ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಪತ್ರಿಕೆಗಳು ಮಾಡಬೇಕು : ಡಿವೈಎಸ್ಪಿ ಶಿವಾನಂದ

ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಪತ್ರಿಕೆಗಳು ಮಾಡಬೇಕು : ಡಿವೈಎಸ್ಪಿ ಶಿವಾನಂದ Newspapers should work to protect the society: DySP Shivananda

ಕಾರವಾರ  25: ಸಮಾಜದಲ್ಲಿ ಪತ್ರಿಕೆಗಳ ಪಾತ್ರ ದೊಡ್ದದು.  ಸಮಾಜದ ಸ್ವಾಸ್ಥ್ಯ ಕಾಪಾಡುವ ಹಾಗೂ ಜನತೆಗೆ ಸಮಾಜದಲ್ಲಿ ನಡೆಯುವ ವಿದ್ಯಮಾನಗಳ ಕುರಿತು ಸತ್ಯವನ್ನು  ತಿಳಿಸುವ ಕೆಲಸ ಪತ್ರಿಕೆಗಳು ಮಾಡಬೇಕು. ಈ ಜವಾಬ್ದಾರಿಯನ್ನು ಪತ್ರಕರ್ತರಾದವರು ಸಮರ್ಥವಾಗಿ ನಿರ್ವಹಿಸುವಂತಾಗಬೇಕು ಎಂದು ಡಿ.ವೈ.ಎಸ್‌.ಪಿ. ಶಿವಾನಂದ ಮದರಖಂಡಿ ನುಡಿದರು. 

ಅವರು ಗುರುವಾರ ಸಂಜೆ ದಾಂಡೇಲಿಯ ಬೃಹ್ಮಕುಮಾರಿಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಮೌಂಟ್ ಅಬು ಮೀಡಿಯಾ ವಿಭಾಗದ ಸಂಯೋಜಕರಾದ ವಿಶ್ವಾಸ ಅವರು ಮಾತನಾಡಿ, ಸಮಾಜದ ಕುಂದುಕೊರತೆಗಳನ್ನು ಸರಿಯಾದ ಸಾಕ್ಷಿಗಳ ಮೂಲಕ ಮುನ್ನ ಲೆಗೆ ತಂದು ಅವುಗಳನ್ನು ಸರಿಪಡಿಸುವಲ್ಲಿಮುಖ್ಯ ಪಾತ್ರ ವಹಿಸುವ ಪತ್ರಕರ್ತರ ಸೇವೆ ಶ್ಲಾಘನೀಯವೆಂದು ನುಡಿದರು.  ಪ್ರಜಾಪಿತ ಬೃಹ್ಮಕುಮಾರಿಸ್ ಈಶ್ವರಿ ವಿಶ್ವ ವಿದ್ಯಾಲಯ ಮೌಂಟ್ ಅಬುವಿನಲ್ಲಿ ಅಖಿಲ ಭಾರತ ಪತ್ರಕತ9ರ ಸಮ್ಮೇಳನವನ್ನು ಆಯೋಜಿಸಿದ್ದು, ಆಸಕ್ತ ಪತ್ರಕರ್ತರು ನೋಂದಣಿಗಾಗಿ ಸ್ಥಳೀಯ ಘಟಕಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜಯೋಗಿನಿ ಡಾ.ಪದ್ಮಕ್ಕ ಅವರು, ಪತ್ರಿಕಾ ಮಾಧ್ಯಮ ಬಹಳಷ್ಟು ದೊಡ್ಡದಾಗಿ ಬೆಳೆದಿದ್ದು, ಸಾಮಾಜಿಕ ಬದಲಾವಣೆಯಲ್ಲಿ ಮಹತ್ವದ ಪಾತ್ರ ಹೊಂದಿದೆ. ಪತ್ರಿಕೆಗಳು ನಿಷ್ಪಕ್ಷವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜ ಸರಿಯಾದ ದಿಕ್ಕಿನಲ್ಲಿ ನಡೆಯಲು ಸಾಧ್ಯ. ಸುದ್ದಿಯ ಸತ್ಯಾಸತ್ಯತೆ ಅರಿಯುವುದು ಇಂದಿನ ದಿನಗಳಲ್ಲಿ ಸವಾಲಾಗುತ್ತಿದೆ.   

ಕೆಲ ಅಹಿತಕರ ವಾರ್ತೆಗಳು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವುದನ್ನು ಪತ್ರಕರ್ತರು ಜವಾಬ್ದಾರಿಯಿಂದ ಅಂಕು ಡೊಂಕುಗಳನ್ನು ತಿದ್ದಿ ತೀಡುವ ಕೆಲಸ ಮಾಡಬೇಕೆಂದರು.   ಪತ್ರಕರ್ತರಾದ ಗೀರೀಶ್ ಪಾಟೀಲ, ಸಂದೇಶ ದೇಸಾಯಿ, ಹಿರಿಯ ಪತ್ರಕರ್ತ ಎನ್‌.ಜಯಚಂದ್ರನ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸಾಂದರ್ಭಿಕವಾಗಿ ಮಾತನಾಡಿ ಸಂಸ್ಥೆಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ದಾಂಡೇಲಿ ಜೋಯಡಾ ಪತ್ರಕರ್ತರಾದ ಎನ್‌.ಜಯಚಂದ್ರನ್, ಸಂದೇಶ ಜೈನ್, ಕೃಷ್ಣಾ ಪಾಟೀಲ, ಗುರುಶಾಂತ ಜಡೆ ಹಿರೇಮಠ, ಪ್ರವೀಣ ಸುಲಾಖೆ, ಗೋವಿಂದ ಪಾರೀಖ, ರಾಜೇಶ ತಳೇಕರ, ಗೀರೀಶ್ ಪಾಟೀಲ, ಸಂದೇಶ ದೇಸಾಯಿ, ಅನಂತ ದೇಸಾಯಿ, ಬಮ್ಮು ಪೊಡೆ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ಥಳೀಯ ಸಂಚಾಲಕರಾದ ಗೀತಕ್ಕ ಸ್ವಾಗತಿಸಿದರು. ಸುನೀತಕ್ಕ ಕಾರ್ಯಕ್ರಮ ನಿರೂಪಿಸಿದರೆ ಕೊನೆಯಲ್ಲಿ ಬೃಹ್ಮ ಕುಮಾರ ಜನಾರ್ಧನಹೆಗಡೆ ವಂದಿಸಿದರು. ಬ್ರಹ್ಮಕುಮಾರಿ ಸುನಂದಕ್ಕ ಉಪಸ್ಥಿತರಿದ್ದರು.