ನಿಸಾರ್ ಅಹ್ಮದ್ ಅವರ ಸಾಹಿತ್ಯ ಕೊಡುಗೆ ಅನನ್ಯ: ಸಿದ್ದಲಿಂಗೇಶ್

ಬಳ್ಳಾರಿ ಮೇ.9, ಭೂಗರ್ಭಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಸಿದ್ದಲಿಂಗೇಶ್ ರಂಗಣ್ಣನವರ್ ಅವರು ತಿಳಿಸಿದರು. ಅವರು ಸ್ಥಳೀಯ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕವು ಹಮ್ಮಿಕೊಂಡಿದ್ದ ನಿತ್ಯೋತ್ಸವದ ಕವಿ ಕೆ.ಎಸ್.ನಿಸಾರ್ ಆಹ್ಮದ್ ಅವರಿಗೆ ನುಡಿನಮನ ಹಾಗೂ ಕಸಾಪ ಸಂಸ್ಥಾಪನಾ ದಿನದ ಸ್ಮರಣಾರ್ಥ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡುತ್ತಿದ್ದರು. ಅವರ 'ಜೋಗದ ಸಿರಿ ಬೆಳಕಿನಲ್ಲಿ ಗೀತೆಯು ಕನ್ನಡಿಗರ ಅಸ್ಮಿತೆಯ ಕಾವ್ಯವಾಗಿದೆ.  ಅವರು 23 ಕಾವ್ಯ ಕೃತಿಗಳನ್ನು, ಗದ್ಯ ಮತ್ತು ಅನುವಾದಿತ ಕೃತಿಗಳನ್ನು ರಚಿಸುವ ಮೂಲಕ ಕನ್ನಡಿಗರ ಹೃದಯದಲ್ಲಿ ನೆಲೆಸಿದ್ದಾರೆ. ಸುಗಮ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ನಿಸಾರ್ ಅಹ್ಮದ್ ಅವರು ಜನಪ್ರಿಯ ಭಾವಗೀತೆಗಳನ್ನು ರಚಿಸಿದ್ದಾರೆ. ಅವರ 'ಕುರಿಗಳು ಸಾರ್ ಕುರಿಗಳು', ಮತ್ತದೇ ಸಂಜೆ, ಅದೇ ಮೌನ ಅದೇ ಏಕಾಂತ  ಎಂಬ ಇನ್ನಿತರ ಗೀತೆಗಳು ಕನ್ನಡಿಗರನ್ನು ಸದಾ ಕಾಲ ಕಾಡುತ್ತಿರುತ್ತವೆ ಎಂದು ಹೇಳಿದರು. 

  ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆ.ಎಸ್.ನಿಸಾರ್ ಅಹ್ಮದ್ ಅವರ ಸಂಜೆ ಐದರ ಮಳೆ, ನಿತ್ಯೋತ್ಸವ, ನೆನೆದವರ ಮನದಲ್ಲಿ, ನಾನೆಂಬ ಪರಕೀಯ, ಅನಾಮಿಕ, ಆಕಾಶಕ್ಕೆ ಸರಹದ್ದುಗಳಿಲ್ಲ. ಇವರ ಕೃತಿಗಳು ಮಹತ್ವಪೂರ್ಣವಾದವುಗಳು. ಸುಗಮ ಸಂಗೀತ ಕ್ಷೇತ್ರದಲ್ಲಿ ಅವರ ಕವಿತೆಗಳು ಅಪಾರ ಹೆಸರು ಮಾಡಿದವು. ಮಾಸ್ತಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಅನಕೃ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, 2006 ರಲ್ಲಿ ಶಿವಮೊಗ್ಗದಲ್ಲಿ ನಡೆದ 73 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು ಎಂದು ತಿಳಿಸಿದರು. ಅವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೀವ್ರ ಕಂಬನಿ ಮಿಡಿಯುತ್ತದೆ. ಕನ್ನಡದ ಶ್ರೇಷ್ಠ ಸಾಹಿತಿಯೊಬ್ಬರನ್ನು ಕಳೆದುಕೊಂಡು ಕನ್ನಡ ಸಾಹಿತ್ಯ ಲೋಕ ಬರಡಾಗಿದೆ. ನಿತ್ಯೋತ್ಸವದ ಹೊಸ ಪರಿಭಾಷೆಯ ಕವಿತೆಗಳನ್ನು ಕಟ್ಟಿದ ಕನ್ನಡದ ಧೀಮಂತ ಕವಿಯ ಅಗಲಿಕೆಗೆ ಕ.ಸಾ.ಪ.ಬಳ್ಳಾರಿ ಜಿಲ್ಲಾಘಟಕವು ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಎಂದರು. 

    ಕಸಾಪ ಸಂಸ್ಥಾಪನಾ ದಿನಾಚರಣೆ: ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಅಂದಿನ ಮೈಸೂರು ಅರಸರಾದ ರಾಜಷರ್ಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನ್ನಡದ ಮೇಲಿನ  ಬದ್ಧತೆ ಹಾಗೂ ಸರ್  ಎಂ.ವಿಶ್ವೇಶ್ವರಯ್ಯ ನವರ ದೂರದೃಷ್ಟಿಯಿಂದ ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಶ್ರಮಿಸಿದ ಎಲ್ಲಾ ಪೂವರ್ಿಕರ ಪರಂಪರೆಯನ್ನು ಗೌರವದಿಂದ ಸ್ಮರಿಸೋಣ ಎಂದು ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಅವರು ನುಡಿದರು. ಕ.ಸಾ.ಪ.ಎಂಬುದು ಕನ್ನಡಿಗರ ಪಾಲಿನ ಮೂರಕ್ಷರದ ಗಾಯತ್ರಿ ಮಂತ್ರ  ಇಂತಹ ಸಂಸ್ಥೆಯ ಬಳ್ಳಾರಿ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷತೆವಹಿಸಿ ಕಾರ್ಯನಿರ್ವಹಿಸಲು  ಆಶೀರ್ವದಿಸಿದ ಕ.ಸಾ.ಪ.ದ ಆಜೀವ ಸದಸ್ಯರು, ಸಾಹಿತಿಗಳು, ಕನ್ನಡಾಭಿಮಾನಿಗಳು ಹಾಗೂ ಬೆಲೆ ಕಟ್ಟಲಾಗದ ಕನ್ನಡ ಕಾಯಕದಲ್ಲಿ ನಿರತರಾಗಿರುವ ಎಲ್ಲಾ ಕ.ಸಾ.ಪ .ಪದಾಧಿಕಾರಿಗಳನ್ನು ಅಭಿನಂದಿಸಿದರು. ಸರಳಾದೇವಿ ಕಾಲೇಜಿನ ಪ್ರಾಧ್ಯಾಪಕ ಡಾ.ಕೊಟಗಿ ತಿಪ್ಪೇರುದ್ರ ಅವರು ಮಾತನಾಡಿ ಶತಮಾನ ಕಳೆದರೂ ಪರಿಷತ್ತು ಇಂದಿಗೂ ಪ್ರಸ್ತುತತೆ ಪಡೆದಿದೆ. ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ನಿರಂತರ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ. ಇಂದು ಇದರ ಆಜೀವ ಸದಸ್ಯರ ಸಂಖ್ಯೆ ಮೂರು ಲಕ್ಷ ಮುವ್ವತ್ತು ಸಾವಿರವನ್ನು ದಾಟಿದೆ.ಈ 105 ವರ್ಷಗಳಲ್ಲಿ ಬಿಂದುವಿನಿಂದ ಸಿಂದುವಿನ ಕಡೆಗೆ ಸಾಗಿ,ಇಡೀ ದೇಶದಲ್ಲಿ ನಿರಂತರ ಕ್ರಿಯಾಶೀಲತೆಯನ್ನು ಶತಮಾನಗಳ ಕಾಲ ಪ್ರಕಟಿಸಿದ ಏಕಮಾತ್ರ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. 

 ಪರಿಷತ್ತು ಸಾಮಾನ್ಯರಿಂದ ವಿದ್ವಾಂಸರವರೆಗೆ ಪ್ರೀತಿಗೆ ಪಾತ್ರವಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಉಪಾಧ್ಯಕ್ಷ ರಮೇಶ್ಗೌಡ ಪಾಟೀಲ್, ಗೌರವ ಕಾರ್ಯದಶರ್ಿಗಳಾದ ಕೋಳೂರು ಚಂದ್ರಶೇಖರಗೌಡ, ವೀರೇಶ್ ಕರಡಕಲ್, ಕೋಶಾಧ್ಯಕ್ಷ ಟಿ.ಎಂ.ಪಂಪಾಪತಿ, ಹೆಚ್.ಕೆ.ಗೌರಿಶಂಕರ್, ಸಿದ್ಮಲ್ ಮಂಜುನಾ

ಥ, ಕೆ.ಜಗದೀಶ್, ಶಿವಾನಂದ ಕತಕನಹಳ್ಳಿ, ಮಂಜುನಾಥಗೋವಿಂದವಾಡ, ತಿಪ್ಪೇರುದ್ರಪ್ಪ ಕೊಟಗಿ, ಸಿ.ಎಂ.ಮಂಜುನಾಥ, ಬಿ.ರಮಣಪ್ಪ, ಪದಾಧಿಕಾರಿಗಳು ಹಾಜರಿದ್ದರು.