ಭಾರತೀಯರಿಗೆ ಹೊಸ ವರ್ಷ ಯುಗಾದಿನೇ: ನಂದು ಗಾಯಕವಾಡ

New Year for Indians is Ugadi: Nandu Gaikwad

ರಾಣಿ ಚೆನ್ನಮ್ಮ ವೃತ್ತದಲ್ಲಿ ಹಿಂದೂ ಸಂಘಟನೆ ವತಿಯಿಂದ ಬ್ರಿಟಿಷರ ಹೊಸ ವರ್ಷ ಬೇಡ ಎಂದು ಬೃಹತ್ ಪ್ರತಿಭಟನೆ.  

ಮಹಾಲಿಂಗಪುರ 31 : ಕಾಲಚಕ್ರ ಉರುಳಿ ನಾಳೆ ಬರಲಿರುವ ಇನ್ನೊಂದು ಕ್ಯಾಲೆಂಡರ್ ಹೊಸ ವರ್ಷ ಸ್ವಾಗತಿಸುವ ವಸ್ತುಲಿನಲ್ಲಿ ನಾವಿದ್ದೇವೆ. ಆದರೆ ಭಾರತೀಯರಾದ ನಾವು ನಮಗೆ ಯುಗಾದಿನೇ ನಮ್ಮ ಪಾಲಿನ ಹೊಸ ವರ್ಷ ಸಾಂಪ್ರದಾಯಿಕವಾಗಿ ಯುಗಾದಿ ಹಬ್ಬವನ್ನು ನಮ್ಮನ್ನು ಬೆಳೆಸಿದೆ, ಎಂದು ಹಿಂದೂ ಸಂಘಟನೆ ಮುಖಂಡ ನಂದು ಗಾಯಕವಾಡ ಹೇಳಿದರು.  

ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದ ಇಂಗ್ಲಿಷ್ ಹೊಸ ವರ್ಷಾಚರಣೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ನಮ್ಮ ದೇಶ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಆದರೆ ಇಂದಿನ ಯುವ ಜನತೆ ವಿದೇಶಿ ಸಂಸ್ಕೃತಿಗೆ ಮಾರು ಹೋಗಿ ಮೋಜು ಮಸ್ತಿ ಮಾಡುವುದರಗೋಸ್ಕರ ಜನವರಿ 1 ನ್ನು ಹೊಸ ವರ್ಷ ಆಚರಣೆಯ ಮಾಡುವುದರ ಸಲುವಾಗಿ ಅದರ ಹಿಂದಿನ ದಿನ ಡಿಸೆಂಬರ್ 31 ರಂದು ಕುಡಿದು ತಿಂದು ಮೋಜು ಮಸ್ತಿ ಮಾಡಿ ಇಂಗ್ಲೀಷರ ಹೊಸವರ್ಷವನ್ನು ಬರಮಾಡಿಕೊಳ್ಳುವಲ್ಲಿ ತೊಡಗಿರುವುದು ವಿಷಾದನೀಯ ಸಂಗತಿ ಎಂದರು. 

*ಭರತ ಖಂಡದಲ್ಲಿ: ನಂತರ ಮಾತನಾಡಿದ ಊರ ಸಭೆ ಸದಸ್ಯರಾದ ರವಿ ಜವಳಗಿ ವಿವಿಧತೆಯಲ್ಲಿ ಏಕತೆಯು ನಮ್ಮ ಮೂಲ ಮಂತ್ರವಾಗಿರುವುದರಿಂದ ನಮ್ಮಲ್ಲಿ ಬೇರೆ ಬೇರೆ ಪ್ರದೇಶದಲ್ಲಿ ಮತ್ತು ಧರ್ಮಗಳಲ್ಲಿ ಹೊಸ ವರ್ಷದ ಆಚರಣೆಗಳು ವಿಭಿನ್ನ ಉತ್ತರ ಭಾರತದಲ್ಲಿ ಹಿಂದೂಗಳು ದೀಪಾವಳಿ ಹೊಸ ವರ್ಷ ಪಂಜಾಬಿನಲ್ಲಿ ಏಪ್ರಿಲ್ 13 ಬೈಸಾಕಿ ಹೆಸರಿನಿಂದ ಆಚರಿಸುತ್ತಾರೆ. ಗುರು ಗೋವಿಂದ ಸಿಂಗ್ 1699 ರಲ್ಲಿ ಧರ್ಮ ಸೇನೆ ಖಾಲ್ಸವನ್ನು ಸ್ಥಾಪಿಸಿದರಿಂದ ಹೆಚ್ಚು ಮಹತ್ವ ಪಡೆದಿದೆ. ದಕ್ಷಿಣ ಭಾರತದಲ್ಲಿ ಯುಗಾದಿ ಎಂದೇ ಹೊಸ ವರ್ಷ ಆಚರಿಸುತ್ತಾರೆ, ಕನ್ನಡಿಗರಿಗೆ ಯುಗಾದಿನೇ ಹೊಸ ವರ್ಷ ಎಂದರು.  

ನಂತರ ಮಾತನಾಡಿದ ವಕೀಲರಾದ ಅರ್ಜುನ ಗೋವಿಂದ ಪವಾರ ಯುಗಾದಿ ಹಬ್ಬವನ್ನು ಅತಿ ವಿಜೃಂಭಣೆಯಿಂದ ಆಚರಿಸಿ ಇಂದಿನ ಯುವ ಜನತೆಗೆ ಯುಗಾದಿ ಮಹತ್ವ ನಮ್ಮ ಹೊಸ ವರ್ಷದ ಬಗ್ಗೆ ತಿಳಿಸುವುದು ಅತಿ ಮುಖ್ಯವಾಗಿದೆ. ಆದ್ದರಿಂದ ಯುಗಾದಿಯಂದು ನಗರದಲ್ಲಿ ಅನೇಕ ಕಡೆ ಹಬ್ಬ ಆಚರಿಸಿ ಸಭೆ ಸಮಾರಂಭಗಳನ್ನು ನಡೆಸಿ ಯುವಕರು ಮನಪರಿವರ್ತಿಸುವುದು ಅದರಲ್ಲಿ ಯುಗಾದಿ ಬಗ್ಗೆ ಹಿಂದುತ್ವ ಬಗ್ಗೆ ರಕ್ತದ ಕನಕನದಲ್ಲಿ ಹೆಸರಿಸುವಂತೆ ಮಾಡಬೇಕೆಂದು ಹೇಳಿದರು.  

*ಯುಗಾದಿಯ ಮಹತ್ವ: ಹಿಂದೂ ಪುರಾಣಗಳು ಪ್ರಕಾರ ಯುಗಾದಿ ಎಂದರೆ ಹೊಸ ರೋಗದ ಆರಂಭ, ಎಂದೆ ಅರ್ಥ ಈ ದಿನದಂದು ಬ್ರಹ್ಮದೇವ ಬ್ರಹ್ಮಾಂಡ ಸೃಷ್ಟಿಯನ್ನು ಆರಂಭಿಸಿದ ದಿನ, ಮನಕುಲದ ಸೃಷ್ಟಿ ಮಾಡಿದ ದಿನ ಚೈತ್ರ ನವರಾತ್ರಿ ಆರಂಭದ ದಿನ, ಚೈತ್ರ ಮಾಸದ ಮೊದಲ ದಿನ ಭಾರತದ ಹಲವು ರಾಜ್ಯಗಳಲ್ಲಿ ಹೊಸ ವರ್ಷವನ್ನು ಆಚರಿಸುತ್ತಾರೆ.  

*ಇತಿಹಾಸ: ಹೊಸ ವರ್ಷಾಚರಣೆಗೆ ಸುದೀರ್ಗ ಇತಿಹಾಸ ನಾಲ್ಕು ಸಾವಿರ ವರ್ಷಗಳಷ್ಟು ಹಿಂದೆ ಪ್ರಾಚೀನ ಬ್ಯಾಬಿಲೋನಿಯನ್ನರು (ಈಗಿನ ಇರಾಕ್) ಹೊಸ ವರ್ಷದ ಆಚರಣೆ ಮಾಡುತ್ತಿದ್ದಾರೆಂದು ತಿಳಿದು ಬರುತ್ತದೆ. ಕ್ರಿ .ಶ. ಪೂ 2000 ರಲ್ಲಿ ಚಳಿಗಾಲ ಮುಗಿದ ಮೊದಲ ಪಾಡ್ಯದ ದಿನ ಮಾರ್ಚ್‌ 1 ಇದನ್ನು ಆಚರಣೆ ಮಾಡುತ್ತಿದ್ದರಂತೆ. ಆಗ ಹೊಸ ವರ್ಷವನ್ನು 11 ದಿನ ಆಚರಿಸುತ್ತಿದ್ದರು. 

ಚೀನಾ ದೇಶದವರು ಕೂಡ ಪ್ರತಿ ವರ್ಷ ಜನವರಿ 17 ರಂದು ಫೆಬ್ರುವರಿ 19 ರ ಮಧ್ಯೆ ಬರುವ ಪಾಡ್ಯದ ದಿನವನ್ನು (ಯು ಆನ್ ಟ್ಯಾನ್) ಹೊಸ ವರ್ಷ ದಿನ ಎಂದು ಆಚರಿಸುತ್ತಾರೆ.  

ಇದೇ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಮಹಾಲಿಂಗ ಕಂಕಣವಾಡಿ, ಮಲ್ಲೇಶ ಹೊಸಮನಿ, ಶ್ರೀಶೈಲ ಮಠ, ವಿಜಯ ಸಬಕಾಳೆ , ಸಂಜೀವ ಬಾರಕೋಲ,ವೀರಭದ್ರ ಮೂಗಲ್ಯಾಳ,ಹನಮಂತ ಜಮಾದಾರ, ರಾಜು ಚಮಕೇರಿ, ರವಿ ಜವಳಗಿ , ನಾಗರಾಜ ಭಜಂತ್ರಿ, ರಾಘು ಗರಘಟಗಿ, ಶಿವು ಹುಣಶ್ಯಾಳ, ಪುಂಡಲೀಕ ಗಡೇಕರ, ರಮೇಶ ಕೇಸರಗೊಪ್ಪ, ಶಿವನಗೌಡ ಪಾಟೀಲ, ಚೇತನ ಹುಣಶ್ಯಾಳ, ಚೇತನ ಬಂಡಿ, ಸಂತೋಷ ಹಜಾರೆ, ಸಚೀನ ಕಲಮಡಿ,ಅಭಿ ಲಮಾಣಿ,ಮಹಾಲಿಂಗ ಕಲಾಲ, ಆನಂದ ಶಿರಗುಪ್ಪಿ,ರವಿ ಹಂದಿಗುಂದ ಕಾಳಪ್ಪ ಪತ್ತಾರ, ಚೇತನ ಬಂಡಿವಡ್ಡರ,ಬಸು ಮುರಾರಿ,ರಘು ಶಿರೋಳ,ಮಹಾಲಿಂಗ ಜಮಖಂಡಿ,ಮಹಾಲಿಂಗ ದೇಸಾಯಿ, ಶ್ರೀನಿಧಿ ಕುಲಕರ್ಣಿ, ರಾಘು ಕಪ್ಪರಟ್ಟಿ, ಭೈರಶ ಆದ್ದೆಪ್ಪನ್ನವರ, ರವಿ ಮುಂಡಗನೂರ , ಸಚಿನ್ ಬಂಡಿ, ಪರಮಾನಂದ ಬಂದಕ್ಕನವರ, ದತ್ತ ಯರಗಟ್ಟಿರ,ಬಸು ಗಿರಿಸಾಗರ ,ಮಂಜು ಸಿಂಪಿ,ಮಂಜು ಗೊಂಬಿ, ರಾಕೇಶ ಕೇಸರಗೋಪ್ಪ, ಅಕ್ಷಯ ಜಲ್ಲಿ,ಸಚಿನ ದಾನಗೊಂಡ, ರೀತಿಕ್ ಗೊಲ್ಲರ,ಅನಿಲ್ ಹಾವೇರಿ, ಆನಂದ ಪವಾರ, ಅನೀಲ ಖವಾಶಿ, ಸಂದೀಪ ಸೊರಗೊಂಡ,ಸೇರಿದಂತೆ ನೂರಾರು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು.