ನ್ಯೂಸ್ ಫೈಲ್ ಒಲಿಂಪಿಕ್ಸ್ ನ ಈಜು ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದು ಮೊರಬ ಗ್ರಾಮಕ್ಕೆ ಕೀರ್ತಿ ತಂದ ಸೋನಂ, ಸಾಕ್ಷಿ ಸಹೋದರಿಯರು;ಹೆತ್ತ -ತಂದೆ ತಾಯಿಗಳೆ ನಿಜವಾದ ದೇವರುಗಳು: ಸಮಾಜ ಕಲ್ಯಾಣ ಅಧಿಕ್ಷಕ ಶಂಕರ ಕೊಡತೆ;
News File: Sonam and Sakshi sisters brought glory to Moraba village by winning gold medals in the Ol
ಪಾಲಬಾವಿ 20: ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿದ, ತಂದೆ-ತಾಯಿಗಳೇ ನಿಜವಾದ ದೇವರುಗಳು, ಈ ಜನುಮದಲ್ಲಿ ತಂದೆ-ತಾಯಿಗಳ ಋಣ ತೀರಿಸಲು ನಮಗಾಗಲು. ಸದಾಕಾಲ ಹೆತ್ತ ತಂದೆ ತಾಯಿಗಳನ್ನು ಖುಷಿಯಾಗಿಟ್ಟಿರುವುದು ಅವರ ಸಂತೋಷವನ್ನು ಇಮ್ಮಡಿ ಮಾಡೋದು ಮಕ್ಕಳ ಕರ್ತವ್ಯವಾಗಿದೆ ಎಂದು ಲಿಂಗಸೂರು ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ಶಂಕರ ಕೊಡತೆ ಹೇಳಿದರು. ಅವರು ರಾಯಬಾಗ ತಾಲೂಕಿನ ಮೊರಬ ಗ್ರಾಮದ ಹಿರಿಯಜೀವಿ ಯಮನಪ್ಪ ಪುನ್ನಪ್ಪ ಕೊಡತೆ ರವರ 77ನೆಯ ಜನ್ಮ ದಿನದ ಕಾರ್ಯಕ್ರಮದಲ್ಲಿ ಗ್ರಾಮದ ಮಲ್ಲು ಪಾಟೀಲ ಅವರ ಸುಪುತ್ರರಿಯರಾದ ಸೋನಂ ಹಾಗೂ ಸಾಕ್ಷಿ ಸಹೋದರಿಯರು ಒಲಿಂಪಿಕ್ಸ್ ನ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಬಂಗಾರದ ಪದಕ ಪಡೆದು ಮೊರಬ ಗ್ರಾಮಕ್ಕೆ ಕೀರ್ತಿ ತಂದ ಪ್ರಯುಕ್ತ ಕೊಡತೆ ಬಂಧುಗಳು, ಕುಟುಂಬದವರು ಸೇರಿಕೊಂಡು ಇಬ್ಬರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೋಡಿಸಿ ಗೌರವಿಸಿ ಸನ್ಮಾನಿಸಿ ಮಾತನಾಡಿದರು.
ಶಿಕ್ಷಕ ರಾಜು ಕಾಂಬಳೆ, ಮಾತನಾಡುತ್ತ ಮಕ್ಕಳಲ್ಲಿ ಹೆಣ್ಣು -ಗಂಡು ಭೇದ ಭಾವ ಮಾಡದೆ ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ ನಮ್ಮಲ್ಲಿ ಬರಬಾರದು ಗ್ರಾಮದ ರಾಜು ಮಲ್ಲು ಪಾಟೀಲ ಅವರು ತನ್ನ ಎರಡು ಹೆಣ್ಣು ಮಕ್ಕಳನ್ನು ಈಜು ಕ್ರೀಡೆಯಲ್ಲಿ ಪ್ರೋತ್ಸಾಹಿಸಿದ್ದರಿಂದ ಸನ್.2023 ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್, ಸನ್.2024 ರಲ್ಲಿ ಗೋವಾ, ಹಾಗೂ ಸನ್.2025ರಲ್ಲಿ ಹೈದರಾಬಾದ್ ನಲ್ಲಿ ನಡೆದ "ರಾಷ್ಟ್ರ ಮಟ್ಟದ ಪ್ಯಾರಾ ಒಲಿಂಪಿಕ್ಸ್ ನ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಸತತವಾಗಿ ಮೂರೂ ವರ್ಷ ಬಂಗಾರದ ಪದಕ ಪಡೆದು ಮೊರಬ ಗ್ರಾಮಕ್ಕೆ ಕೀರ್ತಿ ತಂದಿರುವ ಮುತ್ತುಗಳು ಎಂದು ಬನ್ನಿಸಿದರು. ಕೊಡತೆ ಮನೆಯ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸೇರಿಕೊಂಡು ಒಲಂಪಿಕ್ಸ್ ಈಜು ತಾರೆಯರಾದ ಸೋನಂ ಹಾಗೂ ಸಾಕ್ಷಿ ಸಹೋದರಿಯರನ್ನು ಗೌರವಿಸಿ ಆತ್ಮೀಯವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಹಾದೇವ ಕಾಂಬಳೆ, ವಿಠ್ಠಲ ಮಾನೆ, ರಾಜೀವ ಕಾಂಬಳೆ, ಮಲ್ಲು ಪಾಟೀಲ, ವಿಜಯ ಮಾನೆ, ಪ್ರಕಾಶ ಬಾಗೇವಾಡಿ, ಜ್ಯೋತಿಬಾ ಮಾನೆ, ಭೀಮರಾವ ಕೊಡತೆ ಇತರರು ಇದ್ದರು
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 