ಲೋಕದರ್ಶನ ವರದಿ
ಕಾರವಾರ:, 29: ಉತ್ತರ ಕನ್ನಡ ಜಿಲ್ಲೆಯ ಕೆನರಾ ಲೋಕಸಭಾ ಕ್ಷೇತ್ರಕ್ಕೆ ಶುಕ್ರವಾರ ಪಕ್ಷೇತರ ಅಭ್ಯಥರ್ಿಯೋರ್ವರು ನಾಮಪತ್ರ ಸಲ್ಲಿಸಿದರು. ಭಟ್ಕಳದ ಮುಗ್ದಂ ಕಾಲೂನಿ ನಿವಾಸಿ ಮೊಹಮ್ಮದ್ ಝಬರೂದ್ ಖತೀಬಾ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಡಾ.ಹರೀಶ್ ಕುಮಾರ್ ಅವರು ನಾಮಪತ್ರ ಸ್ವೀಕರಿಸಿದರು. ಚುನಾವಣಾ ನೀತಿ ಸಂಹಿತೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಮೊಹಮ್ಮದ್ ಝಬರೂದ್ ಖತೀಬಾ ತಮ್ಮ ಆಸ್ತಿ ಹಾಗೂ ಇನ್ನಿತರ ವಿವರ ತಿಳಿಸಿದ್ದು, ತಮ್ಮ ಬಳಿ 2,99,390 ರೂ. ಕ್ಯಾಶ್ ಇರುವುದಾಗಿ ಅಫಿಡೆವಿಟ್ನಲ್ಲಿ ತಿಳಿಸಿದ್ದಾರೆ. ಪತ್ನಿಯ ಬಳಿ 2,50,000 ರೂ. ಇದೆ. ಹತ್ತು ಪವನ ಚಿನ್ನ ಇದ್ದು, ಅದರ ಬೆಲೆ 2,50,000 ರೂ. ಆಗಬಹುದು ಎಂಬ ವಿವರ ನೀಡಿದ್ದಾರೆ. 2 ಅಪರಾಧ ಪ್ರಕರಣ ಇತ್ಯಥ್ರ್ಯಕ್ಕೆ ಕಾದಿವೆ ಎಂಬ ವಿವರ ನೀಡಿದ್ದಾರೆ. ಸ್ಥಿರಾಸ್ತಿಯಾಗಲಿ, ಪಿತ್ರಾಜರ್ಿತ ಆಸ್ತಿಯಾಗಲಿ ಇಲ್ಲ ಎಂಬ ವಿವರ ನೀಡಿದ್ದಾರೆ. ಹತ್ತು ಜನ ಸೂಚಕರು ಮೊಹಮ್ಮದ್ ನಾಮಪತ್ರಕ್ಕೆ ಸಹಿ ಹಾಕಿದ್ದಾರೆ.
ಒಟ್ಟು 2 ನಾಮಪತ್ರ ಸಲ್ಲಿಕೆಯಾದಂತಾಗಿದೆ :
ಕೆನರಾ ಲೋಕಸಭಾ ಕ್ಷೇತ್ರಕ್ಕೆ ಈವರೆಗೆ ಎರಡು ನಾಮಪತ್ರ ಸಲ್ಲಿಕೆಯಾಗಿವೆ. ನಿನ್ನೆ ಜೊಯಿಡಾ ತಾಲೂಕಿನ ರಾಮನಗರ ನಿವಾಸಿ ಬಾಲಕೃಷ್ಣ ಅಜರ್ುನ್ ಪಾಟೀಲ ನಾಮಪತ್ರ ಸಲ್ಲಿಸಿದ್ದರು. ಶುಕ್ರವಾರ ಮೊಹಮ್ಮದ್ ನಾಮಪತ್ರ ಸಲ್ಲಿಸಿದ್ದು, ಇಬ್ಬರು ನಾಮಪತ್ರ ನೀಡಿದಂತಾಗಿದೆ. ಇಬ್ಬರು ಪಕ್ಷೇತರ ಅಭ್ಯಥರ್ಿಗಳು ಎಂಬುದು ಗಮನಾರ್ಹ.