ಬೆಂಗಳೂರು, ಅ 04: ಚಂದನವನದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಛಾಪು ಮೂಡಿಸಿರುವ ನಟ ಲೂಸ್ ಮಾದ ಯೋಗಿ ಅವರ ಮುದ್ದಾದ ಮಗುವಿಗೆ ನಾಮಕರಣವಾಗಿದೆ. ಯೋಗಿ ಸಾಹಿತ್ಯ ದಂಪತಿ ತಮ್ಮ ಕುಟುಂಬದ ಕೆಲವು ಹಿರಿಯರು ಆತ್ಮೀಯ ಸ್ನೇಹಿತರನ್ನು ಕರೆದು ತಮ್ಮ ಮುದ್ದು ಮಗಳಿಗೆ ನಾಮಕರಣ ಶಾಸ್ತ್ರವನ್ನು ಅತ್ಯಂತ ಸರಳವಾಗಿ ನೆರವೇರಿಸಿದ್ದು, ಶ್ರೀನಿಕಾ ಎಂದು ನಾಮಕರಣ ಮಾಡಿದ್ದಾರೆ. ಇವರ ಈ ನಾಮಕರಣ ಸಮಾರಂಭಕ್ಕೆ ಸ್ವತಃ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೋಗಿ ಮಗುವಿಗೆ ಆಶೀರ್ವಾದ ಮಾಡಿ ಯೋಗಿ ದಂಪತಿಗಳಿಗೆ ಅಭಿನಂದನೆ ಸಲ್ಲಿಸಿ ಶುಭಹಾರೈಸಿ ಬಂದಿದ್ದಾರೆ. ಸದ್ಯ ಈಗಾಗಲೇ ಸಾಲು ಸಾಲು ಸಿನಿಮಾಗಳು ಯೋಗಿ ಕೈಯಲ್ಲಿ ಇದ್ದು ತಮಿಳು ಚಿತ್ರರಂಗದಿಂದಲೂ ಆಫರ್ ಬಂದಿದೆ. ಮಗಳು ಶ್ರೀನಿಕಾ ಯೋಗಿಗೆ ಭಾಗ್ಯವನ್ನು ತಂದಿದ್ದಾಳೆ ಎನ್ನಲಾಗುತ್ತಿದೆ. ಯೋಗಿ ಲೂಸ್ ಮಾದ ಕಳೆದ 2017 ರ ನವೆಂಬರ್ 2 ರಂದು ತಮ್ಮ ಬಾಲ್ಯದ ಗೆಳತಿ ಐಟಿಯಲ್ಲಿ ಕೆಲಸವನ್ನು ಮಾಡುತ್ತಿರುವ ಸಾಹಿತ್ಯರವರನ್ನು ಹಿರಿಯರ ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಮದುವೆ ಆಗಿದ್ದರು. ಅವರ ಪ್ರೇಮದ ಫಲವಾಗಿ ಮೇ 2019 ರ 5 ರಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು ಸಾಹಿತ್ಯ ಸೋಶಿಯಲ್ ಮೀಡಿಯಾದಲ್ಲಿ ಯೋಗಿ ಹಾಗೂ ಸಾಹಿತ್ಯ ತಮ್ಮ ಮುದ್ದಿನ ಮಗಳ ಅನೇಕ ಸುಂದರ ಚಿತ್ರಗಳನ್ನು ಕೂಡ ಶೇರ್ ಮಾಡಿ ಮಗಳ ಜೊತೆ ತುಂಟಾಟ ಆಡುತ್ತಾ ಕಾಲ ಕಳೆದಿದ್ದರು. ಈಗ ಅವರ ಮಗಳಿಗೆ ನಾಮಕರಣ ಮಾಡಿ ಸಂಭ್ರಮಿಸಿದ್ದಾರೆ.