ಬೆಂಗಳೂರು, ಆ 17 ಯಾರೂ ಯಾವ ವಿಚಾರಕ್ಕೆ ದೂರವಾಣಿ ಕದ್ದಾಲಿಕೆ ಮಾಡಿದ್ದಾರೆ ಎಂಬುದು ತಮಗೆ ಗೊತ್ತಿಲ್ಲ, ತಮ್ಮ ಬಳಿ ಫೋನೇ ಇಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಆಪ್ತ ಸಹಾಯಕರ ಮೊಬೈಲ್ ಸಂಭಾಷಣೆ ಕದ್ದಾಲಿಕೆ ಮಾಡಲಾಗಿದೆ ಎಂಬ ಸುದ್ದಿ ಇದೆ. ಈ ಬಗ್ಗೆ ಸರ್ಕಾರ ಯಾವ ರೀತಿ ತನಿಖೆ ನಡೆಸುತ್ತದೆ ಎಂಬುದನ್ನು ನಿರ್ಧರಿಸಿ ಸ್ಪಷ್ಟಪಡಿಸಲಿ. ಸತ್ಯ ಹೊರಗೆ ಬರಲಿ ಎಂದರು.