ನಾಳೆ ಮಹಾತಪಸ್ವಿ ಶಿವಯೋಗಿವರ್ಯ ಶ್ರೀಗುರು ಮಳೇಂದ್ರ ಸ್ವಾಮಿಗಳ ನೂತನ ಮಹಾ ರಥೋತ್ಸವ

ಲೋಕದರ್ಶನವರದಿ

ಹುನಗುಂದ20: ತಾಲೂಕಿನ ತೂರಮರಿ ಗ್ರಾಮದಲ್ಲಿ ಫೆ.22ರಂದು ಮಹಾತಪಸ್ವಿ ಶಿವಯೋಗಿವರ್ಯ ಶ್ರೀಗುರು ಮಳೇಂದ್ರ ಸ್ವಾಮಿಗಳ ನೂತನ ಮಹಾ ರಥೋತ್ಸವ, ಅಫಜಲಪೂರದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ 151 ನೇ ತುಲಾಬಾರ  ಹಾಗೂ ಜಾತ್ರಾ ಮಹೋತ್ಸವ ಶಿವರಾತ್ರಿ ಅಮಾವಾಸ್ಯೆಯ ದಿನ ಜರುಗಲಿದೆ.

      ಫೆ.22 ಮತ್ತು 23 ರಂದುರಾತ್ರಿ ಜಾತ್ರೆಯ ನಿಮಿತ್ಯೆ ಮುದ್ದೇಬಿಹಾಳ ಹುಲಿಗೆಮ್ಮದೇವಿ ಭಜನಾ ಮಂಡಳಿ ಮತ್ತು ಗಂಜಿಹಾಳದ ಅನ್ನದಾನೇಶ್ವರ ಭಜನಾ ಮಂಡಳಿ,  ಶರಣಪ್ಪ ವಡಗೇರಿಯ ಇವರಿಂದ ಭಜನಾಪದಗಳ ಕಾರ್ಯಕ್ರಮ ನಡೆಯಲಿದೆ.

    22 ರಂದು ಬೆಳಿಗ್ಗೆ ಮಳೇಂದ್ರ ಸ್ವಾಮೀಜಿ ಗದ್ದುಗೆಗೆ ರುದ್ರಾಭಿಷೇಕ ಹಾಗೂ   ಬಿಲ್ವಾರ್ಚನೆಯನ್ನು    ಬಳಗಾನೂರದ ಮಲ್ಲಯ್ಯ ಹೊಸಮಠ ನೇರವೇರಿಸುವವರು. ಮಧ್ಯಾಹ್ನ ಅನ್ನ ಸಂತರ್ಪನೆ ಜರುಗುವುದು. ಮಳೇಂದ್ರ  ಸ್ವಾಮಿಜಿಯ ರಥೋತ್ಸವಕ್ಕೆ ಘಟ್ಟಿಗನೂರ ಗ್ರಾಮದಿಂದ ಕಳಸ, ಮಲಗಿಹಾಳದಿಂದ ನಿಶಾನೆ, ಬೂದಿಹಾಳ ಎಸ್.ಕೆ ಗ್ರಾಮದಿಂದ ಬಾಳಿಕಂಬ, ತೆಂಗಿನಗರಿ, ತಳಿರು ತೋರಣ  ಹೇಮವಾಡಗಿಗಳಿಂದ ರುಧ್ರಾಕ್ಷಿ ಮಾಲೆ ನಿಡಸನೂರ ಗ್ರಾಮದಿಂದ ತೇರಿನ ಹಗ್ಗ ಬರುವುದು ರಥವನ್ನು ಶೃಂಗಾರ ಮಾಡಲಾಗುವುದು. ಸಂಜೆ5.30ಕ್ಕೆ  ರಥೋತ್ಸವಜರುಗುವುದು.

     ಜಾತ್ರಾ ಮಹೋತ್ಸವ  ಸಾನಿಧ್ಯವನ್ನುಅಫಜಲಪೂರದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ದಾಸಬಾಳದ  ವೀರೇಶ್ವರ ಸ್ವಾಮೀಜಿ, ನಂದವಾಡಗಿಡಾ.ಮಹಾಂತಲಿಂಗ ಸ್ವಾಮೀಜಿ, ಕುಷ್ಟಗಿಯಕರಿಬಸವ ಸ್ವಾಮೀಜಿ, ಕಂಬಲಿ ಹಾಳದ ದೊಡ್ಡ ಬಸವಾರ್ಯತಾತನವರು, ಅಂಕಲಿಮಠದ  ವೀರಭದ್ರ ಸ್ವಾಮೀಜಿ, ವೇ. ಮೂ. ಸಂಗಯ್ಯ ಬ.ಹಿರೇಮಠ ಸ್ವಾಮೀಜಿ  ವಹಿಸಲಿದ್ದಾರೆ. ರಥದದಾನಿಯಾದ ಎಸ್.ಆರ್.ಎನ್.ಇ ಫೌಂಡೇಶನದ ಅಧ್ಯಕ್ಷ ಎಸ್.ಆರ್.ನವಲಿಹಿರೇಮಠ ಕಾರ್ಯಕ್ರಮದಲ್ಲಿ ಭಾಗವಹಿಸಿ ರಥವನ್ನು ಉದ್ಘಾಟಿಸುವರು.

        ಉದ್ಘಾಟಕರಾಗಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ದೊಡ್ಡನಗೌಡ ಪಾಟೀಲ, ಅಧ್ಯಕ್ಷತೆಯನ್ನು ಗ್ರಾಮದ ಮಾರ್ತಂಡರಾವ ದೇಸಾಯಿ  ವಹಿಸಲಿದ್ಧಾರೆ. ಮುಖ್ಯ ಅತಿಥಿಗಳಾಗಿ ಮಾಜಿ  ಶಾಸಕ   ವಿಜಯಾನಂದಕಾಶಪ್ಪನವರ,  ಬಲಕುಂದಿ ಜಿಲ್ಲಾ ಪಂಚಾಯತಿ ಸದಸ್ಯೆಕಸ್ತೂರಿ ಜಾಧವ,  ಗ್ರಾಮ ಪಂಚಾಯತಿ ಸದಸ್ಯರಾದ ಜಗದೀಶ ತೋಟದ, ಶಿವವ್ವ  ನೀರಡ್ಡಿ, ಬೂದಿಹಾಳ ಪಿಕೆಪಿಎಸ್ಅಧ್ಯಕ್ಷ ಹುಲಗಪ್ಪಕೊಣ್ಣೂರ, ರಮೇಶ ತುರಡಗಿ, ಶರಣಬಸು ನಾರಗಲ್ಲ, ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯ ತಿಳಿಸಿದೆ.