ಪಂಚ ಗ್ಯಾರಂಟಿ ಯೋಜನೆಯಿಂದ ಯಾರು ವಂಚಿತ ರಾಗಬಾರದು: ನಾಗರಾಜ ಮಡಿವಾಳರ

ಪಂಚ ಗ್ಯಾರಂಟಿ ಯೋಜನೆಯಿಂದ ಯಾರು ವಂಚಿತ ರಾಗಬಾರದು: ನಾಗರಾಜ ಮಡಿವಾಳರ No one should be deprived of the Pancha Guarantee Scheme: Nagaraja Madiwala

ಲಕ್ಷ್ಮೇಶ್ವರ 26: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವ ಪೂರ್ವ ಪಂಚ ಗ್ಯಾರೆಂಟಿ ಯೋಜನೆಯಿಂದ ರಾಜ್ಯದ ಬಡ ಜನರ ಬದುಕು ಬದಲಾಗಿದೆ ಇಂಥ ಮಹತ್ತರವಾದ ಪಂಚ ಗ್ಯಾರಂಟಿ ಯೋಜನೆಯಿಂದ ಯಾರು ವಂಚಿತರಾಗಬಾರದು ಎಲ್ಲರಿಗೂ ಯೋಜನೆಯ ಲಾಭ ದೊರಕಬೇಕು ಎಲ್ಲರ ಬದುಕಿನ ಗುಣಮಟ್ಟ ಬದಲಾಗಬೇಕು ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ನಾಗರಾಜ ಮಡಿವಾಳರ ಹೇಳಿದರು. 

ಅವರು ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಆಹಾರ ಸರಬರಾಜ ವಿದ್ಯುತ್ ಸರಬರಾಜ ಸಾರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉದ್ಯೋಗಾಧಿಕಾರಿಗಳ ಪ್ರಗತಿ ಪರೀಶೀಲನೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿ ಅವರು ರಾಜ್ಯ ಸರ್ಕಾರದ ಮಹತ್ತರವಾದ ಈ ಪಂಚ ಗ್ಯಾರಂಟಿ ಯೋಜನೆಯ ಬೇರೆ ಬೇರೆ ರಾಜ್ಯಗಳಲ್ಲಿ ಸಹ ಮಾದರಿಯಾಗುತ್ತಿದೆ. ಇಂಥ ಮಹತ್ತರ ಯೋಜನೆಯಿಂದ ಯಾರು ವಂಚಿತರಾಗಬಾರದು, ಎಲ್ಲರಿಗೂ ಯೋಜನೆಯ ಲಾಭ ಎಲ್ಲರಿಗೂ ದೊರಕಬೇಕು ಎಲ್ಲಾ ಅಧಿಕಾರಿಗಳು ಇದರ ಬಗ್ಗೆ ಹೆಚ್ಚು ಆಸಕ್ತಿಯನ್ನು ವಹಿಸಬೇಕು ಎಂದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ, ಕೃಷ್ಣಪ್ಪ ಧರ್ಮರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೃತ್ಯುಂಜಯ ಗುಡ್ಡದನವೇರಿ, ಸಾರಿಗೆ ಇಲಾಖೆ ಸವಿತಾ ಆದಿ, ಆಹಾರ ಸರಬರಾಜು ಇಲಾಖೆಯ ಜಗದೀಶ ಕುರುಬರ, ಹೆಸ್ಕಾಂ ಇಲಾಖೆ ಆಂಜನೇಯಪ್ಪ ಪಂಚ ಗ್ಯಾರಂಟಿ ಯೋಜನಾ ಸಮಿತಿಯ ಸದಸ್ಯರಾದ ಶಿವರಾಜಗೌಡ ಪಾಟೀಲ್, ಶಶಿಕಲಾ ಬಡಿಗೇರ , ರಮೇಶ್ ಬಾರ್ಕೆರ್, ಗಂಗಪ್ಪ ಗಂಗಣ್ಣವರ, ಖಾದರ್ ಭಾಷಾ, ರಿತ್ತಿ ರಮಜಾನಸಾಬ ನದಾಫ್, ಹಸನ ಜಂಗ್ಲಿ ಸೇರಿದಂತೆ ಪಂಚ ಗ್ಯಾರಂಟಿಯ ಯೋಜನೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.