ಶಾಂಘೈ ನಲ್ಲಿ ಹೊಸ 17 ಆಮದು ಕರೋನ ಪ್ರಕರಣ ದಾಖಲು

ಶಾಂಘೈ, ಮಾರ್ಚ್ 27  ಚೀನಾದ  ಶಾಂಘೈ ನಲ್ಲಿ ಹೊಸದಾಗಿ  17 ಕರೋನ ಆಮದು ಹೊಸ ಪ್ರಕರಣಗಳು  ಗುರುವಾರ ವರದಿಯಾಗಿದೆ  ಎಂದು ಪುರಸಭೆಯ ಆರೋಗ್ಯ ಆಯೋಗ ಶುಕ್ರವಾರ ತಿಳಿಸಿದೆ.ಹೊಸ ವರದಿಗಳು ಶಾಂಘೈನಲ್ಲಿ ಒಟ್ಟು ಆಮದು ಮಾಡಿದ  ಕರೋನ ಪ್ರಕರಣಗಳ ಸಂಖ್ಯೆ 129 ಕ್ಕೆ ಏರಿಕೆಯಾಗಿದೆ   23 ಜನರನ್ನು ಪ್ರತ್ಯೇಕ ಕ್ವಾರಂಟೇನ್ ಒಳಪಡಿಸಲಾಗಿದೆ.  ರೋಗಿಗಳನ್ನು ಚಿಕಿತ್ಸೆಗಾಗಿ ಗೊತ್ತುಪಡಿಸಿದ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ವಿಮಾನಗಳಲ್ಲಿ ರೋಗಿಗಳೊಂದಿಗೆ ನಿಕಟ ಸಂಪರ್ಕದ್ದ  ಒಟ್ಟು 119 ಜನರನ್ನು ಕೇಂದ್ರೀಕೃತ ವೈದ್ಯಕೀಯ ತಪಾಸಣೆಗೆ  ಒಳಪಡಿಸಲಾಗಿದೆ.ಶಾಂಘೈನಲ್ಲಿ ಗುರುವಾರ ಸ್ಥಳೀಯವಾಗಿ  ವರದಿಯಾಗಿಲ್ಲ. ಪುರಸಭೆಯು ಒಟ್ಟು ಈವರೆಗೆ 339 ದೇಶೀಯ ಪ್ರಕರಣಗಳನ್ನು ದೃಡಪಡಿಸಿದೆ. ಚೇತರಿಸಿಕೊಂಡ ನಂತರ ಒಟ್ಟು 331 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಐವರು ಸೋಂಕಿತರು  ಮೃತಪಟ್ಟಿದ್ದಾರೆ.