ನಿಸಾರ್ ಅಹಮದ್ರವರ ಭಾವಪೂರ್ಣ ಶ್ರದ್ಧಾಂಜಲಿ

ಕುರುಗೋಡು. ಮೇ. 4 :ಕನ್ನಡ ಹಿರಿಯ ಶ್ರೇಷ್ಠ ಸಾಹಿತಿ ನಿತ್ಯೋತ್ಸವ ಕವಿ ಕೆಎಸ್.ನಿಸಾರ್ ಅಹಮದ್ ರವರು ಇಲ್ಲವಾಗಿರುವುದು, ಸಾಹಿತ್ಯ ಲೋಕಕ್ಕೆ ತುಂಬಲಾಗದ ನಷ್ಟ, ಆದರೂ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಎಂದಿಂದಿಗೂ ಮರೆಯಲಾಗದು ಎಂದು ಕುಡಿತಿನಿ ಠಾಣೆಯ ಪಿಎಸ್ಐ ಮಹಮ್ಮದ್ ರಫಿಕ್ ತಿಳಿಸಿದರು.

     ಅವರು ಪಟ್ಟಣ ಸಮೀಪದ ಕುಡಿತಿನಿ ಪಟ್ಟಣದಲ್ಲಿ ಕೆ.ಎಸ್.ನಿಸಾರ ಅಹಮದ್ರವರ ನಿಧನಕ್ಕೆ ಸಾರ್ವಜನಿಕರು ಹಮ್ಮಿಕೊಂಡಿದ್ದ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

     ಅವರು 1974ರಲ್ಲಿ ರಚಿಸಿದ ನಿತ್ಯೋತ್ಸವ ಕವನ ಸಂಕಲನ ನಾಡಿನ ಜನ ಮನದಲ್ಲಿ ಸ್ಥಿರವಾಗಿದೆ, ಇನ್ನೂ ಅವರ ಕವನ ಸಂಕಲನಗಳು, ಅನುವಾದಗಳು, ವಿಮಶರ್ೆ ಮತ್ತು ವಿಚಾರ, ಸಾಹಿತ್ಯ, ಧ್ವನಿ ಸುರುಳಿಗಳು ಹಾಗೂ ಇನ್ನಿತರ ಅನೇಕ ಕೃತಿಗಳು ಸದಾ ನಮ್ಮೊಂದಿಗೆ ಇರುತ್ತವೆ ಎಂದರು.

ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅಪರ್ಿಸುವ ಮೂಲಕ ಸಂತಪ ಸೂಚಿಸಿದರು.

ಈ ಸಂದರ್ಭದಲ್ಲಿ ಪಪಂ. ಮುಖ್ಯಾಧಿಕಾರಿ ಇಮಾಮ್ ಸಾಬ್, ಕರವೇ ಅಧ್ಯಕ್ಷ ಬಾವಿ ಶಿವಕುಮಾರ್, ಟಿಕೆ.ಕಾಮೇಶ್, ಪಲ್ಲೇದ ಗುರುಪಾದಪ್ಪ, ಜಂಗ್ಲಿ ಸಾಬ್, ನಾಗಲಿಂಗ ಆಚಾರಿ, ಲೋಕೇಶ್, ರಾಜಾ, ತಿಮ್ಮಪ್ಪ, ವೀರನಗೌಡ, ಕುಭೇರ, ಫಣಿ, ಗಣೇಶ್, ಕನ್ನಡ ಸಾಹಿತ್ಯ ಅಭಿಮಾನಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.