ಫೈನಲ್ ಹಣಾಹಣಿಯಲ್ಲಿ ಯಾರೂ ಸೋಲಲಿಲ್ಲ: ವಿಲಿಯಮ್ಸನ್

ವೆಲ್ಲಿಂಗ್ಟನ್, ಜು 15 (ಯುಎನ್ಐ) ಕ್ರಿಕೆಟ್ನ್   ಮಹತ್ವದ ಟೂರ್ನಿಯಾದ ಐಸಿಸಿ ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾದ ನೋವಿನಿಂದ ನ್ಯೂಜಿಲೆಂಡ್ ಚೇತರಿಸಿಕೊಳ್ಳುತ್ತಿದ್ದು, ಫೈನಲ್ ಹಣಾಹಣಿಯಲ್ಲಿ ಯಾರೂ ಸೋಲು ಅನುಭವಿಸಿಲ್ಲ ಎಂದು ನಾಯಕ ಕೇನ್ ವಿಲಿಯಮ್ಸನ್ ಹೇಳಿದ್ದಾರೆ.  ಭಾನುವಾರದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ, ಇಂಗ್ಲೆಂಡ್ ವಿರುದ್ಧ ಬೌಂಡರಿ ನಿಯಮದ ಅನುಸಾರ ಸೋಲನುಭವಿಸಿತ್ತು. ಐಸಿಸಿಯ ಈ ನಿಯಮದ ಬಗ್ಗೆ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಟೀಕಿಸಿದ್ದರು.  ಟೂರ್ನಿಯ ಅಂತ್ಯದಲ್ಲಿ ನಾವು ಗೆಲುವು ಹಾಗೂ ಸೋಲಿನಿಂದ ಬೇರೆಯಾಗಲಿಲ್ಲ. ಯಾರೂ ಕೂಡ ಸೋಲಲಿಲ್ಲ. ಆದರೆ, ವಿಶ್ವಕಪ್ ವಿಜೇತರು ಮಾತ್ರ ಇದ್ದರು ಎಂದು ವಿಲಿಯಮ್ಸನ್ ಹೇಳಿದ್ದಾರೆ.  ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾದರೂ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಅವರ ತಂಡ ವ್ಯಾಪಕವಾಗಿ ಪ್ರಶಂಸೆಗೆ ಒಳಗಾಗಿತ್ತು. ಟೂರ್ನಿಯ ನೀತಿ ನಿಯಮಗಳಿಗೆ ನಾವು ಮೊದಲೇ ಸಹಿ ಹಾಕಿದ್ದೆವು. ಹಾಗಾಗಿ, ಆ ಸೋಲನ್ನು ಒಪ್ಪಿಕೊಳ್ಳಬೇಕಾಯಿತು ಎಂದು ವಿಲಿಯಮ್ಸನ್ ಹೇಳಿಕೊಂಡರು.  ಭಾನುವಾರ ನಡೆದಿದ್ ಫೈನಲ್ ಹಣಾಹಣಿಯಲ್ಲಿ ಪಂದ್ಯ ಟೈ ಆಗಿತ್ತು. ನಂತರ, ಸೂಪರ್ ಓವರ್ನಲ್ಲೂ ಟೈ ಆದ ಬಳಿಕ 'ಬೌಂಡರಿ ನಿಯಮ'ದ ಅನುಸಾರ ಇಂಗ್ಲೆಂಡ್ ಚಾಂಪಿಯನ್ ಎಂದು ಪರಿಗಣಿಸಲಾಗಿತ್ತು.  ಈ ನಿಯಮದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮೊದಲ ಬಾರಿ ಪ್ರತಿಕ್ರಿಯಿಸಿ, "ನೀವು ಈ ಪ್ರಶ್ನೆಯನ್ನು ಕೇಳಬಹುದು ಎಂದೂ ನಾನೆಂದೂ ಯೋಚಿಸಿರಲಿಲ್ಲ. ಹಾಗಾಗಿ, ನಾನು ಅದಕ್ಕೆ ಉತ್ತರಿಸಬೇಕೆಂದು ನಾನು ಭಾವಿಸಿರಲಿಲ್ಲ" ಎಂದು ನಗು ಮೊಗದಲ್ಲಿ ಎಂದು ಹೇಳಿದ್ದರು.  ಭಾವನೆಗಳು ಕಚ್ಚಾ ಇದ್ದರೂ, ಎರಡು ತಂಡಗಳು ನಿಜವಾಗಿಯೂ ಅತ್ಯುತ್ತಮವಾಗಿ ಹೋರಾಟ ನೀಡಿದ್ದವು. ಈ ಕ್ಷಣವನ್ನು ತಲುಪುವುದು ನಿಜವಾಗಿಯೂ ಕಷ್ಟ. "ವಿಜೇತ ಮತ್ತು ಸೋತವರನ್ನು ಬೇರ್ಪಡಿಸಲು ಎರಡು ಬಾರಿ ಪ್ರಯತ್ನಿಸಿದಾಗಲೂ ಸಾಧ್ಯವಾಗಿರಲಿಲ್ಲ. ಇದು ನಿಮಗೂ ತಿಳಿದಿದೆ" ಎಂದು ಜಗತ್ತಿನ ಪ್ರಶಂಸೆಗೆ ಪಾತ್ರರಾದ ವಿಲಿಯಮ್ಸನ್ ನುಡಿದರು.