ನವದೆಹಲಿ: ಹೆಚ್ಚಿದ ಕುತೂಹಲ, ಅವಧಿಗೆ ಮುನ್ನವೇ ಪಿಎಂ ನರೇಂದ್ರ ಮೋದಿ ಚಿತ್ರ ಬಿಡುಗಡೆ

ನವದೆಹಲಿ, ಮಾ.19 : ಲೋಕಸಭಾ ಚುನಾವಣೆ ಬರುತ್ತಿದೆ. ಎಲ್ಲರ ಬಾಯಲ್ಲೂ ಪಿಎಂ ನರೇಂದ್ರ ಮೋದಿ ಮತ್ತೇ ಆಯ್ಕೆಯಾಗಿ ಬರುತ್ತಾರೆಯೇ ಎಂಬು ಮಾತುಗಳು ಸಹಜವಾಗಿಯೇ ಹರಿದಾಡುತ್ತಿವೆ. ಚುನಾವಣೆ ಜೊತೆಗೆ ಜನರಿಗೆ ಮನರಂಜನೆ ನೀಡಲು ಮೋದಿ ಚಿತ್ರವು ಮುಂದಿನ ತಿಂಗಳ ಮೊದಲ ವಾರದಲ್ಲೇ ಬಿಡುಗಡೆಯಾಗಲಿದೆ.

ಚಿತ್ರ ಬಗ್ಗೆ ಜನ ಬೆಂಬಲ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೋದಿ ಜೀವನ ಕಥೆಯನ್ನು ಆಧರಿಸಿ ತಯಾರಿಸಿರುವ ಚಿತ್ರ ಒಂದು ವಾರ ಮೊದಲೇ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಹುನಿರೀಕ್ಷಿತ ಜೀವನಾಧರಿತ ಕತೆಯನ್ನುಆಧರಿಸಿದ ಚಿತ್ರ “ಪಿಎಂ ನರೇಂದ್ರ ಮೋದಿ” ಒಂದು ವಾರ   ಅಂದರೆ ಏಪ್ರಿಲ್ 12ಕ್ಕೆ ಬದಲಾಗಿ 5ರಂದೇ ಬಿಡುಗಡೆಯಾಗುವ ಸಾಧ್ಯತೆಯಿದೆ ಮೂಲಗಳು ತಿಳಿಸಿವೆ.

  ಆರಂಭಿಕ ಬಿಡುಗಡೆಯ ಬಗ್ಗೆ ಮಾತನಾಡಿದ ನಿರ್ಮಾಪಕ ಸಂದೀಪ್ ಎಸ್ ಸಿಂಗ್ ಅವರು, ಈ ವಾರ ಸಾರ್ವಜನಿಕವಾಗಿ ಹೆಚ್ಚುತ್ತಿರುವ ಬೇಡಿಕೆ, ಒತ್ತಡದ ಹಿನ್ನೆಲೆಯಲ್ಲಿ ಚಿತ್ರವನ್ನು ಬೇಗನೆ ಬಿಡುಗಡೆ ಮಾಡಲಿದ್ದೇವೆ. ಜನರಲ್ಲಿ ಬಹಳಷ್ಟು ಪ್ರೀತಿ ಮತ್ತು ನಿರೀಕ್ಷೆ ಇದೆ ಮತ್ತು ನಾವು ಅವರನ್ನು  ಬಹಳ ಸಮಯ ಕಾಯಿಸುವುದಿಲ್ಲ . ಇದು 1.3 ಬಿಲಿಯನ್ ಜನರ ಕಥೆ ಮತ್ತು ಅವರಿಗೆ ಅದನ್ನು ತೋರಿಸಲು ನಾವು ಬಹಳ ಉತ್ಸುಕವಾಗಿದ್ದೇವೆ ಎಂದರು .

  ಮುಖ್ಯ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್ ಅಭಿನಯಿಸಿದ್ದು 'ಪ್ರಧಾನಿ ನರೇಂದ್ರ ಮೋದಿ' ಅವರು ಭಾರತದ ಪ್ರಧಾನಿಯಾಗುವ ತನಕ ತನ್ನ ಹೋರಾಟದ ದಿನಗಳ ಕತೆಯನ್ನು ಚಿತ್ರ ಒಳಗೊಂಡಿದೆ. 

  ಮೊದಲ ನೋಟದಲ್ಲೇ ಈ ಚಿತ್ರ ಬಹಳಷ್ಟು ಕೂತುಹಲ ಸೃಷ್ಟಿಸಿದೆ. ಈ ಚಿತ್ರದಲ್ಲಿ ಒಬೆರಾಯ್ ಒಂಬತ್ತು ವಿಭಿನ್ನ ನೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು  ಚಿತ್ರದ ವಿಶೇಷ ಆಕರ್ಷಣೆಯಾಗಿದೆ. ಮೊದಲ ಪೋಸ್ಟರ್ ಜನವರಿಯಲ್ಲಿ ಬಿಡುಗಡೆಯಾದ ನಂತರ ಈ ಚಿತ್ರವು ಬಹಳಷ್ಟು ಜನರ ಗಮನ, ಕುತೂಹಲ  ಸೆಳೆದಿದೆ .

  ಮೊದಲ  ಪೋಸ್ಟರ್ ಅನ್ನು ಜನವರಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ 23 ವಿವಿಧ ಭಾಷೆಗಳಲ್ಲಿ ಅನಾವರಣಗೊಳಿಸಿದ್ದರು.

  ವಿವೇಕ್ ಓಬೆರಾಯ್ ಅವರಲ್ಲದೆ ಚಿತ್ರದಲ್ಲಿ ಇರಾನಿ, ಮನೋಜ್ ಜೋಶಿ, ಪ್ರಶಾಂತ್ ನಾರಾಯಣನ್, ಝರಿನಾ ವಹಾಬ್, ಬರ್ಖಾ ಸೆನ್ಗುಪ್ತಾ, ಅಂಜನ್ ಶ್ರೀವಾಸ್ತವ್, ಯಾಟಿನ್ ಕರಣೇಕರ್, ರಾಮಕಾಂತ್ ದಮ್ಮಾ  ಸುರೇಶ್ ಒಬೆರಾಯ್, ಸಂದೀಪ್ ಎಸ್ ಸಿಂಗ್, ಆನಂದ್ ಪಂಡಿತ್ , ಅಕ್ಷತ್ ಆರ್ ಸಲೂಜಾ, ಜಿಮೇಶ್ ಪಟೇಲ್ ಮತ್ತು ದರ್ಶನ್ ಕುಮಾರ್ ಅವರುಗಳು ಪ್ರಮುಖ ಪಾತ್ರಗಳಲ್ಲಿದ್ದಾರೆ.