ನೋಡಬರ್ರಿ ನಮ್ಮೂರಿನ ಹೈಟೆಕ್ ಹೈವೇಯನ್ನ

ಶಶಿಧರ ಶಿರಸಂಗಿ

ಶಿರಹಟ್ಟಿ 27: ಯಳವತ್ತಿ ಗ್ರಾಮವು ಎಲ್ಲ ಬಗೆಯ ಪ್ರಗತಿಯಲ್ಲಿ ಸಾಗಿರೋ ಗ್ರಾಮ ಹಾಗೂ ತಾಲೂಕಿನಲ್ಲಿಯೇ 2ನೇ ದೊಡ್ಡ ಗ್ರಾಮವೆಂಬ ಹೆಗ್ಗಳಿಕೆ. ಈ ಗ್ರಾಮ ಗದಗ ಜಿಲ್ಲೆಯ ಮುಳಗುಂದದಿಂದ ಕೇವಲ 4 ಕಿ.ಮೀ, ಮಾಗಡಿಯಿಂದ ಕೇವಲ 5 ಕಿ.ಮೀ, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಂಜಳ ಗ್ರಾಮದಿಂದ ಕೇವಲ 10 ಕಿ.ಮೀ ಅಂತರವನ್ನು ಹೊಂದಿದ ಈ ಗ್ರಾಮವು ಮಾಗಡಿಯಿಂದ ಧಾರವಾಡ ಹಾಗೂ ಗದಗ ಜಿಲ್ಲೆಯನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ.

ಧಾರವಾಡ ಜಿಲ್ಲೆ ಹಾಗೂ ಗದಗ ತಾಲೂಕುಗಳಿಗೆ ಸಂಪರ್ಕ ಸಾಧಿಸುವ ಈ ಗ್ರಾಮಕ್ಕಿಲ್ಲ ಸುಗಮ ಸಂಚಾರಕ್ಕೊಂದು ರಸ್ತೆ ಎಂಬ ಕಳಂಕ ಹೊತ್ತಿರೋ ಈ ಒಂದೇ ಗ್ರಾಮವನ್ನು ರಾಜ್ಯ ಸಕರ್ಾರ ಹಾಗೂ ಕೇಂದ್ರ ಸಕರ್ಾರಗಳು ದೇಶದಲ್ಲೇ ಮಾದರಿ ಗ್ರಾಮವನ್ನಾಗಿಸಲು ಸ್ವಚ್ಚ ಗ್ರಾಮ, ಸುವರ್ಣ ಗ್ರಾಮ ಹಾಗೂ ಸಂಸದರ ಅನುದಾನದಡಿ ಆದರ್ಶ ಗ್ರಾಮಗಳೆಂಬ ಯೋಜನೆಗಳು ಬಂದ ಮೇಲೆ ಯಳವತ್ತಿ ಗ್ರಾಮಗಳಲ್ಲಿ ಹಲವಾರು ಪ್ರಗತಿಪರ ಕೆಲಸಗಳಾದವು. ಮುಖ್ಯವಾಗಿ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವು ಜಿಲ್ಲೆಯಲ್ಲಿಯೇ ಸುಸಜ್ಜಿತ ಹಾಗೂ ಸುಂದರ ಗಾರ್ಡನ್ ಹೊಂದಿದ ಆಸ್ಪತ್ರೆಯಂಬ ಪ್ರಶಸ್ತಿ ಪಡೆದಿದೆ. ಮಾಗಡಿ ಹಾಗೂ ಯತ್ತಿನಹಳ್ಳಿಗಳ ದೊಡ್ಡ ಹಳ್ಳಗಳಿಗೆ ಬೃಹತ್ ಸೇತುವೆಗಳ ನಿಮರ್ಾಣ, ಹೈ ಮಾಸ್ಕ್ ದೀಪದ ಅಳವಡಿಕೆ, ಉತ್ತಮ ನೀರಿನ ವ್ಯವಸ್ಥೆ, ಉತ್ತಮ ಆಡಳಿತ ವ್ಯವಸ್ಥೆ ಇನ್ನೂ ಹತ್ತು ಹಲವಾರು ಪ್ರಗತಿ ಕಾರ್ಯಗಳಾಗಿವೆ. ಆದರೆ ಈ ಗ್ರಾಮವನ್ನು ತಲುಪಲು ಮಾತ್ರ ಸರಿಯಾದ ರಸ್ತೆ ಮಾತ್ರವಿಲ್ಲ. 

ಸಾರಿಗೆ ಸೌಕರ್ಯಕ್ಕಾಗಿ ಉತ್ತಮ ರಸ್ತೆಗಳು ಬೇಕು | ಜನಪ್ರತಿನಿಧಿಗಳ ಸಹಾಯದ ಅವಶ್ಯಕತೆ ಅವಶ್ಯಕ: ಯಳವತ್ತಿಯಿಂದ ಮಾಗಡಿಗೆ ತೆರಳುವ ದೂರ ಕೇವಲ 5 ಕಿ. ಮೀ ಇದ್ದು ಅದರಲ್ಲಿ ಮಾಗಡಿಯಿಂದ ಕೇವಲ 3 ಕಿ.ಮೀ ಮಾತ್ರ ಉತ್ತಮ ರಸ್ತೆಯಿದ್ದು, ಅಲ್ಲಿಂದ ಯಳವತ್ತಿ ಕಡೆಗೆ ಕೇವಲ 2 ಕಿ,ಮೀ ಮಾತ್ರ ರಸ್ತೆಯ ಪರಿಸ್ಥಿತಿ ಹೇಳತೀರದು. ಎಷ್ಟೋ ಜನರು ತಮ್ಮ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ವಾಹನಗಳನ್ನು ಓಡಿಸುವ ಪರಿಸ್ಥಿತಿ ಸವರ್ೆ ಸಾಮಾನ್ಯವಾಗಿದೆ. ಅದೇ ರೀತಿ  ಮಾಗಡಿಯಿಂದ ಮುಖ್ಯ ಸಂಪರ್ಕ ರಸ್ತೆಯಿಂದ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು 5 ಕಿ.ಮೀ ಹಾಗೂ ಕನಿಷ್ಠ 20 ಅಡಿಗಳಾದರೂ ಅಗಲವಿರಬೇಕಿತ್ತು. ಆದರೆ, ರಸ್ತೆಯ ಅಗಲ ಮಾತ್ರ ಹೆಚ್ಚಿಸುವುದ ಸೂಕ್ತ ಎಂಬುದು ಈ ಗ್ರಾಮ ಜನತೆಯ ಆಶಯವಾಗಿದೆ. 

ನಮ್ಮ ಮತಕ್ಷೇತ್ರದಿಂದ ಆಯ್ಕೆಗೊಂಡ ಶಾಸಕರು ಈ ಗ್ರಾಮದ ಕಡೆಗೆ ವಿಶೇಷ  ಕಾಳಜಿ ವಹಿಸಿ ಈ ಬಾಕಿ ಉಳಿದ ರಸ್ತೆಯನ್ನು ಉತ್ತಮ ರಸ್ತೆಯನ್ನಾಗಿಸಲು ಆದಷ್ಟು ಬೇಗನೇ ರಾಜ್ಯ ಸಕರ್ಾರದಡಿ ಅನುದಾನದ ಮಂಜೂರಾತಿಗಾಗಿ ಗಮನಕೊಟ್ಟಲ್ಲಿ ಈ ಗ್ರಾಮಗಳ ಸಂಪರ್ಕ ಸಾಧಿಸುವ ರಸ್ತೆಗೆ ಮರುಜೀವ ಬಂದಂತಾಗುತ್ತದೆ. 

ಈ ಮಾದರೀ ಗ್ರಾಮಕ್ಕೊಂದು ಬೇಕಿದೆ ಕಾಲೇಜು ವ್ಯವಸ್ಥೆ: ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣದ ವ್ಯವಸ್ಥೆ ಪ್ರಗತಿಯಾಗಿದ್ದರಿಂದ ಮಕ್ಕಳಲ್ಲಿ ಓದಿನ ಹವ್ಯಾಸ ಹಾಗೂ ಸ್ಪಧರ್ಾತ್ಮಕ ಭಾವನೆ ಉತ್ತಮಗೊಂಡು ಪ್ರಾಥಮಿಕ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿ ಪ್ರೌಢಶಾಲೆಯನ್ನು ಏರುತ್ತಿರುವುದನ್ನು ಕಂಡರೆ ಮಕ್ಕಳಲ್ಲಿ ಕಲಿಕಾ ಮನೋಭಾವ ಹೆಚ್ಚಿದೆಯಂದರೆ ತಪ್ಪಾಗಲಾರದು. ಇದರಿಂದ ಗಂಡು ಹೆಣ್ಣೆಂಬ ಲಿಂಗ ಬೇಧ ಕಣ್ಮರೆಯಾಗಿ ಎಲ್ಲರಿಗೂ ಸಮಾನ ಶಿಕ್ಷಣ ಹಾಗೂ ಅವಕಾಶಗಳನ್ನು ಮಕ್ಕಳು ಹೊಂದುತ್ತಿದ್ದಾರೆ.

ಆದರೆ ಇಲ್ಲಿನ ಮಕ್ಕಳು ಮಾತ್ರ ಪ್ರೌಢ ಶಿಕ್ಷಣ ಮುಗಿದ ಮೇಲೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ನೆರೆಯ ದೂರದ ಮುಳಗುಂದ, ಮಾಗಡಿ, ಶಿರಹಟ್ಟಿ, ಲಕ್ಷ್ಮೇಶ್ವರ, ಗದಗ ಪಟ್ಟಣಕ್ಕೆ ತೆರಳುವ ಪರಿಸ್ಥಿತಿ ಇರುವುದರಿಂದ ಮುಖ್ಯವಾಗಿ ಹೆಣ್ಣು ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಪ್ರೌಢಶಾಲೆಗೆ ಸೀಮಿತಗೊಳಿಸಿ ವಿದ್ಯಾಭ್ಯಾಸವನ್ನು ಕುಂಠಿತ ಗೊಳಿಸುತ್ತಿದ್ದಾರೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ದೇಶದ ಉದ್ಧಾರವಾದಂತೆ ಅನ್ನುವ ನಾಣ್ಣುಡಿಗೆ ಅವಶ್ಯವಾದ ಈ ಮಾದರೀ ಗ್ರಾಮಕ್ಕೆ ಒಂದು ಕಾಲೇಜಿನ ವ್ಯವಸ್ಥೆ ಆದಾಗ ಮಾತ್ರ ಇಲ್ಲಿನ ಹಾಗೂ ಯತ್ತಿನಹಳ್ಳಿ, ಮಾಢಳ್ಳಿ ಗ್ರಾಮಗಳ ಹೆಣ್ಣುಮಕ್ಕಳಿಗೂ ಅನುಕೂಲವಾಗಿ ಇಲ್ಲಿನ ಶಿಕ್ಷಣದ ಗುಣಮಟ್ಟ ಹೆಚ್ಚುತ್ತದೆ ಎಂಬುದು ಮಕ್ಕಳ ಪಾಲಕರ ಅಭಿಪ್ರಾಯ.   

ಹಣ ನುಂಗುವ ಘಟಾನು ಘಟಿ ಗುತ್ತಿಗೆದಾರರಿಗೆ ಸಿಗುವುದೊಂದೇ ಯಳವತ್ತಿ ರಸ್ತೆ ಕಾಮಗಾರಿ: ಈ ಯಳವತ್ತಿ ರಸ್ತೆ ಯಾವಾಗಲೂ ಜನಜಂಗುಳಿ. ವಾಹನಗಳ ದಟ್ಟಣೆಯಿಂದ ಕೂಡಿರುವ ರಸ್ತೆಯಾಗಿದ್ದು, ಮಾಗಡಿಯಿಂದ ಯಳವತ್ತಿ ಮಾರ್ಗವಾಗಿ ಧಾರವಾಡ ಜಿಲ್ಲೆ ಹಾಗೂ ಚಿಂಚಲಿ, ಕೋಳೀವಾಡ, ಅಣ್ಣಿಗೇರಿಗಳೀಗೆ ಮುಖ್ಯ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಅಂದಾಜಿನ ಪ್ರಕಾರ ಈ ಊರಿಗೆ ಕನಿಷ್ಠಪಕ್ಷ ಡಬಲ್ ರೋಡ್ ವ್ಯವಸ್ಥೆಯಾದರೂ ಬೇಕು. ಅಂಥಹದುರಲ್ಲಿ ಇರುವ ಸಿಂಗಲ್ ರಸ್ತೆಯನ್ನಾದರೂ ಗುಣಮಟ್ಟದಿಂದ ಮಾಡಬೇಕು. ಆದರೆ ಇದಕ್ಕೆ ಅಪವಾದ ಎಂಬಂತೆ ಈ ರಸ್ತೆಯನ್ನು ದುರಸ್ತಿಗೊಳಿಸಲು ಮುಂದಾಗುವ ರಾಜಕೀಯ ಹಿನ್ನಲೆಯುಳ್ಳ ಇಲ್ಲವೇ ಘಟಾನುಘಟಿ ಗುತ್ತಿಗೆದಾರರು ಈ ರಸ್ತೆಯನ್ನು ಟೆಂಡರ್ ಮೂಲಕ ಕಾಮಗಾರಿಯನ್ನು ತಮ್ಮದಾಗಿಸಿಕೊಂಡು ಉತ್ತಮ ರಸ್ತೆಯನ್ನು ಮಾಡಬೇಕಾದ ಸ್ಥಿತಿಯಲ್ಲಿ ಕಳಪೆ ಮಟ್ಟದ ಸಾಮಗ್ರಿಗಳನ್ನು ಉಪಯೋಗಿಸಿ ಕಳಪೆ ರಸ್ತೆಯನ್ನು ನಿರ್ಮಿಸಿ ಹಣ ಕೀಳುತ್ತಾರೆ. ಹಾಗಾದರೆ ಈ ಭಾಗದ ಜನತೆಗೆ ಬೇಕಾದ ಗುಣಮಟ್ಟದ ರಸ್ತೆ ಕಾಮಗಾರಿ ಕನಸು ನನಸಾಗುವುದು ಶತ ಸುಳ್ಳು ಎಂದು ಈ ಭಾಗದ ನಾಗರಿಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನೋಡಿದಾಗ  ನಿಜವಾಗಿಯೂ ಬೇಸರ ವ್ಯಕ್ತವಾಗುತ್ತದೆ.