ಉತ್ತರ ಕನ್ನಡದಲ್ಲಿ ರವಿವಾರ ಲಾಕ್ ಡೌನ್ ಇಲ್ಲ

ರವಿವಾರ ಲಾಕ್ ಡೌನ್ ವಿಲ್ಲ  : ಜಿಲ್ಲಾಧಿಕಾರಿ

ಕಾರವಾರ, ಆಗಸ್ಟ್ 1:  ಜಿಲ್ಲೆಯಲ್ಲಿ ಕೋವಿಡ್-19 ತಡೆಗಟ್ಟುವ ಹಿನ್ನಲೆಯಲ್ಲಿ  ಆಗಸ್ಟ್ 2 ರವರೆಗಿನ ರವಿವಾರ ದಂದು ವಿಧಿಸಲಾಗಿದ್ದ ಸಂಪೂರ್ಣ ಲಾಕ್ ಡೌನ್ ಆದೇಶವನ್ನು ಹಿಂಪಡೆಯಲಾಗಿರುತ್ತದೆ ಎಂದು  ಜಿಲ್ಲಾಧಿಕಾರಿ ಡಾ.  ಹರೀಶಕುಮಾರ   ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.  

  ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರರ ಆದೇಶದ ಮೇರೆಗೆ ಆಗಸ್ಟ್ 2 ಭಾನುವಾರದಂದು ಹೊರಡಿಸಲಾಗಿದ್ದ ಲಾಕ್  ಡೌನ್ ಆದೇಶವನ್ನು  ಹಿಂದೆ ಪಡೆಯುವ ಮೂಲಕ ಜಿಲ್ಲೆಯಲ್ಲಿ ಎಲ್ಲ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.