ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂತನ ಬ್ರಹ್ಮರಥ

ಮಂಗಳೂರು, ಅ 1 :     ದಕ್ಷಿಣ ಕನ್ನಡದ ಪ್ರಮುಖ ಯಾತ್ರಾಸ್ಥಳ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಉದ್ಯಮಿ ಮುತ್ತಪ್ಪ ರೈ ದೇರ್ಲ ಮತ್ತು ಅಜಿತ್ ಶೆಟ್ಟಿ ಕಡಬ ಅರ್ಪಣೆ ಮಾಡಲಿರುವ ಬ್ರಹ್ಮರಥಕ್ಕೆ ಮಂಗಳವಾರ ಕದ್ರಿಯಿಂದ ಚಾಲನೆ ನೀಡಲಾಯಿತು. ಸೋಮವಾರ ಕೋಟೇಶ್ವರದಿಂದ ಹೊರಟಿದ್ದ ಬ್ರಹ್ಮರಥ ಹೊತ್ತ ಬೃಹತ್ ಟ್ರಕ್ ರಾತ್ರಿ ಮಂಗಳೂರು ತಲುಪಿ ಕದ್ರಿಯಲ್ಲಿ ತಂಗಿತ್ತು. ಇಂದು ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಪ್ರಯಾಣ ಮುಂದುವರಿಸಿತು.  ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್.ಲೋಬೊ, ಕದ್ರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎ.ಜೆ.ಶೆಟ್ಟಿ, ಮಾಜಿ ಮೇಯರ್ ಭಾಸ್ಕರ ಮೊಯ್ಲಿ, ಸುಧೀರ್ ಶೆಟ್ಟಿ ಕಣ್ಣೂರು, ರಾಕೇಶ್ ಮಲ್ಲಿ, ಅಶೋಕ್ ಕುಮಾರ್ .ಡಿ.ಕೆ, ವಿಶ್ವಾಸ್ ಕುಮಾರ್ ದಾಸ್, ಪುಷ್ಪರಾಜ ಜೈನ್, ಕಳ್ಳಿಗೆ ತಾರಾನಾಥ ಶೆಟ್ಟಿ, ಸಂಜೀವ ಮಡಿವಾಳ್, ರಾಜಗೋಪಾಲ್ ರೈ, ಟಿ.ಕೆ.ಸುಧೀರ್ , ಸುಬ್ರಹ್ಮಣ್ಯ ದೇವಸ್ಥಾನ ದ ಆಡಳಿತ ಮಂಡಳಿ ಅದ್ಯಕ್ಷ ನಿತ್ಯಾನಂದ ಮುಂಡೋಡಿ, ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.

    ಅಪೂರ್ವ ಕಾಷ್ಠ ಶಿಲ್ಪ ವೈಭವದ ಬ್ರಹ್ಮರಥ       ಆಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಹಿಂದಿನ ಬ್ರಹ್ಮರಥದಂತೆ ಕೋಟೇಶ್ವರ ಸಮೀಪದ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಲ್ಪಗುರು ಲಕ್ಷ್ಮೀನಾರಾಯಣ ಆಚಾರ್ಯರ ನೇತೃತ್ವದಲ್ಲಿ ಬ್ರಹ್ಮರಥ ನಿಮರ್ಾಣಗೊಂಡಿದೆ. ಉದ್ಯಮಿ ಎನ್.ಮುತ್ತಪ್ಪ ರೈ ದೇರ್ಲ ಮತ್ತು ಯುವ ಉದ್ಯಮಿ ಅಜಿತ್ ಶೆಟ್ಟಿ ಕಡಬ 2.50 ಕೋಟಿ ರೂ.ವೆಚ್ಚದಲ್ಲಿ ನೂತನ ಬ್ರಹ್ಮರಥವನ್ನು ಕಾಣಿಕೆಯಾಗಿ ದೇವರಿಗೆ ಅಪರ್ಿಸಲಿದ್ದಾರೆ.

    ಈಗಿನ ಬ್ರಹ್ಮರಥದ ಪ್ರಾಚೀನ ಶಿಲ್ಪಕಲೆಗೆ ಧಕ್ಕೆ ಆಗದಂತೆ ಅದೇ ಆಯ, ಅಳತೆ, ಶಾಸ್ತ್ರಗಳ ತದ್ರೂಪದಲ್ಲಿ ಕಲಾ ಶಿಲ್ಪ ವೈಭವ ಮೂಡಿಬಂದಿದೆ. ಸ್ಯಂದ್ಯನ ರಥ:  ಶಿಲ್ಪಶಾಸ್ತ್ರದ ಪ್ರಕಾರ ಸ್ಯಂದ್ಯನ ರಥ(ಬ್ರಹ್ಮರಥ) ತಯಾರಿಸಲಾಗುತ್ತಿದೆ. ನೆಲದಿಂದ ಜಿಡ್ಡೆಯ ತನಕ 17 ಅಡಿ ಎತ್ತರ ಹೊಂದಿದೆ. ಚಿತ್ರಪಟ 4 ಕಾಲು ಅಡಿ ಎತ್ತರ, ದೊಡ್ಡಗೂಡು 20 ಅಡಿ ಎತ್ತರ, ಸಣ್ಣಗೂಡು 8 ಅಡಿ ಎತ್ತರ, ಕಲಶ 6.5 ಅಡಿ ಎತ್ತರವಿದೆ. ರಥ 16 ಚಕ್ರಗಳನ್ನು ಹೊಂದಿದ್ದು, ಸುಮಾರು 8.5 ಅಡಿ ಎತ್ತರವಿದೆ. ನೆಲದಿಂದ ಕಲಶದ ತುದಿ ತನಕ ಒಟ್ಟು 64.5 ಅಡಿ ಎತ್ತರವಿರುತ್ತದೆ.

    ಅಂದಾಜು 25 ಟನ್ ಭಾರವಿದೆ. ನೂತನ ರಥದಲ್ಲಿ 16 ಅಂತಸ್ತುಗಳು : ನೂತನ ಬ್ರಹ್ಮರಥ ಹಿಂದಿನ ರಥದಂತೆ 16 ಅಂತಸ್ತುಗಳನ್ನು ಹೊಂದಿದೆ. ಒಂದನೇ ಅಂತಸ್ತಿನಲ್ಲಿ ಆರು ನೇಗಳನ ಸಾಲುಗಳು, ಎರಡನೆಯದರಲ್ಲಿ ಆನೆಸಾಲು, ಮೂರನೇ ಅಂತಸ್ತಿನಲ್ಲಿ ಹೂವಿನ ಸಾಲು, ನಾಲ್ಕನೇ ಅಂತಸ್ತಿನಲ್ಲಿ ದ್ರಾಕ್ಷಿ ಬಳ್ಳಿಗಳ ಸಾಲು, ಐದನೆಯದರಲ್ಲಿ ಪದ್ಮಸಾಲು, ಆರನೇ ಅಂತಸ್ತಿನಲ್ಲಿ ವಿಗ್ರಹಗಳ ಒಂದನೇ ಸಾಲು, ಏಳರಲ್ಲಿ ಬಳ್ಳಿಗಳ ಸಾಲು, ಎಂಟರಲ್ಲಿ ಕೊನೆ ಅಡ್ಡೆಗಳ ಸಾಲು, ಒಂಬತ್ತರಲ್ಲಿ ವಿಗ್ರಹಗಳ ಎರಡನೇ ಸಾಲು, ಹತ್ತನೇ ಅಂತಸ್ತಿನಲ್ಲಿ ವಿಗ್ರಹಗಳಿಂದ ಕೂಡಿದ ಕೊನೆ ಅಡ್ಡೆಗಳ ಎರಡನೇ ಸಾಲು, ಹನ್ನೊಂದನೇ ಅಂತಸ್ತಿನಲ್ಲಿ ಕೊನೆ ಅಡ್ಡೆಗಳ ಮೂರನೇ ಸಾಲು, ಹನ್ನೆರಡನೇ ಅಂತಸ್ತಿನಲ್ಲಿ ವಿಗ್ರಹಗಳ ಮೂರನೇ ಸಾಲು, ಮುಂದೆ ಅಡ್ಡೆಗಳ ನಾಲ್ಕನೇ ಸಾಲು, ವಿಗ್ರಹಗಳ ನಾಲ್ಕನೇ ಸಾಲು, ಬಳ್ಳಿಗಳ ಸಾಲು ಇದೆ.

        ಹದಿನಾರನೇ ಅಂತಸ್ತಿನಲ್ಲಿ ಮುಚ್ಚಿಗೆ ನಿಮರ್ಿಸಲಾಗಿದೆ. ನೂತನ ರಥದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ವಿಗ್ರಹ, ಕುದುರೆ ಸವಾರರ ವಿಗ್ರಹ, ಸಿಂಹಗಳು, ಬೃಹತ್ ಗಾತ್ರದ ದ್ವಾರಪಾಲಕ ವಿಗ್ರಹಗಳು ಸುಂದರವಾಗಿ ಮೂಡಿಬಂದಿದೆ. ಹಲಸು ಮರದ ದೇವರ ಪೀಠ : 65 ಶಿಲ್ಪಿಗಳು ವಿವಿಧ ತಂಡಗಳಾಗಿ ಕೆತ್ತನೆ ಕಾರ್ಯ ಮಾಡಿದ್ದಾರೆ. ಕುಕ್ಕೆ ದೇವಳದ ಶಿಲ್ಪಿ ಗಣೇಶ್ ಆಚಾರ್ಯ ಮಾರ್ಗದರ್ಶನದಂತೆ ಬೋಗಿ ಮರದಿಂದ ರಥದ ಅಚ್ಚು ಮತ್ತು ಚಕ್ರ ನಿಮರ್ಿಸಲಾಗಿದೆ. ಕೆತ್ತನೆ ಕಾರ್ಯಕ್ಕೆ ಸಾಗುವಾನಿ ಮತ್ತು ಹೆಬ್ಬಲಸು ಮರ ಬಳಸಲಾಗಿದೆ. ಹಲಸಿನ ಮರದಿಂದ ಶ್ರೀ ದೇವರ ಪೀಠ ನಿಮರ್ಿಸಲಾಗಿದೆ.