ಹುಕ್ಕೇರಿ ಬಸ್ ನಿಲ್ದಾಣದಲ್ಲಿ ನೂತನ ಬಸ್‌ಗಳಿಗೆ ಚಾಲನೆ

ಹುಕ್ಕೇರಿ ಬಸ್ ನಿಲ್ದಾಣದಲ್ಲಿ ನೂತನ ಬಸ್‌ಗಳಿಗೆ ಚಾಲನೆ  New buses flagged off at Hukkeri bus stand

ಲೋಕದರ್ಶನ ವರದಿ 

ಹುಕ್ಕೇರಿ  27: ಕ್ಷೇತ್ರದ ಜನರ ಸಾರಿಗೆ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹುಕ್ಕೇರಿ ವಿಧಾನಸಭಾ ಕ್ಷೇತ್ರಕ್ಕೆ ಇಂದು 2 ನೂತನ ಸಾರಿಗೆ ಬಸ್‌ಗಳನ್ನು ಸೇರೆ​‍್ಡ ಮಾಡಲಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.  ಅವರು ಪಟ್ಟಣದ ನಿಲ್ದಾಣದಲ್ಲಿ ನೂತನ ಬಸ್‌ಗಳಿಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿ ಮಾತನಾಡಿದರು.   

, "ಕ್ಷೇತ್ರದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಮತ್ತು ಸಾಮಾನ್ಯ ಪ್ರಯಾಣಿಕರಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಹೊಸ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಅನುದಾನದೊಂದಿಗೆ ಈ ಬಸ್‌ಗಳನ್ನು ತರಲಾಗಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು" ಎಂದು ಹೇಳಿದರು 

.ಹೊಸದಾಗಿ ಸೇರೆ​‍್ಡಯಾದ ಬಸ್‌ಗಳು ಹುಕ್ಕೇರಿಯಿಂದ ಜಮಖಂಡಿ, ಬೆಳಗಾವಿ, ಹುಕ್ಕೇರಿ, ಇಂಚಲಕರಂಜಿ, ಬೆಳಗಾವಿ, ಗೋಕಾಕ್, ಸಂಕೇಶ್ವರ ಮತ್ತು ಸುತ್ತಮುತ್ತಲಿನ ಪ್ರಮುಖ ಗ್ರಾಮಗಳಿಗೆ ಹೆಚ್ಚುವರಿ ಟ್ರಿಪ್‌ಗಳನ್ನು ನಿರ್ವಹಿಸಲಿವೆ. ಬೆಳಿಗ್ಗೆ ಮತ್ತು ಸಂಜೆ ಶಾಲಾ ಕಾಲೇಜು ಸಮಯದಲ್ಲಿ ಹೆಚ್ಚಿನ ದಟ್ಟಣೆ ಇರುವುದನ್ನು ಗಮನಿಸಿ ಈ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

"ಕಳೆದ ಕೆಲವು ವರ್ಷಗಳಿಂದ ಹುಕ್ಕೇರಿ ಕ್ಷೇತ್ರದಲ್ಲಿ ಸಾರಿಗೆ ಸೌಲಭ್ಯ ವಿಸ್ತರಣೆಗೆ ನಿರಂತರ ಬೇಡಿಕೆ ಇತ್ತು. ಈಗಾಗಲೇ ಹಲವು ಹೊಸ ಮಾರ್ಗಗಳಿಗೆ ಬಸ್ ಬಿಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ 15 ಬಸ್‌ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ" ಹೊಸ ಬಸ್‌ಗಳಿಂದ ಸುಮಾರು 15 ಗ್ರಾಮಗಳ 5000ಕ್ಕೂ ಹೆಚ್ಚು ಜನರಿಗೆ ನೇರ ಪ್ರಯೋಜನವಾಗಲಿದೆ ಎಂಬ ನೀರೀಕ್ಷೆ ಇದೆ. ಪ್ರಯಾಣಿಕರು ಸಮಯಪಾಲನೆ ಮಾಡಿ, ಬಸ್‌ಗಳನ್ನು ಸ್ವಚ್ಛವಾಗಿ ಇರಿಸಿ ಸಹಕರಿಸಬೇಕೆಂದು ಸಂಸ್ಥೆ ಅಧಿಕಾರಿಗಳು  ಎಂದು ಹೇಳಿದರು. 

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಸತ್ಯಪ್ಪ ನಾಯಿಕ, ಕೆ.ಎಂ.ಎಫ್ ನಿರ್ದೇಶಕ ರಾಯಪ್ಪ ಡೂಗ, ಪಿಕಾರ್ಡ್‌ ಬ್ಯಾಂಕ್ ನಿರ್ದೇಶಕ ಗುರು ಕುಲಕರ್ಣಿ, ಮುಖಂಡರಾದ ಚನ್ನಪ್ಪ ಗಜಬರ, ಸುನೀಲ ಭೈರನ್ನವರ.ರಾಜು ಮುಜಾವರ, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಉಪಸ್ಥಿತರಿದ್ದರು.