ನವದೆಹಲಿ, ಏ 25,ಕರೋನ ನಿಯಂತ್ರಣಕ್ಕೆ ಬಂದಿರುವ ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಗಳ ವಸತಿ ಪ್ರದೇಶಗಳಲ್ಲಿ ಬರುವ ಅಂಗಡಿಗಳನ್ನು ತೆರೆಯಲು ಹೊಸ ಮಾರ್ಗಸೂಚಿ ಪ್ರಕಾರ ಅವಕಾಶ ನೀಡಿ, ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.ಆದರೆ ಸೋಂಕು ಹರಡದಂತೆ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆಯೂ ಎಚ್ಚರಿಕೆ ನೀಡಿದೆ. ವಸತಿ ಪ್ರದೇಶಗಳಲ್ಲಿನ ಅಂಗಡಿಗಳನ್ನು ತೆರೆಯಲು ಅವಕಾಶವಿದ್ದರೂ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಕಡ್ಡಾಯ ಮೇಲಾಗಿ ಶೇಕಡ 50ಕ್ಕಿಂತ ಕಡಿಮೆ ಸಿಬ್ಬಂದಿ ಇರಬೇಕು ಎಂಬ ನಿಯಮ ಪಾಲನೆ ಮಾಡಬೇಕು ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಮಾರುಕಟ್ಟೆ ಸ್ಥಳಗಳು, ಮಲ್ಟಿ ಬ್ರಾಂಡ್ ಮಾಲ್ ಗಳು ಕಾರ್ಯನಿರ್ವಹಣೆ ಮಾಡಲು ಅವಕಾಶವಿಲ್ಲ.