ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕಿ ಟೋನಿ ಮಾರಿಸನ್ ನಿಧನ

 ವಾಷಿಂಗ್ಟನ್, ಆಗಸ್ಟ್ 7   ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮೆರಿಕ ಲೇಖಕಿ ಟೋನಿ ಮಾರಿಸನ್ ತಮ್ಮ 88 ನೇ ವಯಸ್ಸಿನಲ್ಲಿ ನ್ಯೂಯಾರ್ಕ್ನ್  ಮಾಂಟೆಫಿಯೋರ್ ವೈದ್ಯಕೀಯ ಕೇಂದ್ರದಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ. 

 'ಸ್ವಲ್ಪ ಅನಾರೋಗ್ಯದಿಂದ ವೈದ್ಯಕೀಯ ಕೇಂದ್ರದಲ್ಲಿ ದಾಖಲಾಗಿದ್ದ ಅವರು ತಮ್ಮ ಕುಟುಂಬದವರು ಮತ್ತು ಸ್ನೇಹಿತರು ಪಕ್ಕ ನಿಂತಿರುವಂತೆ ಶಾಂತಿಯಿಂದ ಇಹಲೋಕ ತ್ಯಜಿಸಿದ್ದಾರೆ.' ಎಂದು ಪ್ರಕಟಣೆ ತಿಳಿಸಿದೆ.   

  1993 ರಲ್ಲಿ ಮಾರಿಸನ್ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದಿದ್ದರು. ಅವರ 1987 ರ ಕಾದಂಬರಿ 'ಬಿಲೌವ್ಡ್' ಕೃತಿಗೆ ಪುಲಿಟ್ಜೆರ್ ಪ್ರಶಸ್ತಿ ದೊರೆತಿತ್ತು.  

 1996 ರಲ್ಲಿ ರಾಷ್ಟ್ರೀಯ ಪುಸ್ತಕ ಪ್ರತಿಷ್ಠಾನದ ಅತ್ಯುನ್ನತ ಪದಕ ದೊರೆತಿತ್ತು.  

  ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು 2012 ರಲ್ಲಿ ಅಧ್ಯಕ್ಷರ ಪದಕ ನೀಡಿ ಗೌರವಿಸಿದ್ದರು.  

 'ಟೋನಿ ಮಾರಿಸನ್ ಅವರು ರಾಷ್ಟ್ರೀಯ ಭಂಡಾರವಾಗಿದ್ದರು. ಉತ್ತಮ ಕಥೆಗಾರರಾಗಿದ್ದ ಅವರ ಬರವಣಿಗೆಯಲ್ಲಿ ಅವರ ವ್ಯಕ್ತಿತ್ವ ಕಾಣಬಹುದಿತ್ತು. ಅವರ ಬರವಣಿಗೆ ನಮ್ಮ ಆತ್ಮಸಾಕ್ಷಿಗೆ ಮತ್ತು ನಮ್ಮ ನೈತಿಕ ಕಲ್ಪನೆಗೆ ಸುಂದರವಾದ, ಅರ್ಥಪೂರ್ಣವಾದ ಸವಾಲು' ಎಂದು ಒಬಾಮ ಟ್ವೀಟ್ ಮಾಡಿದ್ದಾರೆ.