ಪ್ರತ್ಯೇಕ ರಾಜ್ಯ ಸಂಬಂಧ ವಿವಾದ ಸೃಷ್ಟಿ ಬೇಡ: ಯಡಿಯೂರಪ್ಪ


ಬೆಂಗಳೂರು 28: ಪ್ರತ್ಯೇಕ ರಾಜ್ಯ ಸಂಬಂಧ ವಿವಾದ ಸೃಷ್ಟಿಸುವುದು ಬೇಡ ಯಾರೂ ಪ್ರತ್ಯೇಕ ರಾಜ್ಯದ ಬಗ್ಗೆ ಪ್ರಸ್ತಾಪಿಸಬಾರದು, ರಾಜ್ಯ ಅಖಂಡ ಕನರ್ಾಟಕವೇ ಆಗಿರಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಹೇಳಿದರು. ಬೆಂಗಳೂರಿನಲ್ಲಿಂದು ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ರೀತಿ ತಿಳಿಸಿದರು.  

ರಾಜ್ಯ ಅಭಿವೃದ್ದಿಯೇ ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ವಿಕಾಸಸೌಧ ಸ್ಥಾಪನೆ ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗಿದೆ. ಆದರೆ, ಅಧಿಕಾರದ ಸಲುವಾಗಿ  ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಅವರ ಕುಟುಂಬ ರಾಜ್ಯವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದರು. 

ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯ ಅಭಿವೃದ್ದಿಗೆ ಪರಿಹಾರವಲ್ಲಾ, ಅಭಿವೃದ್ದಿಗಾಗಿ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸುವವು. ಆ ಭಾಗದ ಜನತೆ ಪ್ರತ್ಯೇಕ ರಾಜ್ಯದ ಪರ ಧ್ವನಿ ಎತ್ತದಂತೆ ಯಡಿಯೂರಪ್ಪ ಮನವಿ ಮಾಡಿಕೊಂಡರು.

ವಿಧಾನಸೌಧಕ್ಕೆ ಮಾಧ್ಯಮಗಳ ನಿರ್ಬಂಧ ಕುರಿತು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ. ಎಸ್. ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಕರ್ಾರಕ್ಕೆ ಹಗರಣಗಳು ಬಯಲಾಗುತ್ತವೆ ಎಂಬ ಭಯದಿಂದ ಕುಮಾರಸ್ವಾಮಿ ಈ ರೀತಿಯ ನಿಧರ್ಾರ ಕೈಗೊಳ್ಳಲು ಮುಂದಾಗುತ್ತಿದ್ದಾರೆ. ಮುಖ್ಯಮಂತ್ರಿ ಸವರ್ಾಧಿಕಾರಿಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ.

ಪ್ರತ್ಯೇಕ ರಾಜ್ಯ ಬೇಡಿಕೆಗೆ ಬಿಜೆಪಿ ಕುಮ್ಮಕ್ಕು: ಡಿಕೆಶಿ 

ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸಕರ್ಾರದ ಅಭಿವೃದ್ದಿ ಕಾರ್ಯಗಳನ್ನು ಸಹಿಸದೆ  ಬಿಜೆಪಿ ಪ್ರತ್ಯೇಕ ಉತ್ತರ ಕನರ್ಾಟಕ ರಾಜ್ಯದ ಬೇಡಿಕೆಗೆ ಕುಮ್ಮಕ್ಕು ನೀಡುತ್ತಿದೆ ಎಂದು  ವೈದ್ಯಕೀಯ ಮತ್ತು ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕನರ್ಾಟಕಕ್ಕೆ ಅನುದಾನ ಹಂಚಿಕೆಯ ವಿಷಯದಲ್ಲಿ ತಾರತಮ್ಯ ಮಾಡಲಾಗಿದೆ ಎನ್ನುವ ನೆಪವೊಡ್ಡಿ ರಾಜ್ಯವನ್ನು ಇಬ್ಬಾಗ ಮಾಡುವಂತಹ ಕೃತ್ಯಕ್ಕೆ ಬಿಜೆಪಿ  ಕೈ ಹಾಕಿದೆ. ಅದು ಎಂದಿಗೂ ಫಲಿಸುವುದಿಲ್ಲ ಎಂದು ಹೇಳಿದರು. ಸಾಲಮನ್ನಾ ವಿಷಯವಾಗಿ ಬಿಜೆಪಿ ನಡೆಸಿರುವ ಪಾದಯಾತ್ರೆಯಲ್ಲಿ ಯಾವೊಬ್ಬ ಹಳ್ಳಿಗಾಡಿನ ರೈತರು ಇರಲಿಲ್ಲ. ಎಲ್ಲ ಬಿಜೆಪಿ ಕಾರ್ಯಕರ್ತರೆ, ಹಸಿರು ಶಾಲು ಹಾಕಿದಾಕ್ಷಣ ರೈತರಾಗಲು ಸಾಧ್ಯವಿಲ್ಲ ಎಂದು ಹೇಳಿದರು. ರಾಜ್ಯದ ರೈತರಿಗಾಗಿ ಕೇಂದ್ರಸಕರ್ಾರ ನಯಾ ಪೈಸೆಯನ್ನು ಬಿಡುಗಡೆ ಮಾಡಿಲ್ಲ. ರಾಜ್ಯಸಕರ್ಾರ 40 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ ಎಂದು ಡಿ. ಕೆ. ಶಿವಕುಮಾರ್ ತಿಳಿಸಿದರು.

ಶ್ರೀರಾಮುಲು ಹೇಳಿಕೆಗೆ ಬಿಜೆಪಿಯಲ್ಲಿಯೇ ಆಕ್ಷೇಪ

ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯದ ಕೂಗಿಗೆ ಕಿಚ್ಚು ಹಚ್ಚಿದ ಬಿಜೆಪಿ ಶಾಸಕ ಬಿ. ಶ್ರೀರಾಮುಲು ಅವರ ಹೇಳಿಕೆಗೆ ಬಿಜೆಪಿ ನಾಯಕರಲ್ಲಿಯೇ ಆಕ್ಷೇಪ ವ್ಯಕ್ತವಾಗಿದೆ. ನಿನ್ನೆ ಸಂಸದೆ ಶೋಭಾ ಕರಂದ್ಲಾಜೆ ಪ್ರತ್ಯೇಕ ರಾಜ್ಯ ರಚನೆ ಬೇಡಿಕೆ ಸರಿಯಲ್ಲ ಎಂದಿದ್ದರೆ ಇಂದು ಬೆಜೆಪಿಯ ಮತ್ತೊಬ್ಬ ಪ್ರಮುಖ ನಾಯಕ ಶಾಸಕ ಸುರೇಶ್ ಕುಮಾರ್, ಕನರ್ಾಟಕವನ್ನು ವಿಭಜಿಸುವ ಮಾತು ಸರಿಯಲ್ಲ, ಪ್ರತ್ಯೇಕ ರಾಜ್ಯ ಯಾವ ದೃಷ್ಟಿಯಿಂದಲೂ ಒಳಿತಲ್ಲ. ವಿವೇಚನೆಯಿಂದ ಕೂಡಿದ ಮಾತುಗಳನ್ನು ರಾಜಕೀಯ ನಾಯಕರಿಂದ ನಾಡು ಅಪೇಕ್ಷಿಸುತ್ತದೆ ಎಂದು ಹೇಳಿದ್ದಾರೆ. ರಾಜಕೀಯ ನಾಯಕರಾದ ಶ್ರೀರಾಮುಲು, ಉಮೇಶ್ ಕತ್ತಿ ಮೊದಲಾದವರು ಕರೆ ನೀಡಲಾಗಿರುವ ಬಂದ್ಗೆ ಸಾರ್ವಜನಿಕವಾಗಿ ಬೆಂಬಲ ಸೂಚಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ವಿರುದ್ಧ ಹರಿಹಾಯುತ್ತಿದ್ದಾರೆ. ಕನ್ನಡದಲ್ಲಿ ಡಬ್ಬಿಂಗ್ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದ, ಹಿಂದಿ ಭಾಷೆ ಹೇರಿಕೆ ವಿರೋಧಿ ಸಂಘಟನೆಗಳು ಮತ್ತು ಕಾರ್ಯಕರ್ತರು ಪ್ರತ್ಯೇಕ ರಾಜ್ಯ ರಚನೆಯ ಒತ್ತಾಯವನ್ನು ವಿರೋಧಿಸಿ ಆನ್ ಲೈನ್ ನಲ್ಲಿ ಅಖಂಡ ಕನರ್ಾಟಕಕ್ಕೆ ಒತ್ತಾಯಿಸುತ್ತಿದ್ದಾರೆ. ಉತ್ತರ ಕನರ್ಾಟಕಕ್ಕೆ ಪ್ರತ್ಯೇಕತೆ ಕೂಗಿಗೆ ಬಿಜೆಪಿ ಮತ್ತು ಆರ್ ಎಸ್ಎಸ್ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ. ಶ್ರೀರಾಮುಲು ಹೇಳಿಕೆ ನಂತರ ಟ್ವೀಟಿಗರ ಆಕ್ರೋಶ ಇನ್ನೂ ಹೆಚ್ಚಾಗಿದೆ. ಶ್ರೀರಾಮುಲು ಅವರು ಮತಗಳನ್ನು ಸೆಳೆಯಲು ಪ್ರತ್ಯೇಕ ರಾಜ್ಯ ರಚನೆಗೆ ಪ್ರಯತ್ನಿಸುತ್ತಿದ್ದಾರೆ, ಮೋದಿಯವರೇ, ಅಮಿತ್ ಶಾ, ಬಿಎಸ್ ವೈಯವರೇ, ಕೆಲವರು ಧರ್ಮ ಒಡೆಯಲು ಹೋಗಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಅಂತಹದ್ದೇ ಪರಿಸ್ಥಿತಿ ಮುಂದೆ ನಿಮ್ಮ ಪಕ್ಷಕ್ಕೆ ಕೂಡ ಬರಬಹುದು ಎಂದು ಮತ್ತೊಬ್ಬರು ಟ್ವೀಟ್ ನಲ್ಲಿ ಎಚ್ಚರಿಸಿದ್ದಾರೆ. ಕನರ್ಾಟಕವನ್ನು ವಿಭಜಿಸುವ ಮಾತು ಸಲ್ಲದು. ಪ್ರತ್ಯೇಕ ರಾಜ್ಯ ಯಾವ ದೃಷ್ಟಿಯಿಂದಲೂ ಒಳಿತಲ್ಲ. ವಿವೇಚನೆಯಿಂದ ಕೂಡಿದ ಮಾತುಗಳನ್ನು ರಾಜಕೀಯ ನಾಯಕರಿಂದ ನಾಡು ಅಪೇಕ್ಷಿಸುವುದನ್ನು ಯಾರೂ ಉಪೇಕ್ಷಿಸುವುದು ಬೇಡ. ಪಬ್ಲಿಸಿಟಿಗಿಂತ ನಾಡಿನ ಹಿತ ಮುಖ್ಯ ಮತ್ತು ಆ ಹಿತ ಏಕೀಕೃತ ಕನರ್ಾಟಕದಲ್ಲಿದೆ.