ಕಟ್ಟಡ ಕಾರ್ಮಿಕರ ನೂತನ ಪದಾಧಿಕಾರಿಗಳ ಪದಗ್ರಹಣ: ಬಸವರಾಜ್ ಶೀಲವಂತರ್

ಕಟ್ಟಡ ಕಾರ್ಮಿಕರ ನೂತನ ಪದಾಧಿಕಾರಿಗಳ ಪದಗ್ರಹಣ: ಬಸವರಾಜ್ ಶೀಲವಂತರ್  New office bearers of construction workers take oath: Basavaraj Sheelvantar

ಕೊಪ್ಪಳ 23 :ಕಟ್ಟಡಕಾರ್ಮಿಕರ ಸಂಘಟನೆಗಳ ಹೋರಾಟದ ಪರಿಣಾಮದಿಂದಾಗಿ ಕರ್ನಾಟಕ ಕಟ್ಟಡ ಮತ್ತುಇತರೆ ನಿರ್ಮಾಣಕಾರ್ಮಿಕರಕಲ್ಯಾಣ ಮಂಡಳಿ ರಚನೆಯಾಗಿದೆಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲುವಂತ ಹೇಳಿದರು.      

ನಗರದ ಮರ್ದಾನ್ - ಎ - ಗೈಬ್‌ದರ್ಗಾದಆವರಣದಲ್ಲಿ ನಡೆದ ಕೊಪ್ಪಳ ತಾಲೂಕಾಕಟ್ಟಡ ನಿರ್ಮಾಣಕಾರ್ಮಿಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್ ಮುಂದುವರೆದು ಮಾತನಾಡಿಕಟ್ಟಡಕಾರ್ಮಿಕರ ಒಳಿತಿಗಾಗಿ ಮೀಸಲಿರಿಸಿದ ಕಟ್ಟಡಕಾರ್ಮಿಕರಕಲ್ಯಾಣ ಮಂಡಳಿಯ ಹಣವನ್ನು ಈಗಿನ ಕಾರ್ಮಿಕ ಸಚಿವ ಸಂತೋಷ್‌ಎಸ್‌.ಲಾಡ್‌ಅವರು ವಿವಿಧಕಿಟ್ ಗಳನ್ನು ಹಂಚುವ ನೆಪದಲ್ಲಿಟೆಂಡರ್‌ಕರೆದು ಸಾವಿರಾರುಕೋಟಿ ರೂಪಾಯಿಗಳನ್ನು ಲೂಟಿ ಮಾಡುತ್ತಿದ್ದಾರೆ.ಸಚಿವರಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಸಂಘಟನೆಯು ಹೋರಾಟವನ್ನು ರೂಸಿಸಬೇಕು ಜೋತೆಗೆಕಲ್ಯಾಣ ಮಂಡಳಿಯ ಹಣವುಕಟ್ಟಡಕಾರ್ಮಿಕರು.ಅವರ ಮಕ್ಕಳು ಮತ್ತು ಮಹಿಳೆಯರ ಒಳಿತಿಗಾಗಿ ಬಳಕೆಯಾಗುವಂತೆ ಎಚ್ಚರ ವಹಿಸಬೇಕಾಗಿದೆ. 

ಕೇಂದ್ರ ಹಾಗೂ ರಾಜ್ಯ ಸರ್ಕಾರ ಇವು ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದರಿಂದಕಟ್ಟಡಕಾರ್ಮಿಕರಜೀವನ ಸುಧಾರಿಸಲು ಸಾಧ್ಯವಿಲ್ಲ.ಇದಕ್ಕೆ ಸಂಘಟಿತಐಕ್ಯ ಚಳುವಳಿಯನ್ನು ನಡೆಸುವುದು ಅನಿವಾರ್ಯವಾಗಿದೆಎಂದು ಹೇಳಿದರು.ಜನಪರ ಸಂಘಟನೆಗಳ ಒಕ್ಕೂಟದಅಧ್ಯಕ್ಷಎಸ್‌.ಎ.ಗಫಾರ್ ಮಾತನಾಡಿಯಾರೂ ಬೇಡಿಕೆಇಡದೇಇದ್ದರೂ ಸಹ ಈ ಹಿಂದಿನ ರಾಜ್ಯದ ಬಿಜೆಪಿ ಸರ್ಕಾರದಲ್ಲಿಕಟ್ಟಡಕಾರ್ಮಿಕರಆಯಾ ವೃತ್ತಿಗಳ ಉಪಕರಣಗಳ ಕಿಟ್ ಗಳನ್ನು ಹಂಚಿದ್ದನ್ನು ನಂತರ ಬಂದಕಾಂಗ್ರೆಸ್ ಸರ್ಕಾರದಕಾರ್ಮಿಕ ಸಚಿವ ಸಂತೋಷ್ ಲಾಡ್‌ಅವರನ್ನುಕಿಟ್ ಗಳ ಹೆಸರಿನಲ್ಲಿ ನಡೆಯುವ ಭ್ರಷ್ಟಾಚಾರಕುರಿತುಕಟ್ಟಡಕಾರ್ಮಿಕರ ಸಂಘಟನೆಯ ಮುಖಂಡರು ಮನವರಿಕೆ ಮಾಡಿದ್ದಾರೆ.ಆದರೂ ವಿವಿಧಕಿಟ್ ಗಳನ್ನು ಹಂಚುವುದನ್ನು ಮುಂದುವರಿಸಿರುವುದನ್ನು ನೋಡಿದರೆ ವ್ಯಾಪಕ ಭ್ರಷ್ಟಾಚಾರಕ್ಕೆಕುಮ್ಮಕ್ಕು ನೀಡಿದಂತಿದೆ.ನಗರದಕಟ್ಟಡಕಾರ್ಮಿಕರು ಸಾವಿರ ಸಾವಿರ ಸಂಖ್ಯೆಯಲ್ಲಿ ಬೀದಿ ಬೀದಿಗಳಿಂದ ರಸ್ತೆಗೆ ಇಳಿದು ಹೋರಾಟ ಮಾಡಿದರೆ ಮಂಡಳಿಯ ಹಣ ಉಳಿಸಲು ಮತ್ತುಕಟ್ಟಡಕಾರ್ಮಿಕರು ಸೌಲಭ್ಯ ಪಡೆಯಲು ಸಾಧ್ಯಎಂದು ನುಡಿದರು.    

ಸಂಘದ ಪ್ರಧಾನ ಕಾರ್ಯದರ್ಶಿ ಹಝರತ್ ಅಲಿ ಮುಜಾವರ ಮಾತನಾಡಿ ನಮ್ಮ ಸಂಘಟನೆಕ್ರಮೇಣವಾಗಿ ನಿಷ್ಕ್ರಿಯಗೊಳ್ಳುತ್ತ ಸ್ಥಗಿತಗೊಂಡಿತ್ತು.ಕಟ್ಟಡಕಾರ್ಮಿಕರಿಗೆ ಕೇಳೋರಿಲ್ಲದಂತಾಗಿತ್ತು.ನಮ್ಮಲ್ಲಿ ತಿಳುವಳಿಕೆ ಇಲ್ಲದ್ದಕ್ಕೆ ಸಂಘಟನೆಆಗುತ್ತಿಲ್ಲ.ಸರಿಯಾದ ಮಾರ್ಗದರ್ಶನಇಲ್ಲ. ಇನ್ನೂ ಮುಂದೆ ಕೆಲವಷ್ಟು ಜನ ಪುನಃ ಸಂಘಟನೆಕಟ್ಟಲು ನಿಂತಿದ್ದಾರೆ.ನಾವೆಲ್ಲರೂ ಸೇರಿಕಟ್ಟಡಕಾರ್ಮಿಕರಿಗಾಗಿ ಹೋರಾಟ ಮಾಡಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯೋಣ. ಕಟ್ಟಡಕಾರ್ಮಿಕರುದೇಶದಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆಎಂದು ಹೇಳಿದರು.ಕೊಪ್ಪಳ ತಾಲೂಕಾಕಟ್ಟಡ ನಿರ್ಮಾಣಕಾರ್ಮಿಕರ ಸಂಘದ ನೂತನಅಧ್ಯಕ್ಷ ಶಾಬುದ್ದೀನ್ ಜವಳಗೇರಾ ಅಧ್ಯಕ್ಷತೆ ವಹಿಸಿ ಮಾತನಾಡಿಎಲ್ಲಾಕಟ್ಟಡಕಾರ್ಮಿಕರು ಸಹಕಾರ ನೀಡಿ ಮುಂದಿನ ದಿನಗಳಲ್ಲಿ ಚೆನ್ನಾಗಿ ಕೆಲಸ ಮಾಡೋಣಎಂದು ಹೇಳಿದರು. ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು, ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.