ನೂತನ ಮೀನು ಮಾರುಕಟ್ಟೆ ವಿವಾದ ಮೀನುಗಾರ ಮಹಿಳೆಯರಿಂದ ದಿಢೀರ್ ಧರಣಿ

ಕಾರವಾರ 19: ನಗರದಲ್ಲಿ ನಿಮರ್ಾಣ ಹಂತದಲ್ಲಿರುವ ನೂತನ ಮೀನು ಮಾರುಕಟ್ಟೆಯ ವಿಷಯಕ್ಕೆ ಸಂಬಂಧಿಸಿದಂತೆ ಮೀನುಗಾರ ಮಹಿಳೆಯರು ಮಾಜಿ ಶಾಸಕ ಸತೀಶ ಸೈಲ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಹಠಾತ್ ಧರಣಿ ನಡೆಸಿದ ಘಟನೆ  ನಡೆಯಿತು.

ಮೀನು ಮಾರುಕಟ್ಟೆ ನಿಮರ್ಾಣ ಕಾಮಗಾರಿ ಪ್ರಾರಂಭಗೊಂಡು ಮೂರು ವರ್ಷ ಕಳೆದರೂ, ಕಾಮಗಾರಿ ಮಾತ್ರ ಇನ್ನು ಮುಗಿದಿಲ್ಲ. ಉರಿ ಬಿಸಿಲಲ್ಲಿ, ರಾಷ್ಟ್ರೀಯ ಹೆದ್ದಾರಿ-66 ಪಕ್ಕದಲ್ಲಿ  ಕುಳಿತು ಮೀನು ಮಾರಾಟ ಮಾಡಬೇಕಾಗಿ ಬಂದಿದೆ. ನಮ್ಮ ಸಂಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ. ಅಲ್ಲದೇ ಸುಸಜ್ಜಿತ ಮಾರುಕಟ್ಟೆ ಇಲ್ಲದ ಕಾರಣ ಗ್ರಾಹಕರಿಗೂ ತೊಂದರೆ ಆಗುತ್ತಿದೆ ಎಂದು ಮಾದ್ಯಮಗಳ ಎದುರು ಮೀನು ಮಾರಾಟ ಮಹಿಳೆಯರು ಅಳಲು ತೋಡಿಕೊಂಡರು.  ಹೊಸ ಮಾರುಕಟ್ಟೆ ನಿಮರ್ಾಣದ ವಿಷಯದಲ್ಲಿ ಅಧಿಕಾರಿಗಳ ಭರವಸೆಯ ಮಾತು ಕೇಳಿ ಕೇಳಿ ಬೇಸತ್ತು ಹೋಗಿದ್ದೇವೆ ಎಂದು ಮೀನುಗಾರ ಮಹಿಳೆಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ನಿಮರ್ಾಣ ಹಂತದಲ್ಲಿರುವ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಕಡಿಮೆ ಸ್ಥಳಾವಕಾಶ ನೀಡಿ, ವ್ಯಾಪಾರ ಮಳಿಗೆಗಳಿಗೆ ಹೆಚ್ಚಿನ ಜಾಗವನ್ನು ನಗರಸಭೆ ನಿಗದಿಗೊಳಿಸಿದೆ ಎಂಬುದು ಗಮನಕ್ಕೆ ಬಂದಿದೆ. ಇದಕ್ಕೆ ಮೀನುಗಾರರ ಒಪ್ಪಿಗೆ ಇದೆ ಎನ್ನುವಂತೆ ಕೋಟರ್್ನಲ್ಲಿ ಅಫಿಡವಿಟ್  ನಗರಸಭೆ ಸಲ್ಲಿಸಿದೆ ಎನ್ನಲಾಗುತ್ತಿದೆ. ನಗರಸಭೆ  ಮೀನುಗಾರರಿಗೆ ಅನ್ಯಾಯ ಮಾಡಿದೆ ಎಂದು ಮೀನುಗಾರ ಮಹಿಳಾ ಸಂಘದ ಅಧ್ಯಕ್ಷೆ ಸುಶೀಲಾ ಹರಿಕಂತ್ರ  ಆರೋಪಿಸಿದರು.

ನಗರಸಭೆಯ ಓರ್ವ ಅಧಿಕಾರಿ  ಹಾಗೂ ನಗರಾಭಿವೃದ್ಧಿ ಕೋಶದ  ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡ ಮಾಜಿ ಶಾಸಕ ಸತೀಶ್ ಸೈಲ್, ಮೀನುಗಾರ ಮಹಿಳೆಯರಿಗೆ ಮೋಸ ಮಾಡಿ ಮಳಿಗೆಗಳಿಗೆ ಸ್ಥಳಾವಕಾಶ ನೀಡಲು ಮುಂದಾಗಿರುವುದನ್ನು ನಿಲ್ಲಿಸಿ. ಈ ಸಂಬಂಧ ಮತ್ತೊಮ್ಮೆ ಸಭೆ ನಡೆಸಿ ಎಂದು ಆಗ್ರಹಿಸಿದರು. ಈ ವೇಳೆ ಡಿವೈಎಸ್ಪಿ ಶಂಕರ್ ಮಾರಿಹಾಳ್, ತಾವೇ ಈ ಸಂಬಂಧ ಸಭೆ ಕರೆಯುವುದಾಗಿ ಭರವಸೆ ನೀಡಿದ ಬಳಿಕ ಧರಣಿಯನ್ನು ಹಿಂಪಡೆಯಲಾಯಿತು.

ಈ ವೇಳೆ ನಗರಸಭೆ ಸದಸ್ಯ ಮೋಹನ ನಾಯ್ಕ, ಮಾಜಾಳಿ ಗ್ರಾಮ ಪಂಚಾಯತ ಅಧ್ಯಕ್ಷ ರಾಜು ತಾಂಡೇಲ್, ಕಾಂಗ್ರೆಸ್ ಮುಖಂಡ ಶಂಭು ಶೆಟ್ಟಿ, ಚೇತನ ಹರಿಕಂತ್ರ, ಗೌರೀಶ ಹರಿಕಂತ್ರ ಹಾಗೂ ನೂರಾರು ಮೀನುಗಾರ ಮಹಿಳೆಯರು ಉಪಸ್ಥಿತರಿದ್ದರು.

ಮಾಜಿ ಶಾಸಕರದ್ದು ಢೋಂಗಿ ಹೋರಾಟ - ಕೈಗಾ ಸ್ಥಾವರದಲ್ಲಿ ಇವರದ್ದೇ ಗುಂಪುಗಳು ಕೆಲಸ ಮಾಡುತ್ತಿವೆ