ಪತ್ರಿಕೆವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕಪತ್ರಿಕಾಗೋಷ್ಠಿ ಕಲ್ಯಾಣ ಕರ್ನಾಟಕ ನ್ಯಾಯಪೂರ್ಣ ಅಭಿವೃದ್ಧಿ ಜಾಥಾ - ಹಕ್ಕುಗಳಿಗಾಗಿ ನಿಷ್ಠೆಯ ನಡಿಗೆ

ಪತ್ರಿಕೆವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕಪತ್ರಿಕಾಗೋಷ್ಠಿ   ಕಲ್ಯಾಣ ಕರ್ನಾಟಕ ನ್ಯಾಯಪೂರ್ಣ ಅಭಿವೃದ್ಧಿ ಜಾಥಾ - ಹಕ್ಕುಗಳಿಗಾಗಿ ನಿಷ್ಠೆಯ ನಡಿಗೆ NewspaperWelfare Party of India-Karnataka Press Conference Kalyana Karnataka Just Development Jath

ಪತ್ರಿಕೆವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕಪತ್ರಿಕಾಗೋಷ್ಠಿ 

ಕಲ್ಯಾಣ ಕರ್ನಾಟಕ ನ್ಯಾಯಪೂರ್ಣ ಅಭಿವೃದ್ಧಿ ಜಾಥಾ - ಹಕ್ಕುಗಳಿಗಾಗಿ ನಿಷ್ಠೆಯ ನಡಿಗೆ 

ಬಳ್ಳಾರಿ 07 : ಇದೇ ಅಕ್ಟೋಬರ್ 06 ರಿಂದ 13ರವರೆಗೆ ಬಳ್ಳಾರಿ ಯಿಂದ ಬೀದರ್ ವರೆಗೆ ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ“ಕಲ್ಯಾಣ ಕರ್ನಾಟಕ ನ್ಯಾಯಪೂರ್ಣ ಅಭಿವೃದ್ಧಿ ಜಾಥಾ” ಆಯೋಜಿಸಲಾಗಿದೆ. ಈ ಜಾಥಾ ಬಳ್ಳಾರಿ ಯಿಂದ ಆರಂಭವಾಗಿ ಕಲಬುರ್ಗಿ ತನಕ ನಡೆಯಲಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ  ರಾಜ್ಯ ಅಧ್ಯಕ್ಷರು ವಕೀಲರು ತಾಹಿರ್ ಹುಸೇನ್ ತಿಳಿಸಿದ್ದಾರೆ.  

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳಾದರೂ ಕಲ್ಯಾಣ ಕರ್ನಾಟಕ ಭಾಗ ಇಂದು ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶವಾಗಿಯೇ ಉಳಿದಿದೆ. ಸಂವಿಧಾನದ 98ನೇ ತಿದ್ದುಪಡಿ ಮೂಲಕ 2013 ರಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರೆತಿದ್ದರೂ, ಒಂದು ವಿಶೇಷ ನಿಗಮ ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ’ಯ  ಹೆಸರಿನಲ್ಲಿ ಸ್ಥಾಪಿಸಿ ಸುಮಾರು 25,000 ಕೋಟಿ ಅನುದಾನ ಕಳೆದ 12 ವರ್ಷಗಳಲ್ಲಿ ಬಿಡುಗಡೆಯಾದರೂ, ಅಭಿವೃದ್ಧಿ ಫಲಿತಾಂಶಗಳು ಜನರ ಕೈ ಸೇರಿಲ್ಲ.  

ಕಾರ್ಮಿಕರು ಕೆಲಸ ಹೊಡುಕಿಕೊಂಡು ಗುಳೆ ಹೋಗುವುದು ತಪ್ಪಲಿಲ್ಲ.ಯುವಕರಿಗೆ ಅರ್ಹತೆಗೆ ತಕ್ಕಂತೆ ಉದ್ಯೋಗ ಸಿಗುತ್ತಿಲ್ಲ, ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಕೇಂದ್ರಗಳು ಸ್ಥಾಪನೆ ಯಾಗಿಲ್ಲ.ಅಪೌಷ್ಟಿಕತೆ ಯಿಂದ ಮಕ್ಕಳ ಹಾಗು ಬಾಣಂತಿಯರ ಸಾವಿನ ಸರಣಿ ನಿಂತಿಲ್ಲ. ಉರಿ ಬಿಸಿಲಿನಲ್ಲಿ ಶ್ರಮಿಸುವ ಅನ್ನದಾತನ ಸಮಸ್ಯೆಗಳು ಬಗೆಹರಿಯದೆ ಆತ್ಮಹತ್ಯೆಗಳು ನಿಂತಿಲ್ಲ. ಇಲ್ಲಿ ನೆಲೆಸುವ ಹಿಂದುಳಿದ, ಅಲ್ಪಸಂಖ್ಯೆ, ದಲಿತ, ಅದಿವಾಸಿಗಳಿಗೆ ಇನ್ನು ತನಕ ಸಾಮಾಜಿಕ ನ್ಯಾಯ ದೊರಕಲಿಲ್ಲ. ಪ್ರತಿ ಬಾರಿ ಹೊಸ ಯೋಜನೆಗಳ ಭರವಸೆ, ದೊಡ್ಡ ದೊಡ್ಡ ಅನುದಾನಗಳ ಘೋಷಣೆಯಾಗುತ್ತಿದೆ. ಆದರೆ, ಅನುದಾನ ಎಲ್ಲಿ ಹೋಗುತ್ತಿದೆ? ಯಾರಿಗೆ ಯೋಜನೆಗಳ ಲಾಭ ತಲುಪುತ್ತಿದೆ?  

ಬೆಂಗಳೂರು ವಿಭಾಗದಲ್ಲಿ ತಲಾ ಆದಾಯ 5.01 ಆದರೆ ಈ ಭಾಗದ ತಲಾ ಆದಾಯ 1.73. ಮೈಸೂರು ಭಾಗದಲ್ಲಿ 10 ಹಿಂದುಳಿದ ತಾಲೂಕು ಗಳಿದ್ದರೆ ಈ ಭಾಗದಲ್ಲಿ 29 ಹಿಂದುಳಿದ ತಾಲೂಕುಗಳು. ರಾಜ್ಯದಲ್ಲಿ ಅತಿ ಬಡ ಜಿಲ್ಲೆಗಳಲ್ಲಿ ಅತ್ಯಂತ ಬಡ ಜಿಲ್ಲೆಗಳು ಈ ಭಾಗದ ಯಾದಗಿರಿ, ರಾಯಚೂರು, ಕಲಬುರಗಿ ಮತ್ತು ಕೊಪ್ಪಳ ಆಗಿವೆ. ಇಡೀ ರಾಜ್ಯದಲ್ಲಿ ಸಣ್ಣ, ಮಧ್ಯಮ ಕೈಗಾರಿಕೆ ಗಳ ಒಟ್ಟು ಸಂಖ್ಯೆ 17.48 ಲಕ್ಷ ಇದ್ದು, ಈ ಪೈಕಿ ಕಲ್ಯಾಣ ಕರ್ನಾಟಕ ಭಾಗದ ಪಾಲು ಕೇವಲ 1.96 ಲಕ್ಷ ಅಂದರೆ ಕೇವಲ 11ಅ ಮಾತ್ರ. ಕೆಲಸಕ್ಕಾಗಿ ವಲಸೆ ಹೋಗುವ ಕಾರ್ಮಿಕರು ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅತಿಹೆಚ್ಚು ಈ ಭಾಗದವರು. ಈ ಭಾಗದಲ್ಲಿ ಪತ್ರಿ ವರುಷ ಸರಿಸುಮಾರು 10 ಸಾವಿರ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಮುಗಿಸುತ್ತಾರೆ. ಆದರೆ, ಕೆಲಸಕ್ಕೆ ಮಾತ್ರ ಬೇರೆ ಕಡೆ ವಲಸೆ ಹೋಗುತ್ತಾರೆ. ಸುಮಾರು 30 ಲಕ್ಷ ಜನ ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 9,000 ಶಿಶುಗಳು ಮತ್ತು 600 ತಾಯಂದಿರು ಪೋಷಕಾಂಶಗಳ ಕೊರತೆಯಿಂದ ಮೃತಪಟ್ಟಿದ್ದಾರೆ. ಜನ ಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಅರೋಗ್ಯ ಕೇಂದ್ರಗಳು ಸ್ಥಾಪನೆಯಾಗಿಲ್ಲ. 1963 ಉಪ ಕೇಂದ್ರಗಳ ಅವಶ್ಯಕತೆ ಇದ್ದು, ಕೇವಲ 1519 ಕೇಂದ್ರಗಳಿವೆ. 99 ಸಮುದಾಯ ಆರೋಗ್ಯ ಕೇಂದ್ರಗಳ ಅವಶ್ಯಕತೆ ಇದ್ದು, ಕೇವಲ 58 ಕೇಂದ್ರಗಳಿವೆ. ಅಲ್ಲದೆ 395 ಪ್ರಾಥಮಿಕ ಅರೋಗ್ಯ ಕೇಂದ್ರಗಳ ಅವಶ್ಯಕತೆ ಇದ್ದು, 352 ಕೇಂದ್ರಗಳಿವೆ. ಒಟ್ಟಾರೆ ಸುಮಾರು 80 ಸಾವಿರ ಸರಕಾರಿ ಹುದ್ದೆಗಳು ಖಾಲಿ ಇದ್ದು ಇದರಲ್ಲಿ ಸುಮಾರು 22 ಸಾವಿರ ಶಿಕ್ಷಕರ ಹುದ್ದೆಗಳು ಇಂದಿಗೂ ಭರ್ತಿ ಯಾಗಿಲ. ಪರಿಣಾಮ ಪ್ರತಿ ಬಾರಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಫಲಿತಾಂಶ ದಲ್ಲಿ ಈ ಜಿಲ್ಲೆಗಳು ಕೊನೆ ದರ್ಜೆ ಯಲ್ಲಿ ಇರುತ್ತವೆ.   

ಇಡೀ ರಾಜ್ಯ ದಲ್ಲಿ ಅತಿಹೆಚ್ಚು ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರು ಈ ಜಿಲ್ಲೆಗಳಲ್ಲಿ ಇದ್ದಾರೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ಗಳು ಇಲ್ಲ.  

   

ಬೇಡಿಕೆಗಳು:  

1) ಮಾನವ ಅಭಿವೃದ್ಧಿ ಸೂಚ್ಯಂಕ ಮತ್ತು ತಲಾ ಆದಾಯ ಹೆಚ್ಚಿಸಬೇಕು. ಜಿಲ್ಲಾ ಖನಿಜ ಪ್ರತಿಷ್ಠಾನ (ಆಒಈ), ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಏಒಇಖಅ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಏಏಖಆಃ) ಅನುದಾನಗಳನ್ನು ಸಮರ​‍್ಕವಾಗಿ ಬಳಸಬೇಕು. ಉದ್ಯೋಗ ಅವಕಾಶಗಳು ಹೆಚ್ಚಿಸಬೇಕು.  

ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಮತ್ತು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ದೊರಕಿಸಬೇಕು.  

2) ಕಲ್ಯಾಣ ಕರ್ನಾಟಕದಲ್ಲಿ ಬಹಳಷ್ಟು ಐತಿಹಾಸಿಕ ಸ್ಮಾರಕ /ಸ್ಥಳಗಳಿದ್ದು ಈ ಭಾಗದಲ್ಲಿ ಪ್ರಾಸೋದ್ಯಮಕ್ಕೆ ಹೆಚ್ಚಿನ ಅಧ್ಯತೆ ನೀಡಬೇಕು.  

3) ಖಾಲಿ ಇರವು ಸರಕಾರಿ ಹುದ್ದೆಗಳು ಕೂಡಲೇ ಭರ್ತಿ ಮಾಡಬೇಕು.  

4) ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಕೈಗಾರಿಕಾ ನೀತಿ ರೂಪಿಸಬೇಕು ಮತ್ತು ಬಂಡವಾಳ ಹೂಡಿಕೆಯ ಪ್ರಮಾಣ ಹೆಚ್ಚಿಸಬೇಕು.  

5) ಈ ಭಾಗದ ಎಲ್ಲ ನೀರಾವರಿ ಯೋಜನೆಗಳನ್ನು ಶೀಘ್ರದಲ್ಲಿ ಪ್ರಾರಂಭ ಮಾಡಬೇಕು.  

6) ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಮಿತಿ ರಚನೆ ಮಾಡಬೇಕು ಮತ್ತು ಖಾಲಿ ಇರುವ ಎಲ್ಲ ಶಿಕ್ಷಕರ ಮತ್ತು ಉಪನ್ಯಾಸಕರ ಹುದ್ದೆಗಳು ಕೂಡಲೇ ಭರ್ತಿ ಮಾಡಬೇಕು. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳ ಮೇಲೆ ನಡೆಯುವ ಅನ್ಯಾಯ ತಡೆಯಲು ವಿಶೇಷ ನ್ಯಾಯಮಂಡಲ್ಲಿ ಸ್ಥಾಪಿಸಬೇಕು.  

7) ಜನಸಂಖ್ಯೆ ಆಧಾರದ ಮೇಲೆ ಪ್ರಾಥಮಿಕ ಅರೋಗ್ಯ ಕೇಂದ್ರ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಗಳ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದರು.  

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ, ಕಲ್ಯಾಣ ಕರ್ನಾಟಕ ಜನತೆಯ ಪರವಾಗಿ ಸರ್ಕಾರವನ್ನು ಎಚ್ಚರಿಸುತ್ತಿದ್ದು, ಕಲ್ಯಾಣ ಕರ್ನಾಟಕದ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರಿಸಲು ಬದ್ಧವಾಗಿದೆ ಎಂದರು.