ಜೊಲ್ಲೆಯವರ ಬಗ್ಗೆ ಹಿರಾಶುಗರ್ ಕಾರಖಾನೆಯ ಸಂಚಾಲಕರ ಅಪಸ್ವರ

ಜೊಲ್ಲೆಯವರ ಬಗ್ಗೆ ಹಿರಾಶುಗರ್ ಕಾರಖಾನೆಯ ಸಂಚಾಲಕರ ಅಪಸ್ವರ  No hasty decisions, quick resolution of problems: Balachandra Jarkiholi

ಆತುರದ ನಿರ್ಧಾರ ಬೇಡ, ಶೀಘ್ರ ಸಮಸ್ಯೆ ಪರಿಹಾರ: ಬಾಲಚಂದ್ರ ಜಾರಕಿಹೊಳಿ 

ಎಂ.ಬಿ.ಘಸ್ತಿ  

ಸಂಕೇಶ್ವರ 22: ಬೆಳಗಾವಿ ಜಿಲ್ಲೆಯ ಪ್ರಮುಖ ನಾಯಕ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಭಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ, ಸಚಿವ ಸತೀಶ ಜಾರಕಿಹೊಳಿ ಇವರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆ ಪ್ರಗತಿಯ ಪಥದಲ್ಲಿ ಸಾಗುತ್ತಲಿದ್ದು, ಕಳೆದ 30 ವರ್ಷಗಳಿಂದ ಕತ್ತಿ ಸಹೋದರರ ಹಿಡಿತದಲ್ಲಿದ್ದ ಈ ಕಾರ್ಖಾನೆಯ ಸಂಪೂರ್ಣವಾಗಿ ಅಭಿವೃದ್ಧಿಯಿಂದ ವಂಚಿತವಾಗಿತ್ತು. 

 ಆಗಿನ ಸಂಚಾಲಕ ಮಂಡಳಿಯವರು ಹಾಗೂ ಸದ್ಯ ಇರುವ ಸಂಚಾಲಕ ಮಂಡಳಿಯವರು ಅವರ ಆಡಳಿತದ ಬಗ್ಗೆ ಚಕಾರ ಎತ್ತಿರಲಿಲ್ಲ.  ಅಪಸ್ವರ ತೋರಿ​‍್ಡಸಲಿಲ್ಲ. ಸಹಕಾರ ಮಹರ್ಷಿ ಅಪ್ಪಣ್ಣಗೌಡಾ ಪಾಟೀಲ ಹಾಗೂ ಸಹಕಾರ ಶಿಲ್ಪಿ ಬಸಗೌಡಾ ಪಾಟೀಲ ಇವರು ಸಹಕಾರಿ ತತ್ವದ ಮೇಲೆ ಕಟ್ಟಿದ ಈ ಕಾರಖಾನೆಯು ಒಂದು ಕಾಲದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿತ್ತು.  ಆದರೆ ನಡುವೆ ಬಂದ ಆಡಳಿತದಿಂದಾಗಿ ಸಹಕಾರಿ ತತ್ವದ ಮೇಲೆ ನಡೆಯುತ್ತಿರುವ ಸಹಕಾರಿ ಸಕ್ಕರೆ ಕಾರಖಾನೆಯು ಸಾಲದ ಹೊರೆಯಿಂದಾಗಿ ಸಹಕಾರಿ ತತ್ವದ ಮೇಲೆ ನಡೆಸಲು ಯಾರೂ ಆಸಕ್ತಿ ತೋರಿಸುತ್ತಿರಲಿಲ್ಲ.  ಖಾಸಗಿ ತತ್ವದ ಲೀಜ್ ಆಧಾರದ ಮೇಲೆ ನಡೆಸಲು ಎಲ್ಲರೂ ಕೇಳುತ್ತಿದ್ದರು.  

ಇಂತಹ ಸ್ಥಿತಿಯಲ್ಲಿ ಕಾರಖಾನೆಯ ಸಂಚಾಲಕರು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಭಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ, ಸಚಿವರಾದ ಸತೀಶ ಜಾರಕಿಹೊಳಿ ಇವರೆಲ್ಲರನ್ನು ಭೇಟಿಯಾಗಿ ಸಹಕಾರಿ ತತ್ವದ ಮೇಲೆಯ ಕಾರಖಾನೆಯನ್ನು ಮುನ್ನಡೆಸಲು ಸಹಕಾರ ಹಾಗೂ ಮಾರ್ಗದರ್ಶನವನ್ನು ಕೋರಿದ್ದಾರೆ.  ಸಂಸ್ಥೆಯು ಖಾಸಗೀಕರಣಗೊಳಿಸದೇ ಸಹಕಾರಿ ತತ್ವದಲ್ಲಿಯೇ ಅಭಿವೃದ್ಧಿ ಹೊಂದಲು ಎಲ್ಲ ನಾಯಕರು ಒಲವು ತೋರಿಸಿದರು.  ಅವರೆಲ್ಲರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ 4 ತಿಂಗಳ ಕಡಿಮೆ ಅವಧಿಯಲ್ಲಿ ಕಾರಖಾನೆಯು ಮತ್ತೇ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವಾಗಲೇ ಅಣ್ಣಾಸಾಹೇಬ ಜೊಲ್ಲೆ ಇವರು ಕಾರಖಾನೆಯಲ್ಲಿ ಹೆಚ್ಚಿನ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಕೆಲ ಸಂಚಾಲಕರು ಅಸಮಾಧಾನ ವ್ಯಕ್ತಪಡಿಸಿದರು.   

ಸಾಲದ ಭಾರಿ ಹೊರೆಯನ್ನು ಹೊತ್ತುಕೊಂಡು ರೈತರ ಬಿಲ್ಲುಗಳನ್ನು ಪಾವತಿ ಮಾಡಿರುವುದಲ್ಲದೇ ಅವರಿಗೆ ಕಾಂಪೋಸ್ಟ ಗೊಬ್ಬರವನ್ನು ಕಡಿಮೆ ಬೆಲೆಯಲ್ಲಿ ನೀಡಿ ಹೆಚ್ಚಿನ ಕಬ್ಬು ಇಳುವರಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಕಾರ್ಮಿಕರಿಗೆ 7ನೇ ವೇತನ ಆಯೋಗದಂತೆ ವೇತನ ಪಾವತಿಸಿ, ರೈತ ಮತ್ತು ಕಾರ್ಮಿಕ ಹಿತಾಸಕ್ತಿಯನ್ನು ಕಾಪಾಡಿಕೊಂಡು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರೈತರಿಗೆ ಅನುಕೂಲ ಮಾಡಿಕೊಡುತ್ತಿರುವಾಗಲೇ, ನಾಯಕರ ಮೇಲೆ ಅಪಸ್ವರ ಮತ್ತು ಅಸಮಾಧಾನ ತೋರಿಸಿಸುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.   

ಚೆನ್ನಾಗಿ ನಡೆಯುತ್ತಿರುವ ಸಹಕಾರಿ ಸಕ್ಕರೆ ಕಾರಖಾನೆಯಲ್ಲಿ ರಾಜಕೀಯವನ್ನು ತಂದು ರೈತ ಮತ್ತು ಕಾರ್ಮಿಕರಿಗೆ ಅನ್ಯಾಯವಾಗುವುದು ಬೇಡವೆಂದು ಆಡಿಕೊಳ್ಳುತ್ತಿದ್ದಾರೆ.  ಈ ಭಾಗದ ರೈತರ ಜೀವಾಳವಾದ ಈ ಸಕ್ಕರೆ ಕಾರಖಾನೆಯಿಂದ ಎಲ್ಲರೂ ಶಾಸಕರಾಗಿ ಮಂತ್ರಿಗಳಾಗಿ ರಾಜ್ಯದ ರಾಜಕೀಯದಲ್ಲಿ ಮಿಂಚಿದ್ದಾರೆ.  ಈಗ ಸದ್ಯ ಇರುವ ಸಂಚಾಲಕ ಮಂಡಳಿಯವರೇ ಕಾರಖಾನೆಯನ್ನು ಚೆನ್ನಾಗಿ ನಡೆಸಲು  ಸಹಕಾರ ಮತ್ತು ಮಾರ್ಗದರ್ಶನ ನೀಡುವಂತೆ ಅಣ್ಣಾಸಾಹೇಬ ಜೊಲ್ಲೆ, ಭಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ, ಸಚಿವರಾದ ಸತೀಶ ಜಾರಕಿಹೊಳಿ ಬೇಡಿಕೊಂಡಿದ್ದಾರೆ.   

ಈಗ ಇದೇ ನಾಯಕರ ಮೇಲೆ ಮುನಿಸಿಕೊಂಡು ಪ್ರಭಾಕರ ಕೋರೆ ಇವರನ್ನು ಭೇಟಿಯಾಗಿ ಕಾರಖಾನೆಯನ್ನು ನೀವೇ ನಡೆಸಿರಿ ಎಂದು ಕೇಳಿಕೊಂಡಿದ್ದಾರೆ.  ಕೋರೆಯವರು ಕೂಡ 3-4 ಬಾರಿ ಸಭೆಗಳನ್ನು ನಡೆಸಿದರು.  ಕೊನೆ ಗಳಿಗೆಯಲ್ಲಿ ಅವರು ಕೂಡ ತಮ್ಮಿಂದ ನಡೆಸಲು ಆಗುವುದಿಲ್ಲವೆಂದು ಕೈ ಬಿಟ್ಟಿದ್ದಾರೆಂದು ತಿಳಿದು ಬಂದಿದೆ.  ನಂತರ ಸಂಚಾಲಕರು ಭಾಲಚಂದ್ರ ಜಾರಕಿಹೊಳಿಯವರನ್ನು ಭೇಟಿಯಾಗಿ ಕೇಳಿಕೊಂಡಾಗ ಅವರು ಸಮಾಧಾನಚಿತ್ತದಿಂದ ಆಲಿಸಿ ಯಾರೂ ದುಡುಕಬೇಡಿರಿ.   

ಜೊಲ್ಲೆಯವರು ಬಂದಾಗ ತಾವು ಕೂಡ ಬಂದು ನಿಮ್ಮ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಿಕೊಡುತ್ತೇವೆಂದು ಸಂಚಾಲಕರಿಗೆ ತಿಳಿಸಿದರು.  ಅಲ್ಲಿಯವರೆಗೆ ಯಾವುದೇ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ ಎಂದು ತಿಳಿ ಹೇಳಿದರು.  ಅಲ್ಲಿಗೆ ಈ ಸಮಸ್ಯೆಗೆ ತಾತ್ಕಾಲಿವಾಗಿ ಬ್ರೇಕ್ ಹಾಕಿದಂತಾಗಿದೆ ಎಂದು ತಿಳಿದುಬಂದಿದೆ. ಈ ತಿಂಗಳಲ್ಲಿ ಈ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಹೇಳಲಾಗುತ್ತಿದೆ.