ಅಮೆರಿಕಾ, ದಕ್ಷಿಣ ಕೊರಿಯಾಗೆ ಉತ್ತರ ಕೊರಿಯಾ ಎಚ್ಚರಿಕೆ ಉತ್ತರ ಕೋರಿಯಾ ನಾಯಕ ಕಿಮ್ ಜೊಂಗ್ ಉನ್

ಸಿಯೋಲ್   ಆಗಸ್ಟ್ 7    ಪರಮಾಣು ನಿಗ್ರಹ  ಮಾತುಕತೆ  ಸ್ಥಗಿತಗೊಂಡಿದ್ದರೂ, ಉತ್ತರ ಕೊರಿಯಾ ತನ್ನ ಕ್ಷಿಪಣಿ ಉಡಾವಣೆ ಪ್ರಯೋಗಗಳನ್ನು   ಮುಂದುವರಿಸುತ್ತಿದೆ.  

ಇತ್ತೀಚಿನ ತನ್ನ ಯುದ್ಧ ತಂತ್ರದ ಕ್ಷಿಪಣಿ ಉಡಾವಣೆ ನಡೆಸುತ್ತಿರುವುದು   ಅಮೆರಿಕಾ ಹಾಗೂ  ದಕ್ಷಿಣ ಕೊರಿಯಾ  ಸೇನೆಗಳಿಗೆ  ಎಚ್ಚರಿಕೆ ನೀಡುವ ಕ್ರಮವಾಗಿಯೇ  ನಡೆಸಲಾಗಿದೆ  ಎಂದು ಉತ್ತರ ಕೋರಿಯಾ  ನಾಯಕ ಕಿಮ್ ಜೊಂಗ್ ಉನ್  ಬುಧವಾರ  ಸ್ಪಷ್ಟಪಡಿಸಿದ್ದಾರೆ. 

ಕಳೆದ ಎರಡು ವಾರಗಳಲ್ಲಿ ಉತ್ತರ ಕೋರಿಯಾ  ನಾಲ್ಕನೆಯ ಬಾರಿ  ಕ್ಷಿಪಣಿ ಉಡಾವಣೆ ಪ್ರಯೋಗ ನಡೆಸುತ್ತಿದ್ದು,  ಅಮೆರಿಕಾ, ದಕ್ಷಿಣ ಕೋರಿಯಾದೊಂದಿಗೆ ಅಣ್ವಸ್ತ್ರ  ನಿಗ್ರಹ ಮಾತುಕತೆಗಳು ಸ್ಥಗಿತಗೊಂಡ ಹಿನ್ನಲೆಯಲ್ಲಿ  ಈ ಕ್ಷಿಪಣಿ ಪ್ರಯೋಗಗಳು ಮಹತ್ವ ಪಡೆದುಕೊಂಡಿದೆ. 

ಉತ್ತರ ಕೊರಿಯಾದ ಪಶ್ಚಿಮ  ಪ್ರಾಂತ್ಯಗಳಿಂದ ಉಡಾಯಿಸಲ್ಪಟ್ಟ  ವ್ಯೂಹಾತ್ಮಕ  ಕ್ಷಿಪಣಿ, ಶಸ್ತ್ರಾಸ್ತ್ರಗಳ ಸಾಮಥ್ರ್ಯ, ಭದ್ರತೆ ಮತ್ತು ಯುದ್ಧ ಸಾಮಥ್ರ್ಯಗಳನ್ನು ಸ್ಪಷ್ಟವಾಗಿ  ಪರೀಕ್ಷಿಸಲಾಗಿದೆ   ಎಂದು ಉತ್ತರ ಕೊರಿಯಾದ ಅಧಿಕೃತ ಮೂಲಗಳು ತಿಳಿಸಿವೆ.  

ಜೊತೆಗೆ ಅಮೆರಿಕಾಗೆ  ಸವಾಲು ಹಾಕುವಂತಹ ಖಂಡಾಂತರ ಕ್ಷಿಪಣಿ ಪರೀಕ್ಷೆಗಳನ್ನು  ಮತ್ತೆ   ನಡೆಸುವುದಿಲ್ಲ  ಎಂದು  ಅಧ್ಯಕ್ಷ  ಡೋನಾಲ್ಡ್  ಟ್ರಂಪ್ ಅವರಿಗೆ    ಕಿಮ್ ಜೊಂಗ್ ಉನ್ ನೀಡಿದ ಭರವಸೆಯನ್ನು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್  ಉತ್ತರ ಕೋರಿಯಾಗೆ ಜ್ಞಾಪಿಸಿದ್ದಾರೆ.