ಜನಪರ ಅಭಿವೃದ್ಧಿ ವೇದಿಕೆ ನೂತನ ರಾಜ್ಯಾಧ್ಯಕ್ಷರ ನೇಮಕ
ಗದಗ 02 : ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ (ರಿ)ಗೆ ನೂತನ ರಾಜ್ಯಾಧ್ಯಕ್ಷರ ನೇಮಕ ದಿನಾಂಕ 02/04/2025ರ ಬುಧವಾರದಂದು ಗದಗ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಗದಗ ನಿವಾಸಿ ನಿಸ್ಸಾರ್ ಅಹಮದ್ ಖಾಜಿ ಅವರನ್ನು ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ (ರಿ)ಯ ನೂತನ ರಾಜ್ಯಾಧ್ಯಕ್ಷರನ್ನಾಗಿ ಹಾಗೂ ನಿರ್ಗಮಿತ ರಾಜ್ಯಾಧ್ಯಕ್ಷರಾದ ಬಸವರಾಜಸ್ವಾಮಿ ಬಸವರಡ್ದೆರ್ ಅವರನ್ನು ರಾಜ್ಯ ಕಾರ್ಯದರ್ಶಿ ಯಾಗಿ ನೇಮಕ ಮಾಡಲಾಯಿತು.ಸಂಸ್ಥಾಪಕ ಅಧ್ಯಕ್ಷರಾದ ಒ ಋ ಮುಳಗುಂದ ನೇಮಕಾತಿ ಆದೇಶ ಪತ್ರಗಳನ್ನು ನೀಡಿದರು.ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಸುರೇಶ ಮೇದಾರ,ರಾಜ್ಯ ಸಂಚಾಲಕ ರಾಜಶೇಖರ ಕಾತರಕಿ ,ಅಕ್ಬರ್ ಬೇಗ್, ಆಯ್ ಎನ್ ಹುಬ್ಬಳ್ಳಿ ಸುನೀತಾ ಬಳಗೇರ, ಸುರೇಶ ಬೆಳದಡಿ,ನೂರುಲ್ಲಾ ಪಠಾಣ,ಪ್ರಕಾಶ ಮೇಟಿ, ,ರಾಜು ನಾಯಕ,ದೇವಪ್ಪಾ ಮಲಸಮುದ್ರ,ಮಂಜು ಅಕ್ಕಿ,ಸೇರಿದಂತೆ ನೂರಾರು ಸದಸ್ಯರು ಪಾಲ್ಗೊಂಡಿದ್ದರು