ಮಧ್ಯವ್ಯಶನಕ್ಕೆ ಯಾರೂ ಕಾರಣರಲ್ಲ : ಸಹವಾಸ ದೋಷ, ಸಂಸ್ಕೃತಿ ವೀಹೀನತೆ - ಮರುಳಶಂಕರ ಶ್ರೀಗಳು

ಮಧ್ಯವ್ಯಶನಕ್ಕೆ  ಯಾರೂ ಕಾರಣರಲ್ಲ : ಸಹವಾಸ ದೋಷ, ಸಂಸ್ಕೃತಿ ವೀಹೀನತೆ -  ಮರುಳಶಂಕರ ಶ್ರೀಗಳು  No one is responsible for addiction: bad company, poor culture - Marulashankar Sri

 ರಾಣೆಬೆನ್ನೂರು 20: ಭಾರತ ದೇಶ ಮತ್ತು ಭಾರತೀಯರು  ಆಧ್ಯಾತ್ಮಿಕ ಮತ್ತು ಸಂಸ್ಕಾರದಿಂದ ಸಂತೃಪ್ತಿಯನ್ನು ಕಂಡು ಜೀವನ ಸಾರ್ಥಕತೆಯನ್ನು ಕಂಡುಕೊಂಡವರಾಗಿದ್ದಾರೆ. ಇಂದು ಸಮಾಜದಲ್ಲಿ   ಕೆಲವೇ ಕೆಲವರು ತಮ್ಮ ಬದುಕಿನಲ್ಲಿ ಚಟವಾಗಿ ಅಳವಡಿಸಿಕೊಂಡಿರುವ ಮಧ್ಯವ್ಯಶನಿಗಳಿಂದಾಗಿ  ಸಮಾಜದ ಸ್ವಾಸ್ಥ್ಯ ಕೆಡುವಂತಾಗಿದೆ ಎಂದು ಗಂಗಾಪುರ ಗ್ರಾಮದ ಸಿದ್ಧಾರೂಢ ಆಶ್ರಮದ ಶ್ರೀ ಮರುಳಶಂಕರ ಸ್ವಾಮಿಗಳು ನುಡಿದರು. ಅವರು, ಬುಧವಾರ ಕಾಕಿ ಜನ ಸೇವಾ ಸಂಸ್ಥೆ ಗಣೇಶೋತ್ಸವ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ ಬೆಳ್ತಂಗಡಿ ಅಖಿಲ ಕ. ಜ. ಜಾಗ್ರತಿ ವೇದಿಕೆ, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್‌ ಇತರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ, 2058ನೇ ಮಧ್ಯವರ್ಜನ ಶಿಬಿರದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ತಂದೆ ತಾಯಿ ತಮ್ಮ ಉಜ್ಜಲ ಭವಿಷ್ಯಕ್ಕಾಗಿ ನಿರಂತರ ಶ್ರಮಿಸುವವರಾಗಿದ್ದಾರೆ. ಬೆಳೆದು ದೊಡ್ಡವರಾದ ನಂತರ ಇಂತಹ ಚಟಕ್ಕೆ ಬಲಿಯಾಗಿ, ಸಮಾಜಕ್ಕೆ ಹೊರೆಯಾಗಿ,ಭೂಮಿಗೆ ಭಾರವಾಗಿ ಬದುಕಬೇಕಾದ ತಾವುಗಳು ತಮ್ಮ ಜೀವನ ಪುನಹ ಉಜ್ಜಲಗೊಳಿಸಿಕೊಳ್ಳಲು ಇದೊಂದು ಅವಕಾಶ ಸಿಕ್ಕಿದೆ. ಸಮಾಜದಲ್ಲಿ ಇತರರಂತೆ ತಾವು ಸಹ, ಗೌರವಯುತವಾಗಿ ಬದುಕಿ, ಬಾಳಿ ಜನ್ಮ ಸಾರ್ಥಕತೆ ಪಡಿಸಿಕೊಳ್ಳಲು ಮುಂದಾಗಬೇಕು ಎಂದರು. ಶಿಬಿರ ಉದ್ಘಾಟಿಸಿ ಚಾಲನೆ ನೀಡಿದ ಡಿ. ವೈ. ಎಸ್‌. ಪಿ. ಲೋಕೇಶ್ ಎನ್‌. ಅವರು ಶ್ರೀ ಕ್ಷೇತ್ರವು ತನ್ನ  ಸಾಮಾಜಿಕ ಕಳಕಳಿಯೊಂದಿಗೆ ಆಕಸ್ಮಿಕ, ಏನೇನೋ ಪರಿಸ್ಥಿತಿಯ ಒತ್ತಡದ  ಕಾರಣಗಳಿಂದ ದಾರಿ ತಪ್ಪಿದವರ ಹೊಸ ಬದುಕಿಗೆ ಆಶಾಕಿರಣವಾಗಿ ತನ್ನ ಕರ್ತವ್ಯ ನಿರ್ವಹಿಸಲು ಬಂದಿದೆ. ಭವಿಷ್ಯದ ಬದುಕಿಗೆ ಇಂತಹ ಶಿಬಿರಗಳು ಆಶಾ ಕಿರಣ ಮೂಡಿಸುತ್ತದೆ ಅದರ ಪ್ರಯೋಜನ ಪಡೆಯಬೇಕು ತಾವು ಸಹ ತಪ್ಪಿದ ತಾಳ ಮತ್ತು ಜೀವನ ಸರಿಪಡಿಸಿಕೊಳ್ಳಬೇಕು ಇದೊಂದು ಅಪೂರ್ವ ಅವಕಾಶ ಎಂದರು.

ತಮ್ಮ ಪೊಲೀಸ್ ವೃತ್ತಿ ಬದುಕಿನಲ್ಲಿ ದಾರಿ ತಪ್ಪಿದವರ ಬಗ್ಗೆ ಕೇವಲ ಮಹಿಳೆಯರಿಂದ ಮಾತ್ರ ನಿತ್ಯವೂ  ಆರೋಪಗಳ ದೂರುಗಳು ಬರುತ್ತಿವೆ. ನಮ್ಮಂತೆ ಬದುಕಿ, ಬಾಳಬೇಕು ಎನ್ನುವ ಮಹಾದಾಸೆ ಹೊಂದಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿಗಳ ಈ ಕಾರ್ಯವು  ಅತ್ಯಂತ ಸರಳವಾಗಿವೆ  ಸರ್ಕಾರಗಳು ಸಹ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ  ಎಂದರು. ಮಧ್ಯವ್ಯಶನಕ್ಕೆ ಬಲಿಯಾಗಿರುವ ಯುವಕರು ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರವಂತರಾಗಿ ತಮ್ಮ ಭವಿಷ್ಯದ ಜೀವನವನ್ನು ಪರಿಪೂರ್ಣತೆ ಕಂಡು ಕೊಂಡಾಗ  ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಿ, ಜೀವನ ಸಾರ್ಥಕತೆ ಪಡಿಸಿಕೊಳ್ಳಲು ಮುಂದಾಗಬೇಕು ಎಂದು ಅವರು ಶಿಭಿರಾರ್ಥಿಗಳಿಗೆ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜನಜಾಗ್ರತಿ  ವೇದಿಕೆ ಅಧ್ಯಕ್ಷ ಬಸವರಾಜ ಹುಲ್ಲತ್ತಿ ಅವರು, ಕಳೆದ 20 ವರ್ಷಗಳಿಂದ ತಾವು ಈ ಯೋಜನೆ ಸೇವಾಕರ್ತರಾಗಿ ಕೆಲಸ ಮಾಡುತ್ತಿದ್ದು, ಇದರಿಂದ ಮಧ್ಯ ವ್ಯಸನಿಗಳ ಬಾಳು ಸುಂದರಗೊಳಿಸಿದ ಆತ್ಮ ತೃಪ್ತಿ ತಮಗೆ ಮತ್ತು ಸಂಸ್ಥೆಯ ಎಲ್ಲರಿಗೂ ಇದೆ.

ಇಲ್ಲಿ ಯಾರಿಗೂ ಓಷಧಿ ಗುಳಿಗೆ, ಚುಚ್ಚುಮದ್ದು ನೀಡಿ ಗುಣಪಡಿಸುವುದಿಲ್ಲ ಕೇವಲ ಮನಃಪರಿವರ್ತನೆ ಮೂಲಕ ಹೊಸ ದಿಕ್ಕಿನತ್ತ ಕೊಂಡೊಯ್ಯಲಾಗುತ್ತಿದೆ ಎಂದರು. ಮಧ್ಯವರ್ಜನ ಶಿಬಿರದ  ಸಂಚಾಲನಾ ಸಮಿತಿ ಅಧ್ಯಕ್ಷ, ಮಂಜುನಾಥ ಗೌಡಶಿವಣ್ಣನವರ ಅವರು, ಇಲ್ಲಿ ನಡೆಯುತ್ತಿರುವ ಪವಿತ್ರ ಕಾರ್ಯದಲ್ಲಿ ಪಾಲ್ಗೊಳ್ಳುವುದೇ ವಿಶೇಷ ಅನುಭೂತಿ. ನಮ್ಮೊಂದಿಗೆ ನಮ್ಮೊಟ್ಟಿಗೆ ಇರುವವರೇ ಇಂದು ನೂರಾರು ಸಂಖ್ಯೆಯಲ್ಲಿ ಮಧ್ಯವ್ಯಶನಕ್ಕೆ ದಾಸರಾಗಿ ತಮ್ಮತನವನ್ನೇ ತಾವು ಕಳೆದುಕೊಂಡಿದ್ದಾರೆ. ಇದರಿಂದ ತಮಗೆ ಮಾನಸಿಕವಾಗಿ ನೋವಾಗಿದೆ. ಅವರ ಬಾಳು ಹಸನಾಗಬೇಕು ಅದೇ ನಮ್ಮ ಮಹಾದಾಸೆ ಎಂದರು.