ಕಬ್ಬು ಕಳಿಸಲು ಅವಸರ ಬೇಡ : ರಾಜು ಗಡ್ಡನವರ್
No need to rush to send sugarcane: Raju Gaddanavar
ಯಮಕನಮರಡಿ, 11 : ಸಮೀಪದ ಹತ್ತರಗಿ ಕಾರಿಮಠದಲ್ಲಿ ಸೋಮವಾರ ದಿನಾಂಕ10 ರಂದು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿ ಭಾಗದ ಕಬ್ಬು ಬೆಳೆಗಾರರ ರೈತರ ಸಭೆಯು ನಡೆಯಿತು ಸಭೆಯಲ್ಲಿ ರೈತರ ಮುಖಂಡ ರಾಜು ಗಡ್ಡನವರ್ ಸಕ್ಕರೆ ಕಾರ್ಖಾನೆ ಮಾಲೀಕರ ಕುರಿತು ಮಾತನಾಡುತ್ತಾ ಮನವಿ ಮಾಡಿದರು.
ಸಭೆಯ ದಿವ್ಯ ಸಾನಿಧ್ಯ ವಹಿಸಿದ ಹತ್ತರಗಿ ಕಾರಿ ಮಠದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿ ರೈತರ ಹಿತಕ್ಕಾಗಿ ಬರುವ 14 ಅಥವಾ 15ರಂದು ಗಡಹಿಂಗ್ಲಜ್ ತಾಲೂಕಿನ ನೆಸರಿಯಲ್ಲಿ ಬೃಹತ್ ರೈತರ ಮೇಳ ಮತ್ತು ರ್ಯಾಲಿ ನಡೆಯಲಿದ್ದು ಕರ್ನಾಟಕ ಗಡಿಭಾಗದ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಗಿಂತ ಹೆಚ್ಚಿನ ದರ ಸಿಗಬೇಕೆಂಬ ನಿಟ್ಟಿನಲ್ಲಿ ಈ ಮೇಳದ ಆಯೋಜಿಸಲಾಗುವುದು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಂದ ಹೆಚ್ಚಿನ ದರ ಸಿಗುತ್ತಿರುವುದರಿಂದ ಕಬ್ಬು ಬೆಳೆಗಾರರು ತಮ್ಮ ಕಬ್ಬು ನಿರ್ವಹಿಸುತ್ತಿದ್ದಾರೆ ಐದು ದಿನಗಳ ಮೆಟ್ಟಿಗೆ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳಿಸಿಕೊಡಬಾರದು ಎಂಬುವುದೇ ಮಹಾರಾಷ್ಟ್ರದ ಗಡಿ ಭಾಗದ ರೈತರ ಸಂಘಟನೆಯು ನಿಲುವಾಗಿದೆ ಮಹಾರಾಷ್ಟ್ರ ಭಾಗದಲ್ಲಿ ರಿಕವರಿ ಹೆಚ್ಚಿದ್ದು ಇಳುವರಿ ಇಲ್ಲ ಕರ್ನಾಟಕ ಭಾಗದಲ್ಲಿ ಇಳುವರಿ ಹೆಚ್ಚಿದ್ದು ರಿಕವರಿ ಇಲ್ಲ ಎಂದು ಶ್ರೀ ಗುರು ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಸಭೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಸವ ಪ್ರಭಾ ವಂಟುಮೂರಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಹಾಲ್ ಮರಬಸ್ಸಣ್ಣವರ ರಾಜ್ಯ ಉಪಾಧ್ಯಕ್ಷ ವಂಟುಮುರಿ ಬೀಮ್ ಗೌಡ ಪಾಟೀಲ್ ರವಿ ಪಾಟೀಲ್ ಪ್ರಜ್ವಲ್ ಪಾಟೀಲ್ ಶ್ರೀಶೈಲ್ ಜೋಶ್ ಸಚಿನ್ ಈರಣ್ಣ ಕೇದನೂರಿ ರಾಜು ಮುತ್ನಾಳಿ ಮತ್ತು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ರೈತರ ಸಂಘದವರು ಇದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 