ಯಲ್ಲಮ್ಮದೇವಿ ನೂತನ ಬೆಳ್ಳಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಭವ್ಯ ಜಾತ್ರಾ ಮಹೋತ್ಸವ ಸಂಪನ್ನ
New silver statue of Yallammadevi installed, grand fair concludes
ಪಾಲಬಾವಿ 02: ಮಾನವ ಜನ್ಮವು ಶ್ರೇಷ್ಠವಾದದ್ದು ಈ ಜನುಮದಲ್ಲಿ ದಾನ, ಧರ್ಮ ಪರೋಪಕಾರ ಮಾಡುವುದರಿಂದ ಜನ್ಮವು ಸಾರ್ಥಕವಾಗುವುದು ಜಗನ್ಮಾತೆಯನ್ನು ಸ್ಮರಿಸುವುದರಿಂದ ಸುಖ, ಸಂಪತ್ತು ಪ್ರಾಪ್ತಿಯಾಗುವುದು, ನಿತ್ಯ ತಾಯಿಯನ್ನು ನೆನೆದು ಭಜನೆ, ಸ್ತುತಿಃ, ಪ್ರಾರ್ಥನೆ ಮಾಡುವುದರಿಂದ ಕಷ್ಟಗಳು ದೂರವಾಗಿ ಸುಖ ಸಂಪತ್ತು ನೆಮ್ಮದಿಯ ಜೀವನವು ನಮ್ಮದಾಗುತ್ತದೆ ಎಂದು ಮೂಡಲಗಿಯ ಕೃಷ್ಣಪ್ಪ ಮಹಾರಾಜರು ಆಶೀರ್ವಚನ ನೀಡಿದರು.ಅವರು ಕಪ್ಪಲಗುದ್ದಿ ಗ್ರಾಮದಲ್ಲಿ (ಏ.01) ರಂದು ಬುಧವಾರ ಜರುಗಿದ ಜಗನ್ಮಾತೆ ಏಳು ಕೊಳ್ಳದ ಯಲ್ಲಮ್ಮತಾಯಿ ನೂತನ ದೇವಸ್ಥಾನದ ಲೋಕಾರೆ್ಣ ಹಾಗೂ ಶ್ರೀ ಯಲ್ಲಮ್ಮದೇವಿಯ ಬೆಳ್ಳಿಯ ಮೂರ್ತಿಯ ಪ್ರಾಣಿ ಪ್ರತಿಷ್ಠಾಪಣೆ ಹಾಗೂ ಭವ್ಯ ಜಾತ್ರಾ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಮೂಡಲಗಿಯ ರಾಘವೇಂದ್ರ ಆಚಾರ್ಯರು ಹೋಮ, ಹವನ ಅಭಿಷೇಕ, ವಿಶೇಷ ಪೂಜೆ ನಡೆಸಿಕೊಟ್ಟರು. ಸವದತ್ತಿ ಯಲ್ಲಮ್ಮದೇವಿ ಮುಖ್ಯ ಅರ್ಚಕರು ಪೂಜ್ಯನಿಯ ಆರ್.ಕೆ.ರೇಣಕಿಗೌಡರ ಶ್ರೀಗಳು ಸಾನಿಧ್ಯವಹಿಸಿ ಭಕ್ತರಿಗೆ ಆಶೀರ್ವಾಸಿ ಗೌರವಿಸಿದರು.ಮಾರ್ಚ್ 31ರಂದು ಮಂಗಳವಾರ ಮಧ್ಯಾಹ್ನ 3ಗಂಟೆಗೆ ಸುಮಂಗಲೆಯರಿಂದ ಪೂರ್ಣಕುಂಭ, ಆರತಿಯೊಂದಿಗೆ ಯಲ್ಲಮ್ಮ ತಾಯಿಯ ನೂತನ ಬೆಳ್ಳಿ ಮೂರ್ತಿಯ ಭವ್ಯ ಮೆರವಣಿಗೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಜರುಗಿತು. ರಾತ್ರಿ 8ಗಂಟೆಗೆ ಮೂಡಲಗಿಯ ಕೃಷ್ಣ ಮಹಾರಾಜರು ಅವರಿಂದ ದೇವಿಯ ಪುರಾಣ ಪಾರಾಯಣ ಜರುಗಿತು. ರಾತ್ರಿ 9ಗಂಟೆಗೆ ಛತ್ರದಲ್ಲಿ ಅನ್ನ ಸಂತರೆ್ಣ ನೆರವೇರಿತು.
ಏಪ್ರಿಲ್ 1ರಂದು ಬುಧವಾರ ಮುಂಜಾನೆ 7ಗಂಟೆಗೆ ಮೂಡಲಗಿಯ ರಾಘವೇಂದ್ರ ಆಚಾರ್ಯ ಸ್ವಾಮೀಜಿಗಳಿಂದ ದೇವಸ್ಥಾನದ ಪ್ರಭಾ ಮಂಡಲದಲ್ಲಿ ಹೋಮ, ಹವನ, ಪಂಚಾಮೃತ, ಅಭಿಷೇಕ, ಫಲ, ಪುಷ್ಪ, ಹೋಳಿಗೆ ಕರಿಗಡಬು, ಮೀಸಲು ನೈವೇದ್ಯ ಸಮರೆ್ಣ, ವಿಶೇಷ ಪೂಜೆಯು ನೆರವೇರಿತು. ರಾತ್ರಿ 9ಗಂಟೆಗೆ ಸುಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಿಯ ಅರ್ಚಕರು ಯಡವೀರಯ್ಯ ಆಚಾರ್ಯರ ಅಮೃತ ಹಸ್ತದಿಂದ ಯಲ್ಲಮ್ಮದೇವಿಯ ಬೆಳ್ಳಿಯ ಮೂರ್ತಿಗೆ ವಿಶೇಷ ಪೂಜೆ ಅಭಿಷೇಕ ಹಾಗೂ ಹಡ್ಡಲಗಿ ನೈವೇದ್ಯ ತುಂಬುವ ಧಾರ್ಮಿಕ ಕಾರ್ಯಕ್ರಮವು ನೆರವೇರಿದವು ನಂತರ ನೂತನವಾಗಿ ನಿರ್ಮಾಣಗೊಂಡಿರುವ ಯಲ್ಲಮ್ಮದೇವಿಯ ದೇವಸ್ಥಾನವು ಲೋಕಾರೆ್ಣಗೊಂಡಿತು.
ಮುಂಜಾನೆ 11ಗಂಟೆಗೆ ಭಗೀರಥ ದೇವಸ್ಥಾನದ ಮುಂಭಾಗದಲ್ಲಿ ಮುಧೋಳ ತಾಲೂಕು ಯಡಹಳ್ಳಿ ಗ್ರಾಮದ ಅಡವಿಸಿದ್ದೇಶ್ವರ ಚೌಡಕಿ ಗಾಯನ ಸಂಘ ಹಾಗೂ ಮೂಡಲಗಿ ತಾಲೂಕು ನಿಂಗಾಪುರ ಗ್ರಾಮದ ದುರ್ಗಾದೇವಿ ಚೌಡಕಿ ಗಾಯನ ಸಂಘದ ಸುಪ್ರಸಿದ್ಧ ಕಲಾವಿದರಿಂದ ತುರುಸಾ ತುರುಸಿನ "ಹರದೇಶಿ -ನಾಗೇಶಿ" ಸುಪ್ರಸಿದ್ಧ ಚೌಡಕಿ ಜನಪದಗಳ ಹಾಡುಗಾರಿಕೆ ಜರುಗಿದವು. ನಂತರ ದಾಸೋಹದ ಮಹಾಮನೆಯಲ್ಲಿ ಅನ್ನ ಸಂತರೆ್ಣ ನೆರವೇರಿತು. ಗ್ರಾಮಪಂ ಮಾಜಿ ಸದಸ್ಯ ಹನುಮಂತ ಮಂಟೂರ ಕಾರ್ಯಕ್ರಮ ನಿರುಪಿಸಿ, ವಂದಿಸಿದರು.ಈ ಸಂದರ್ಭದಲ್ಲಿ ಗುರುಮಠದ ಪಂಚಾಕ್ಷರಿ ಹಿರೇಮಠ, ತಾಪಂ ಸದಸ್ಯ ಗಂಗಪ್ಪ ಕುರನಿಂಗ, ಶಿವಪ್ಪ ದಡ್ಡಿಮನಿ, ಗ್ರಾಪಂ ಮಾಜಿ ಅಧ್ಯಕ್ಷರುಗಳಾದ ನಿಂಗಪ್ಪ ನಿಡಗುಂದಿ, ಭೀಮಪ್ಪ ಮಂಟೂರ, ಕೆಂಪಣ್ಣ ಕುರನಿಂಗ, ಪುಟ್ಟುಗೌಡ ನಾಯಿಕ,
ಲಕ್ಷ್ಮಣ ಕೂಡಲಗಿ, ಗುರು ಅಂಗಡಿ, ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಅಡಿವೆಪ್ಪ ಭದ್ರಶೆಟ್ಟಿ, ಪಿಕೆಪಿಎಸ್ ಸಂಘದ ಅಧ್ಯಕ್ಷ ಮಹಾದೇವ ಅಂಗಡಿ, ಉಪಾಧ್ಯಕ್ಷ ಕೃಷ್ಣಪ್ಪ ಬಿರಾಜ, ಪಿಕೆಪಿಎಸ್ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಹನುಮಂತ ಮಂಟೂರ, ಜೊತಪ್ಪ ಬಿಳಿಕುರಿ, ನಿಂಗಪ್ಪ ಸನದಿ, ರೈತ ಸಂಘದ ಅಧ್ಯಕ್ಷ ರಮೇಶ ಕಲ್ಲಾರ, ಮುತ್ತಪ್ಪ ಭದ್ರಶೆಟ್ಟಿ, ಬರಮಪ್ಪ ಮಂಟೂರ, ಯಮನಪ್ಪ ಬಿಳಿಕುರಿ, ತಮ್ಮಣ್ಣ ದೊಡಮನಿ, ಯಮನಪ್ಪ ಮೆಳವಂಕಿ, ಬರಮಪ್ಪ ದೊಡಮನಿ, ಹನುಮಂತ ನಾಯಕ, ಬಸವರಾಜ ಬಿರಾಜ, ಬರಮಪ್ಪ ಬಾಗೋಜಿ, ಶ್ರೀಶೈಲ ಕೂಡಲಗಿ, ಮಹಾದೇವ ಬಿಜ್ಜರಗಿ, ಸಂಜು ಸಾಗಲೀಕರ, ಬಾಳಪ್ಪ ಐದುಮಣಿ, ಪ್ರಭಾ ದಿವಾಕರ, ಅವ್ವಣ್ಣ ಬಿಲ್ಕಾರ, ಲಕ್ಕಪ್ಪ ಮನ್ನಿಕೇರಿ, ಹನುಮಂತ ಮಂಟೂರ, ಬರಮಪ್ಪ ದೊಡಮನಿ, ಕಲ್ಲಪ್ಪ ದೊಡಮನಿ, ಅರ್ಜುನ ನಾಯಿಕ, ಧರೆಪ್ಪ ಬಿರಾಜ, ಲಕ್ಕಪ್ಪ ತುಕಾನಟ್ಟಿ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 