಾಯಕ      ಎಂದು  ಹೇಳಿದ್ದರು.

ತಮಗೆ  ರಾಜ್ಯಸಭೆ  ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ  ಇಲ್ಲ, ಜಾತ್ಯತೀತ ಜನತಾದಳ ಪಕ್ಷವನ್ನು  ಬಲಪಡಿಸುವತ್ತ      ಮಾತ್ರ  ನನ್ನ  ದೃಷ್ಟಿ ಎಂದು  ದೇವೇಗೌಡರು  ಹೇಳಿದ್ದಾರೆ.      ತಾವು ಇನ್ನೂ ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈ ಹಿಂದೆಯೇ      ಘೋಷಿಸಿರುವುದಾಗಿ ಹೇಳಿದ್ದಾರೆ.  

ಕರ್ನಾಟಕದಿಂದ  ಆಯ್ಕೆ ಗೊಂಡಿರುವ  ನಾಲ್ಕು ರಾಜ್ಯಸಭಾ ಸ್ಥಾನಗಳು  ಬರುವ ಜೂನ್ ನಲ್ಲಿ ಖಾಲಿಯಾಗಲಿದ್ದು,  ಕಾಂಗ್ರೆಸ್ ನ  ರಾಜೀವ್ ಗೌಡ,  ಬಿ.ಕೆ. ಹರಿ ಪ್ರಸಾದ್,      ಬಿಜೆಪಿಯ ಪ್ರಭಾಕರ್ ಕೋರೆ ಮತ್ತು ಜೆಡಿಎಸ್ ನ  ಡಿ.  ಕುಪೇಂದ್ರ ರೆಡ್ಡಿ      ಅವರ ರಾಜ್ಯಸಭಾ  ಸದಸ್ಯತ್ವದ  ಅವಧಿ ಜೂನ್ ನಲ್ಲಿ  ಕೊನೆಗೊಳ್ಳಲಿದೆ.