ಹಂಪಿಯಲ್ಲಿ ಭೂಕಂಪನವಾಗಿಲ್ಲ: ಜಿಲ್ಲಾಧಿಕಾರಿ ನಕುಲ್ ಸ್ಪಷ್ಟನೆ
ಹೊಸಪೇಟೆ, ಜೂ.5,ಜಿಲ್ಲೆಯ ವಿಶ್ವ ಪಾರಂಪರಿಕ ತಾಣವಾದ ಹಂಪಿ ಸುತ್ತಮುತ್ತ ಶುಕ್ರವಾರ ನಸುಕಿನ ಜಾವ ಭೂಕಂಪನವಾಗಿದೆ ಎಂಬುದು ಕೇವಲ ವದಂತಿಯಷ್ಟೇ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸ್ಪಷ್ಟಪಡಿಸಿದ್ದಾರೆ.ಹಂಪಿ ಸುತ್ತಮುತ್ತ ಭೂಕಂಪನವಾಗಿದೆ ಎಂಬುದು ಶುದ್ಧ ಸುಳ್ಳು. ಒಂದು ವೇಳೆ ಭೂಕಂಪನವಾಗಿದ್ದರೇ ಅದರ ತೀವ್ರತೆಯ ಪ್ರಮಾಣ ದಾಖಲಾಗುತ್ತಿತ್ತು. ಆದರೆ, ಭೂಗರ್ಭ ಶಾಸ್ತ್ರಜ್ಞರು ಆ ರೀತಿಯ ಯಾವುದೇ ಘಟನೆ ಘಟಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇನ್ನು, ಹಂಪಿಯ ಕೆಲ ಸ್ಥಳೀಯರು ತಮಗೆ ಭೂಕಂಪನದ ಯಾವುದೇ ಅನುಭವವಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ .ನಸುಕಿನ ಜಾವ ಹಂಪಿ ಸುತ್ತಮುತ್ತ ಲಘು ಭೂಕಂಪನವಾಗಿದೆ ಎಂಬ ಸುದ್ದಿಯೊಂದು ಎಲ್ಲೆಡೆ ಹಬ್ಬಿತ್ತು.
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ 