ವಿಶ್ವ ಶಾಂತಿಗಾಗಿ ಅಹಿಂಸೆ ಪ್ರಮುಖ ಅಸ್ತ್ರ: ಡಾ. ಅಜಿತ ಪ್ರಸಾದ
Non-violence is the most important weapon for world peace: Dr. Ajit Prasad
ಲೋಕದರ್ಶನ ವರದಿ
ಧಾರವಾಡ 09: ಸದ್ಯ ವಿಶ್ವವು ಅಶಾಂತಿಯಿಂದ ಕೂಡಿದೆ ವಿಶ್ವಕ್ಕೆ ಶಾಂತಿಯನ್ನು ನೀಡುವ ಧರ್ಮ ಜೈನ ಧರ್ಮ. ಈ ಧರ್ಮದ ನಮೋಕಾರ ಮಂತ್ರ ಮನಸ್ಸಿನಲ್ಲಿರುವ ಕಲ್ಮಶಗಳನ್ನೆಲ್ಲಾ ದೂರಮಾಡಿ ಮನಸ್ಸಿಗೆ ಶಾಂತಿ ದೊರೆಯುವಂತೆ ಮಾಡುವ ಶಕ್ತಿ ಈ ಮಂತ್ರದಲ್ಲಿದೆ. ಸತ್ಯ, ಅಹಿಂಸೆ, ಇಂದಿನ ದಿನಮಾನದ ಅತ್ಯಂತ ಪ್ರಭಾವಶಾಲಿ ಅಸ್ತ್ರಗಳು ಜಗತ್ತು ಈಗ ಯುದ್ಧದ ಜ್ವಾಲೆಯಲ್ಲಿ ಸಿಲುಕಿರುವಾಗ ಭಾರತ ಮಾತ್ರ ಅತ್ಯಂತ ಸುರಕ್ಷಿತವಾಗಿರಲು ಈ ಅಹಿಂಸೆ ಪಾಲನೆಯು ಕಾರಣ ಎಂದು ಜೈನ ಮಿಲನಿನ ಸಂಸ್ಥಾಪಕ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಹೇಳಿದರು.
ಅವರು ಧಾರವಾಡ ಜೈನ ಮಿಲನ ಧಾರವಾಡ ವತಿಯಿಂದ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಉತ್ಸವ ಸಭಾಭವನದಲ್ಲಿ ದಿ. 09 ರಂದು ವಿಶ್ವ ನಮೋಕಾರ ಮಂತ್ರ ದಿವಸ ಅಂಗವಾಗಿ 108 ಬಾರಿ ನಮೋಕಾರ ಮಂತ್ರ ಪಠಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವ ನಮೋಕಾರ ಮಂತ್ರ 108 ಬಾರಿ ಪಠಣ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಜಿನದತ್ತ ಹಡಗಲಿ ಮಾತನಾಡುತ್ತಾ ನಮೋಕಾರ ಮಂತ್ರದ ಮಹತ್ವದ ಬಗ್ಗೆ ಮಾತನಾಡಿದರು. ಈ ಸಮಾರಂಭದಲ್ಲಿ ಅಶೋಕ ಬಾಳಿಕಾಯಿ, ಕೆ.ಜಿ ರಪಾಟಿ, ವಾಣಿಶ್ರೀ ಪ್ರಸಾದ, ಭರಮಪ್ಪ ಭಾವಿ, ಸಂಗೀತಾ ಉಪಾಧ್ಯೆ, ವೈಶಾಲಿ ಕುಂದಗೋಳ, ಸುನಂದಾ ವರೂರ ಭಾಗವಹಿಸಿದ್ದರು ಜೈನ ಮಿಲನಿನ ಅಧ್ಯಕ್ಷರಾದ ಜಿನಪ್ಪ ಕುಂದಗೋಳ ಸ್ವಾಗತಿಸಿದರು.
ಜೆ.ಎಸ್.ಎಸ್ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾಧ್ಯೆ ವಂದಿಸಿದರು. ಕಾರ್ಯಕ್ರಮವನ್ನು ಮಿಲನಿನ ಕಾರ್ಯದರ್ಶಿಗಳಾದ ರತ್ನಾಕರ ಹೋಳಗಿ ನಿರೂಪಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 