ಲೋಕದರ್ಶನವರದಿ
ಹಾವೇರಿ26 : ನಗರದ ಬಿಜೆಪಿ ಪಕ್ಷದಕಛೇರಿಯಲ್ಲಿ ದಿ.28ರಂದು ನಗರದ ಶಿವಶಕ್ತಿ ಪ್ಯಾಲೇಸ್ನಲ್ಲಿ ಜರುಗುವ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆ ಜರುಗಿತು.
ಸಭೆಯನ್ನು ಉಧ್ಘಾಟಿಸಿ ಮಾತನಾಡಿದ ವಿಭಾಗ ಪ್ರಭಾರಿಗಳಾದ ಲಿಂಗಾರಜ ಪಾಟೀಲ ಬಿಜೆಪಿ ಪಕ್ಷ ಕಾರ್ಯಕರ್ತರ ಪಕ್ಷವಾಗಿದೆ. ನಮ್ಮ ಪಕ್ಷದಲ್ಲಿ ಮಾತ್ರ ಸಾಮಾನ್ಯ ಕಾರ್ಯಕರ್ತರು ಸಹ ಪಕ್ಷದ ಉನ್ನತ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಮಥ್ರ್ಯ ಹೊಂದಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ನೇಮಕವಾಗಿರುವ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ರಾಜ್ಯಾಧ್ಯಕ್ಷರೆ ಸ್ವತಃ ಪ್ರವಾಸ ಮಾಡುವುದರ ಮೂಲಕ ರಾಜ್ಯಾದ್ಯಂತಹ ಬಿಜೆಪಿಯನ್ನು ಮೊತ್ತೊಷ್ಟು ಪ್ರಬಲವಾಗಿಸುತ್ತಿದ್ದಾರೆ. ದಿ.28 ರ ಶುಕ್ರವಾರ ಸಾಯಂಕಾಲ 4 ಘಂಟೆಗೆ ನಗರದ ಶಿವಶಕ್ತಿ ಪ್ಯಾಲೇಸ್ನಲ್ಲಿ ನೂತನ ಜಿಲ್ಲಾಧ್ಯಕ್ಷರಾದ ಸಿದ್ದರಾಜ ಕಲಕೋಟಿಯವರ ಪದಗ್ರಹಣ ಸಮಾರಂಭಕ್ಕೆ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ರವರು ಆಗಮಿಸಲಿದ್ದಾರೆ ಎಂದು ಮಾತನಾಡಿದರು.
ಮಾಜಿ ಜಿಲ್ಲಾಧ್ಯಕ್ಷರಾದ ಶಿವರಾಜ ಸಜ್ಜನರ ಮಾತನಾಡಿ ಜಿಲ್ಲೆ ಬಿಜೆಪಿ ಮಯವಾಗಿದೆ. ಕಳೆದ 3 ವರ್ಷಗಳಲ್ಲಿ ನಡೆದ ಬಹುತೇಕ ಚುನಾವಣೆಗಳಲ್ಲಿ ಮೇಲುಗೈ ಸಾಧಿಸಿದೆ ಈ ಸಾಧನೆಗೆ ಪಕ್ಷದ ಕಾರ್ಯಕರ್ತರೆ ಕಾರಣ ಮುಂಬರುವ ಚುನಾವಣೆಗಳಲ್ಲಿ ಹಾಗೂ ಪಕ್ಷ ಸಂಘಟನೆಯಲ್ಲಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಪಕ್ಷ ಪ್ರಭಲವಾಗಲಿದೆ ಎಂದರು.
ಶಾಸಕರಾದ ನೆಹರು ಓಲೇಕಾರರವರು ಮಾತನಾಡಿ ದಿ.28ರಂದು ಪಕ್ಷದ ರಾಜ್ಯಾಧ್ಯಕ್ಷರು ಹಾವೇರಿ ಜಿಲ್ಲೆಗೆ ಬರಲಿದ್ದು, ಅಂದಿನ ಕಾರ್ಯಕ್ರಮಕ್ಕೆ ಎಲ್ಲ ಬೂತಗಳಿಂದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದರು.
ಜಿಲ್ಲಾಧ್ಯಕ್ಷರಾದ ಸಿದ್ದರಾಜ ಕಲಕೋಟಿ ಮಾತನಾಡಿ ಬಿಜೆಪಿ ಕಾರ್ಯಕರ್ತರ ಪಕ್ಷ ನಮ್ಮ ಪಕ್ಷದಲ್ಲಿ ವಂಶಾಡಳಿತಕ್ಕೆ ಅವಕಾಶವಿಲ್ಲ ಪಕ್ಷದಲ್ಲಿ ಸಾಮಥ್ರ್ಯಯುಳ್ಳುವರು ಪಕ್ಷದ ಪ್ರಮುಖ ಜವಾಬ್ದಾರಿಯವನ್ನು ಪಡೆಯಬಹುದು.
ನನ್ನಂತಹ ಸಾಮನ್ಯ ಕಾರ್ಯಕರ್ತನನ್ನು ಇಂದು ಪಕ್ಷ ಗುರುತಿಸಿ ಜಿಲ್ಲೆಯ ಪ್ರಮುಖ ಜವಾಬ್ದಾರಿಯಾದ ಜಿಲ್ಲಾಧ್ಯಕ್ಷತೆಯನ್ನು ವಹಿಸಿದೆ. ಪಕ್ಷ ವಹಿಸಿರುವ ಈ ಮಹ್ವತದ ಜವಾಬ್ದಾರಿಯನ್ನು ದಿ.28 ರಂದು ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ರವರು ಅಧಿಕೃತವಾಗಿ ಪಕ್ಷದ ಧ್ವಜ ನೀಡುವದರ ಮೂಲಕ ಹೊಣೆಗಾರಿಕೆಯನ್ನು ನೀಡಿಲಿದ್ದಾರೆ. ಪಕ್ಷದ ಹಾಲಿ ಹಾಗೂ ಮಾಜಿ ಸಂಸದರು ಶಾಸಕರು, ಚುನಾಯಿತ ಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಪಕ್ಷದ ಅಭಿಮಾನಿಗಳು ಆಗಮಿಸಬೇಕೆಂದು ಅಪೇಕ್ಷಿಸುತ್ತೇನೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷರಾದ ಭೋಜ ರಾಜಕರೋಧಿ, ಪಾಲಕ್ಷಗೌಡ ಪಾಟೀಲ, ಶಿವಾನಂದ ಮ್ಯಾಗೇರಿ, ಸಂತೋಷ ಆಲದಕಟ್ಟಿ. ರಾಜು ಜರತಾ ರಘರ್ ಸೇರಿದಂತೆ ಅನೇಕರು ಇದ್ದರು.
ದುರ್ಬಲರಿಗೆ, ದೀನದಲಿತರಿಗೆ ಸಹಾಯ ನೀಡುವುದೇ ಧರ್ಮ: ಬಸವರಾಜ