ಕಣವಿತಿಮ್ಮಲಾಪುರ ಸ.ಹಿ.ಪ್ರಾ ಶಾಲೆಗೆ ನೂತನ ಎಸ್ಡಿಎಂಸಿ ರಚನೆ
New SDMC formed for Kanavithimmalapura S.H.P.R. School
ಕಂಪ್ಲಿ 24: ತಾಲೂಕಿನ ನಂ.10 ಮುದ್ದಾಪುರ ಗ್ರಾಪಂ ವ್ಯಾಪ್ತಿಯ ಕಣವಿತಿಮ್ಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನೂತನ ಎಸ್ಡಿಎಂಸಿ ರಚಿಸಲಾಯಿತು. ನೂತನ ಅಧ್ಯಕ್ಷ ಒ.ಬಿ.ತಿಮ್ಮಪ್ಪ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿ, ಮೂರು ವರ್ಷದ ಶಾಲಾ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷ ಸ್ಥಾನಕ್ಕೆ ನಮ್ಮನ್ನು ಸದಸ್ಯರು, ಗ್ರಾಮಸ್ಥರು ನೇಮಕ ಮಾಡಿದ್ದು, ಈ ಸ್ಥಾನದಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದ್ದು, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಲಾಗುವುದು.
ಇಲ್ಲಿನ ಶಾಲೆಯಲ್ಲಿ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇನ್ನೂ ನಾಲ್ಕು ಹೊಸ ಕೊಠಡಿಗಳ ಅವಶ್ಯಕತೆಯಿದ್ದು, ಮಾನ್ಯ ಶಾಸಕರು, ಅಧಿಕಾರಿಗಳು ಮಕ್ಕಳ ಶೈಕ್ಷಣಿಕ ಮಟ್ಟದ ಹಿತದೃಷ್ಟಿಯಿಂದ ಹೊಸ ಕೊಠಡಿಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಟಿ.ರಾಮಯ್ಯ, ಪ್ರಭಾರಿ ಮುಖ್ಯಗುರು ಎನ್.ವಿಶ್ವನಾಥ, ಸಹ ಶಿಕ್ಷಕ ಪರಶುರಾಮ, ಮುಖಂಡರಾದ ತಳವಾರ ರಾಮಲಿಸ್ವಾಮಿ, ಉಳ್ಳೂರು ಪಕ್ಕೀರ್ಪ, ಎಂ.ಶಿವಪ್ಪ, ಅಕ್ಕಿ ರೇಣುಕಪ್ಪ, ಎನ್.ಯಂಕಪ್ಪ, ಎನ್.ವಿರೇಶ, ಓರಾ್ಬಯಿ ಅಂಜಿನಪ್ಪ, ಪಿ.ಲಿಂಗಪ್ಪ, ಓರಾ್ಬಯಿ ವಿರೇಶ ಸೇರಿದಂತೆ ಸಹ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಆಯ್ಕೆ : ಇಲ್ಲಿನ ಸ.ಹಿ.ಪ್ರಾ.ಶಾಲೆಯ ಮುಂದಿನ ಮೂರು ವರ್ಷದ ಅವಧಿಗೆ ನೂತನ ಎಸ್ಡಿಎಂಸಿ ರಚಿಸಿ, ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರನ್ನು ಸರ್ವಾನುಮತದಿಂದ ನೇಮಕ ಮಾಡಲಾಯಿತು. ಒ.ಬಿ.ತಿಮ್ಮಪ್ಪ(ಅಧ್ಯಕ್ಷ), ಮುಕ್ಕಾರಿ ಈರಮ್ಮ(ಉಪಾಧ್ಯಕ್ಷೆ), ತಳವಾರ ಮಾರೆಪ್ಪ, ಸಣ್ಣ ಮಾರೇಶ, ಎನ್.ಹನುಮೇಶ, ಗಾಡಿ ದೇವಣ್ಣ, ನಾಯಕರ ರಾಮಪ್ಪ, ನಾಯಕರ ದುರುಗಮ್ಮ, ಗೌರಮ್ಮ, ಎಂ.ಎನ್.ಪಾರ್ವತಿ, ಅಕ್ಕಿ ಸುರೇಶ, ಜಿ.ಕವಿತಾ, ಜಿ.ರೇಣುಕಮ್ಮ ಜಿ.ಲಕ್ಷ್ಮಿ ವಿರೇಶ, ಹೆಚ್.ಲಿಂಗಪ್ಪ, ಪಾರ್ವತಿ, ಯು.ಮಹೇಶ, ನೀಲಮ್ಮ(ಸದಸ್ಯರು) ಇವರು ಆಯ್ಕೆಗೊಂಡರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 