ನೀರವ್ ಮೋದಿ ದುಬಾರಿ ಕಲಾಕೃತಿ ಹರಾಜು ಮುಂದಕ್ಕೆ

ಮುಂಬಯಿ, ಫೆ 27 ;  ಪಂಜಾಬ್ ನ್ಯಾಷನಲ್  ಬ್ಯಾಂಕಿಗೆ ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿ ನಂತರ ದೇಶ ಬಿಟ್ಟು ಪಲಾಯನ ಮಾಡಿದ    ವಜ್ರದ ವ್ಯಾಪಾರಿ ನೀರವ್ ಮೋದಿ ಬಳಿಯಿದ್ದ ದುಬಾರಿ ಪುರಾತನ ಕಲಾಕೃತಿಗಳು ಮತ್ತು ವಿಲಾಸಿ  ವಸ್ತುಗಳ ಹರಾಜನ್ನು ಹರಾಜು ಸಂಸ್ಥೆ ಸಾಫ್ರೋನಾರ್ಟ್ ಮುಂದೂಡಿದೆ.ಜಾರಿ ನಿರ್ದೇಶನಾಲಯದ ಪರವಾಗಿ  ಇಂದು ನಡೆಯಬೇಕಿದ್ದ ಹರಾಜು ಪ್ರಕ್ರಿಯೆಯನ್ನು ಮುಂದಿನ ತಿಂಗಳ 5ಕ್ಕೆ ಮುಂದೂಡಲಾಗಿದೆ.ಈ ಹಾರಾಜಿನಿಂದ 40 ಕೋಟಿರೂಪಾಯಿ ಸಂಗ್ರಹವಾಗಲಿದೆ  ಎಂದು  ಇಡಿ ಮೂಲಗಳು ಹೇಳಿವೆ.