ಲೋಕದರ್ಶನ ವರದಿ
ಮೋಳೆ: ನಾನು ಬಿಜೆಪಿ ಪಕ್ಷದ ಪ್ರಥಮಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬ ವದಂತಿ ಹಬ್ಬಿದ್ದು ಈ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಕಾಗವಾಡ ಮತಕ್ಷೇತ್ರದ ಮಾಜಿ ಶಾಸಕ ರಾಜು ಕಾಗೆ ಸ್ಪಷ್ಟಪಡಿಸಿದರು.
ಅವರು ಸೋಮವಾರ ಸಂಜೆ ಪತ್ರಕರ್ತರೊಡನೆ ಮಾತನಾಡುವಾಗ ಈ ವಿಷಯ ತಿಳಿಸಿದರು. ಅನರ್ಹ ಶಾಸಕರ ಪ್ರಕರಣ ಇನ್ನು ನ್ಯಾಯಾಲಯದಲ್ಲಿದ್ದು, ಅವರ ತೀಪರ್ು ಬಂದ ನಂತರ ನಾನು ನನ್ನ ನಿದರ್ಾರವನ್ನು ಪ್ರಕಟಿಸುವವನಿದ್ದೇನೆ.
ಆದರೆ ಇಂದು ಕೆವ ಇಲೇಕ್ಟ್ರಾನಿಕ ಮೆಡಿಯಾ ಹಾಗೂ ಸಾಮಾಜಿಕ ಜಾಲತಾನಗಳಲ್ಲಿ ರಾಜು ಕಾಗೆ ಬಿಜೆಪಿಗೆ ರಾಜಿನಾಮೆ ಎಂಬ ಸುದ್ದಿ ಹರಡಿದ್ದು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟ ಪಡಿಸಿದರು.
ಕಳೆದ 20 ವರ್ಷಗಳಿಂದ ಸಾವಿರಾರು ಕಾರ್ಯಕರ್ತರು ಹಾಗೂ ನಾವು ಕೂಡಿಕೊಂಡು ಬಿಜೆಪಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿ ನಾಲ್ಕುಬಾರಿ ಶಾಸಕನಾಗಿ ಆಯ್ಕೆಯಾಗಿ ಹಲವಾರು ಜನಪರ ಕಾರ್ಯಗಳನ್ನು ಮಾಡಿದ ತೃಪ್ತಿ ನನಗಿದೆ. ಆದರೆ ಈಗ ಬದಲಾದ ರಾಜಕೀಯ ಪರಿಸ್ಥಿತಿಗನುಗುಣವಾಗಿ ನನ್ನನ್ನೇ ನಂಬಿದ 60 ಸಾವಿರ ಕಾರ್ಯಕರ್ತರಿದ್ದಾರೆ.
ಅವರು ಕಳೆದ 20 ವರ್ಷಗಳಿಂದ ವಿರೋಧ ಪಕ್ಷದ ಅಭ್ಯಥರ್ಿಯ ಜೊತೆಗೆ ಸಂಘರ್ಷಗಳನ್ನು ಮಾಡುತ್ತಾ ಬಂದಿದ್ದೇವೆ, ಈಗ ಒಮ್ಮೆಲೆ ಅನರ್ಹ ಶಾಸಕರು ಬಿಜೆಪಿಗೆ ಬಂದರೆ ಅವರ ಸಂಗಡ ನಮ್ಮ ಹೊಂದಾನಿಕೆ ಆಗುವುದಿಲ್ಲ ಎಂದು ನಮ್ಮ ಕಾರ್ಯಕರ್ತರು ಹೇಳುತ್ತಿದ್ದು, ನಿಮಗೆ ಬಿಜೆಪಿಯಿಂದ ಟಿಕೇಟ್ ಕೊಡದಿದ್ದರೆ ನೀವು ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧ ಂದು ನಮ್ಮ ಕಾರ್ಯಕರ್ತರು ಹೇಳಿರುವದರಿಂದ ಪಕ್ಷ ತೊರೆಯುವ ಆಲೋಚನೆ ಮಾಡಿದ್ದೇನೆ ಹೊರತು ಇನ್ನು ಬಿಜೆಪಿ ಪಕ್ಷವನ್ನು ಬಿಟ್ಟಿಲ್ಲ ಎಂದು ಸ್ಪಷ್ಟ ಪಡಿಸಿದರು. ಸುಪ್ರಿಂಕೋರ್ಟ ತೀಪರ್ು ಬಂದ ನಣತರ ತಮ್ಮೆಲ್ಲ ಮಾದ್ಯಮ ಮಿತ್ರರನ್ನು ಕರೆದು ನನ್ ನಿದರ್ಾರ ಪ್ರಕಟಿಸುವುದಾಗಿ ರಾಜು ಕಾಗೆ ಹೇಳಿದರು.