ಪಾಕಿಸ್ತಾನವನ್ನು ಯಾವತ್ತಿಗೂ ನಂಬಬೇಡಿ, ನಾಯಿ ಬಾಲ ಯಾವತ್ತಿಗೂ ಡೊಂಕೆ!


ಕಳೆದ ಏಳೆಂಟು ದಿನಗಳ ಹಿಂದೆ ರಶಿಯಾಗೆ ಹೋಗಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿಶ್ವ ಮಟ್ಟದಲ್ಲಿ ಜೋಕರ್ ಅಂತ ಕರೆಸಿಕೊಂಡಿದ್ದನ್ನು ಬಿಟ್ಟರೆ ಯಾವುದೇ ಲಾಭಗಳು ಆಗಿಲ್ಲ. ಹಾಗಾಗಿ ಇದೀಗ ಏನಾದರೂ ಮಾಡಿ  ಮತ್ತೆ ಹಳೆಯ ಗಂಡ ಅಂತ ಇರುವ ಅಮೇರಿಕಾದೊಂದಿಗೆ ಮತ್ತೆ ನಿಕಾ ಮಾಡಿಕೊಳ್ಳಬೇಕು. ಬೇರೆ ದಾರಿಯಿಯೇ ಇಲ್ಲ. ಅದಕ್ಕಾಗಿ ಪಾಕಿಸ್ತಾನ ಸಕಲ ಪ್ರಯತ್ನಗಳನ್ನು ನಡೆಸಿದೆ. ಸಧ್ಯ ಪಾಕಿಸ್ತಾನದಲ್ಲಿ ಇಮ್ರಾನ್ ಸರಕಾರದ ವಿರುದ್ಧ ಅಲ್ಲಿನ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆಗೆ ಆಗ್ರಹಿಸುತ್ತಿವೆ.  
ಇಮ್ರಾನ್ ಸರಕಾರದ ಒಂದಿಷ್ಟು ಸಚಿವರು ಹಾಗೂ ಸಂಸದರು, ವಿರೋಧ ಪಕ್ಷದ ಜೊತೆಗೆ ಕೈ ಜೊಡಿಸಿದ್ದಾರೆ. ಪರಿಣಾಮ, ಅಲ್ಲಿ ಮತ್ತೆ ಸೇನಾ ಆಡಳಿತ ಶುರುವಾಗುವ ಲಕ್ಷಣಗಳೇ ಹೆಚ್ಚಾಗಿ ಎದ್ದು ಕಾಣುತ್ತಿವೆ. ಬಹುಮುಖ್ಯವಾಗಿ ಇದೆ 2022ರ ನವೆಂಬರ್ ತಿಂಗಳಲ್ಲಿ ಅಲ್ಲಿನ ಸೇನಾ ಮುಖ್ಯಸ್ಥರಾದ ’ಕಮರ್ ಜಾವೇದ್ ಬಜ್ವಾ’ ರವರ ಅಧಿಕಾರದ ಅವಧಿ ಮುಗಿಯುತ್ತದೆ. ಹಾಗಾಗಿ ಇಮ್ರಾನ್ ಖಾನ್ ಇದೇ ಎಪ್ರಿಲ್ ತಿಂಗಳೊಳಗೆ  ಹೊಸ ಸೇನಾ ನಾಯಕರ ನೇಮಕಾತಿಯನ್ನು ಪೂರ್ಣಗೊಳಿಸುವ ಸಾಧ್ಯತೆಗಳಿವೆ. ಪಾಕಿಸ್ತಾನದ ಈ ಹಿಂದಿನ ಋಋ ಮುಖ್ಯಸ್ಥ ’ಪೈಜ್ ಹಮೀದ್‌’ ಸದ್ಯಕ್ಕೆ ಇಮ್ರಾನ್ ಖಾನ್ ಮುಂದಿರುವ ಆಯ್ಕೆ. ಯಾಕೆಂದರೆ ಇಮ್ರಾನ್ ಖಾನ್ ಪ್ರಧಾನಿ ಆಗುವುದರಲ್ಲಿ ಪೈಜ್ ಹಮೀದ್ ರವರ ಪಾತ್ರ ಬಹಳ ಮುಖ್ಯ ಆಗಿತ್ತು. ಸಾಮಾನ್ಯವಾಗಿ ಪಾಕಿಸ್ತಾನದಲ್ಲಿ ಪ್ರಧಾನಿಗಳು ತಮಗೆ ಅತ್ಯಾಪ್ತರಾಗಿರುವ ಸೇನಾ ಅಧಿಕಾರಿಗಳನ್ನು ಸೇನಾ ನಾಯಕರನ್ನಾಗಿ ನೇಮಿಸುವ ವಾಡಿಕೆ ಈ ಮೊದಲಿನಿಂದಲೂ ಅಲ್ಲಿ ಇದೆ. ಅದರಂತೆ ಇದೀಗ ಪೈಜ್ ಹಮೀದ್ ರವರ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಹೆಚ್ಚಿದೆ. ಆದರೆ ಈ ಆಯ್ಕೆಯು ಅಲ್ಲಿನ ಪ್ರತಿಪಕ್ಷಗಳ ನಾಯಕರಿಗೆ ಮತ್ತು ಸಧ್ಯದ ಸೇನಾ ಮುಖ್ಯಸ್ಥರಾದ ಬಜ್ವಾ ರವರಿಗೆ ಇಷ್ಟವಿಲ್ಲ. ಒಂದಿಷ್ಟು ಮಾಹಿತಿಗಳ ಪ್ರಕಾರ ಹೊಸ ಸೇನಾ ನಾಯಕರ ಘೋಷಣೆ ಆಗುವ ಮೊದಲೇ ಇಮ್ರಾನ್ ಸರಕಾರದ ಪತನ ಆಗುವ ಸಾಧ್ಯತೆಗಳೆ ಹೆಚ್ಚಾಗಿ ಕಾಣುತ್ತಿವೆ.  
ಅಲ್ಲಿನ ಪ್ರತಿಪಕ್ಷಗಳ ಅವಿಶ್ವಾಸದ ನಿರ್ಣಯಕ್ಕೆ ಗೆಲುವು ಸಿಕ್ಕು ಪಾಕಿಸ್ತಾನ ಅವಧಿಗೆ ಮೊದಲೇ ಚುನಾವಣೆಗೆ ಹೊಗುತ್ತಾ ಅಥವಾ ಸರಕಾರವನ್ನು ಕೆಡವಿದ ಬೆನ್ನಲ್ಲೇ ಬಜ್ವಾ ರವರು ಸೇನಾ ಆಡಳಿತವನ್ನು ಘೋಷಿಸಿ ಬಿಡುತ್ತಾರಾ ಎಂಬುದು ಪಾಕಿಸ್ತಾನದ ವಿಶ್ಲೇಷಕರುಗಳ ಮುಂದಿರುವ ಬಹು ಮುಖ್ಯವಾದ ಪ್ರಶ್ನೆ. ಸಧ್ಯಕ್ಕೆ ಅಲ್ಲಿನ ರಾಜಕೀಯ ಲೆಕ್ಕಾಚಾರಗಳು ಏನೇ ಆದರೂ ಕೂಡಾ ಅಲ್ಲಿ ಇಮ್ರಾನ್ ಖಾನ್ ಅಂತೂ ಹೆಚ್ಚು ದಿನ ಪ್ರಧಾನಿ ಕುರ್ಚಿಯಲ್ಲಿ ಉಳಿಯುವ ಸಾಧ್ಯತೆಗಳು ಅತಿ ಕಡಿಮೆ. ಇಷ್ಟೊಂದು ಸಮಸ್ಯೆಗಳು ಅಲ್ಲಿರುವಾಗ ಸಧ್ಯದ ಸರಕಾರದಲ್ಲಿ, ಭಾರದ ಜೊತೆಗೆ ಮುರಿದು ಬಿದ್ದಿದ್ದ ವ್ಯಾಪಾರದ ಸಂಬಂಧಗಳನ್ನು ಮತ್ತೆ ಸುಧಾರಿಸಿಕೊಳ್ಳಲು ಒಂದಿಷ್ಟು ಅವಕಾಶಗಳು ಸಿಗುತ್ತಾ ಅಂತ ಪಾಕಿಸ್ತಾನ ಬ್ಯಾಕ್ ಡೋರ್ ಮಾತುಕತೆಗಳಿಗೆ ತನ್ನ ರಾಯಭಾರಿಗಳನ್ನು ಸಿದ್ದಗೊಳಿಸುತ್ತಿದೆ.  
ಇವೆಲ್ಲದರ ನಡುವೆಯೇ ಭಿಕಾರಿ ಪಾಕಿಸ್ತಾನ ಯಾವ ಕ್ಷಣದಲ್ಲಾದರೂ ಈಂಖಿಈ ಗ್ರೇ ಲಿಸ್ಟ್‌ ನಿಂದ ಬ್ಲ್ಯಕ್ ಲಿಸ್ಟನ್ನು ಸೇರಿಕೊಳ್ಳಬಹುದು ಅನ್ನುವ ಮಾತುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬರುತ್ತಿವೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಇಮ್ರಾನ್ ಖಾನ್, ಸೇನಾ ಹಾಗೂ ಪ್ರತಿಪಕ್ಷಗಳ ಆಟಕ್ಕೆ ಬೋಲ್ಡ್‌ ಆಗುವ ದಿನಗಳಂತೂ ಹತ್ತಿರತ್ತಿರಕ್ಕೆ ಸಮೀಪಿಸುತ್ತಿವೆ. ಆ ಎಲ್ಲಾ ರೀತಿಯ ಲಕ್ಷಣಗಳು ಎದ್ದು ಕಾಣುತ್ತಿವೆ.ಸದ್ಯಕ್ಕೆ ಪಾಕಿಸ್ತಾನ ಅದೆಷ್ಟರ ಮಟ್ಟಿಗೆ ದಿವಾಳಿ ಆಗಿದೆ ಎಂದರೆ, ಅಲ್ಲಿನ ಪ್ರಧಾನಿ ಜೋಳಿಗೆ ಹಾಕಿಕೊಂಡು, ಪಕ್ಕ ವಾದ್ಯದವರನ್ನೂ ಇಟ್ಟುಕೊಂಡು ಚೀನಾಗೋ, ರಶಿಯಾಗೋ ಅಥವಾ ದುಬೈಗೋ ಹೋದಾಗಲೆಲ್ಲ ಪ್ರಧಾನಿ ಭಿಕ್ಷೆ ಬೇಡಿ ನಮಗೆ ಏನಾದರೂ ತರುತ್ತಾನೆ! ಏನಾದರೂ ಸಿಗುತ್ತದೆ ಅನ್ನೊ ಕಾರಣಕ್ಕೆ ಅಲ್ಲಿನ ಸೇನಾ ಅಧಿಕಾರಿಗಳು, ರಾಜಕಾರಣಿಗಳು, ಮುಲ್ಲಾಗಳು ಆಶಯ ಕಣ್ಣುಗಳಿಂದ ನೋಡುತ್ತಾ ಕುಳಿತಿದ್ದಾರೆ. ‘ರೇಹೆಮ್ ಕರೊ ಬಾಬಾ ಅಲ್ಲಾಕೆ ವಾಸ್ತೆ, ಕುಚ್ ದೇದೆ ಬಾಬಾ’ ಅಂತ ಬೇಡಿಕೊಂಡಾಗಲೆಲ್ಲ ಕೂಡಾ ಪ್ರತಿಬಾರಿ ಭಿಕ್ಷೆ ಸಿಗಲೇ ಬೇಕು ಅಂತ ಭಾವಿಸಿದರೆ ಅದು ಹೇಗೆ ಸಾಧ್ಯ? ಇಷ್ಟು ದಿನ ಪಾಕಿಸ್ತಾನಕ್ಕೆ ಐರನ್ ಬ್ರದರ್ ಹಾಗೆ ಚೀನಾ ಇತ್ತು.  
ಪಾಕಿಸ್ತಾನದ ಎಕನಾಮಿಕ್ ಕಾರಿಡಾರ್ ನಿಂದ ಒಂದಿಷ್ಟು ಲಾಭ ಆಗಬಹುದು ಅಂತ ಆಶೆ ಇಟ್ಟುಕೊಂಡಿದ್ದ ಚೀನಾ, ಪಾಕಿಸ್ತಾನ ಕೇಳಿದಾಗಲೆಲ್ಲ ಹಣ ಸುರಿತಾ ಇತ್ತು. ಆದರೆ ಇದೀಗ ಚೀನಾಗೂ ಕೂಡಾ ತಾನು ಹೂಡಿಕೆ ಮಾಡಿರುವ ಹಣ ವಾಪಾಸ್ ಬರುತ್ತಾ? ಅನ್ನೋ ಅನುಮಾನಗಳು ಶುರುವಾಗಿವೆ.  
ಯಾಕೆಂದರೆ ಒಂದೆಡೆ ಬಲುಚಿಸ್ತಾನದ ಹೋರಾಟ ಬಹಳಷ್ಟು ತಿವೃವಾದರೆ ಮತ್ತೊಂದೆಡೆ ಸಿಂಧ್ ಪ್ರಾಂತ್ಯದಲ್ಲಿ ಕೂಡಾ ಪಾಕಿಸ್ತಾನದ ವಿರುದ್ದ ಪ್ರತಿಭಟನೆಗಳ ಕಾವು ಹೆಚ್ಚಾಗಿದೆ. ತೆಹರಿಕಿ ತಾಲಿಬಾನ್ ಜೊತೆಗೆ ಇನ್ನಷ್ಟು ಸಂಘಟನೆಗಳು ಚೀನಾದ ಹೂಡಿಕೆಗಳನ್ನು, ಚೀನಾದ ಅಧಿಕಾರಿಗಳು ಹಾಗೂ ನಾಗರಿಕರನ್ನು ಗುರಿ ಮಾಡಿಕೊಂಡು ದಾಳಿ ಮಾಡುತ್ತಿದೆ. ಸಿಪೆಕ್ ಹಾದು ಹೊಗುತ್ತಿರುವುದು ಗಿಲ್ ಗಿಟ್ ಪಾಲ್ಟಿಸ್ತಾನ್, ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಬಲೂಚಿಸ್ತಾನಗಳಲ್ಲಿ ಅಲ್ಲಿ ಚೀನಾದ ಹೂಡಿಕೆಗಳಿಗೆ ರಕ್ಷಣೆ ಕೊಡುವುದಕ್ಕೆ ಪಾಕಿಸ್ತಾನಕ್ಕೆ ಸಾಧ್ಯ ಆಗುತ್ತಿಲ್ಲ. ಹಾಗಾಗಿ ಆ ಯೋಜನೆಯ ಮೇಲೆ ಮತ್ತೇ ಮತ್ತೇ ಹಣ ಹೂಡೊದಕ್ಕೆ ಚೀನಾ ಸಧ್ಯಕ್ಕಂತೂ ಮನಸ್ಸು ಮಾಡುತ್ತಿಲ್ಲ. 
ಸಧ್ಯ ಪಾಕಿಸ್ತಾನದಲ್ಲಿ ನಿರ್ಮಾಣವಾದ ರಾಜಕೀಯ ಅತಂತ್ರ ಪರಿಸ್ಥಿತಿ ಹೀಗೆಯೇ ಮುಂದುವರಿದು, ಅಲ್ಲಿ ಬೇರೆ ಸರಕಾರ ಏನಾದರೂ ರಚನೆಯಾದರೆ ಇದೀಗ ಅಲ್ಲಿ ಚೀನಾ ಕೊಟ್ಟಿರುವ ಅನಧಿಕೃತ ಹಣವಂತೂ ಅರಬ್ಬಿ ಸಮುದ್ರದ ಪಾಲಾಗುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿಯೇ ಇತ್ತಿಚೆಗೆ ಇಮ್ರಾನ್ ಖಾನ್ ಜೋಳಿಗೆ ಹಿಡಿದುಕೊಂಡು ಬೀಜಿಂಗ್‌ಗೆ ಹೊದಾಗಲೆಲ್ಲ ಚೀನಾ ಅವಮಾನ ಮಾಡಿ ಕಳಿಸುವುದಕ್ಕ ಶುರು ಮಾಡಿದೆ. ಇನ್ನು ಮುಂದೆ ಪಾಕಿಸ್ತಾನಕ್ಕೆ ಚೀನಾದಿಂದ ಯಾವುದೇ ರೀತಿಯ ಸಹಾಯಗಳಾಗುವುದು ತೀರಾ ಕಡಿಮೆ.  
ಈ ಮೊದಲು ಅಮೇರಿಕಾ ದೊಂದಿಗೆ ಹೊಂದಾಣಿಕೆ ಇದ್ದಾಗ ಸೌದಿ ಅರೇಬಿಯಾ ಸೇರಿ ಕೆಲವೊಂದಿಷ್ಟು ರಾಷ್ಟ್ರಗಳು ಹಣಕಾಸಿನ ಸಹಾಯವನ್ನಾದರೂ ಮಾಡುತ್ತಿದ್ದವು. ಘಠಟಜ ಃಚಿಟಿಞ ಋಈ ಸಹಾಯದೊಂದಿಗೆ ಅಮೇರಿಕ ಕೂಡಾ ಸಾಕಷ್ಟು ಹಣವನ್ನು ಕೊಡುತ್ತಿತ್ತು. ಆದರೆ ಚೀನಾದ್ದಂತು ಅಪ್ಪಟ ವ್ಯಾಪಾರದ ಬುದ್ದಿ. ಹೀಗಾಗಿ ಪಾಕಿಸ್ತಾನದ ಜೊತಿಗಿನ ಚೀನಾದ ಪ್ಯಾರ್‌-ಇಷ್ಕ್‌-ಮಹೊಬತ್ ಎಲ್ಲವೂ ಕಡಿಮೆ ಆಗಿದೆ. ಆದರಿಂದ ಇದೀಗ ಪಾಕಿಸ್ತಾನ ಮತ್ತೆ ಅಮೇರಿಕ ಕಡೆ ಕೈ ಚಾಚಲು ಸಿದ್ದ ಆಗ್ತಾ ಇದೆ. ಒಂದು ವೇಳೆ ಅಮೇರಿಕ ಏನಾದರೂ ಚೀನಾದ ಹಾಗೆ ಪಾಕಿಸ್ತಾನದಲ್ಲಿ ಹೂಡಿಕೆ ಮಾಡೊದಕ್ಕೆ ಮುಂದೆ ಬಂದರೆ ’ನಾವು ಚೀನಾಗೆ ತಲಾಕ್ ಕೊಟ್ಟು, ಅಮೇರಿಕ ಜೊತೆಗೆ ಮತ್ತೆ ನಿಕಾ ಮಾಡಿಕೊಳ್ಳುತ್ತೇವೆ ಅಂತ ಪಶ್ಚಿಮದ ಕಡೆಗೆ ಹೆಚ್ಚು ವಲವಿರುವ ಪಾಕಿಸ್ತಾನದ ಪ್ರಮುಖ ಪ್ರಭಾವಿ ಅಧಿಕಾರಿಗಳು ಹೇಳುತ್ತಿದ್ದಾರೆ.  
ಈ ರೀತಿಯ ಹೇಳಿಕೆಗಳನ್ನು ಹೇಳಿಸುತ್ತಿರುವುದು ಅಲ್ಲಿನ ಸೇನಾ ಅಧಿಕಾರಿಗಳು ಅನ್ನೊದರಲ್ಲಿ ಅನುಮಾನವೇ ಇಲ್ಲ. ಅಮೇರಿಕಾದೊಂದಿಗೆ ಮತ್ತೆ ಸಂಬಂಧಗಳು ಸುಧಾರಣೆ ಆಗಲಿ ಅನ್ನುವ ಕಾರಣಕ್ಕೆ ಅಮೇರಿಕಾ ಮೂಲದ ಪಾಕಿಸ್ತಾನಿ ಹಾಗೂ ಅಮೇರಿಕಾದ ‘ಠಿಣಣಣಣಜ ಠ ಠಿಜಚಿಛಿಜ’ ನಲ್ಲಿ ಕೆಲಸ ಮಾಡುತ್ತಿದ್ದ ಮೊಯಿದ್ ಯೂಸುಫ್ ಎಂಬಾತನನ್ನು ಕರೆದುಕೊಂಡು ಬಂದು ’ಓಚಿಣಠಚಿಟ ಖಜಛಿಛಿಣಡಿಣಥಿ ಂಜತಠ ಆಗಿ ಇಮ್ರಾನ್ ಖಾನ್ ನೇಮಕ ಮಾಡಿಕೊಂಡಿದ್ದಾರೆ. ಆದರೆ ಅದರಿಂದ ಯಾವುದೇ ರೀತಿಯ ಲಾಭಗಳು ಆಗಲಿಲ್ಲ. ಋಈ ಬೆಲೌಚ್ ಪ್ಯಾಕೇಜಿಗಾಗಿ ಪಾಕಿಸ್ತಾನ ಇನ್ನಿಲ್ಲದ ಕಸರತ್ತುಗಳನ್ನು ನಡೆಸಿದೆ. ಅಲ್ಲಿಯೂ ಕೂಡಾ ಫಲ ಸಿಕ್ಕಿಲ್ಲ. ಇನ್ನು ದುಬೈ ಕಡೆಗೆ ಹೊದರೆ ಅವರು ಹಣ ಕೊಡುವ ಮಾತು ಒಂದುಕಡೆ ಇರಲಿ, ತಾವು ಬಿರಿಯಾನಿ ತಿಂದ ಕೈಯನ್ನು ಕೂಡಾ ಪಾಕಿಸ್ತಾನದ ಕಡೆ ಮಾಡುವುದಿಲ್ಲ.  ಆದರೆ ಭಾರತದೊಂದಿಗಿನ ವ್ಯಾಪಾರ ಮಾತ್ರ ಸಧ್ಯಕ್ಕೆ ಪಾಕಿಸ್ತಾನವನ್ನು ಬೆಲೆ ಏರಿಕೆಯಿಂದ ಹಾಗೂ ಆರ್ಥಿಕ ಸಂಕಷ್ಟದಿಂದ ಕಾಪಾಡಬಲ್ಲದು ಎಂಬ ಸಲಹೆಗಳನ್ನು ಅಲ್ಲಿನ ಹಲಾರು ತಜ್ಞರು ಕೊಟ್ಟಿದ್ದಾರೆ.  
ಅದರಂತೆ ಭಾರತದ ಜೊತೆಗೆ ಪಾಕಿಸ್ತಾನ ವ್ಯಾಪಾರ ವಹಿವಾಟುಗಳನ್ನು ಆದಷ್ಟು ಬೇಗ ಪುನರಾರಂಭಿಸಬೇಕು ಅಂತ ಪ್ರಧಾನಿಯ ಆರ್ಥಿಕ ಸಲಹೆಗಾರ ಅಬ್ದುಲ್ ರಜಾಕ್ ದಾವೂದ್ ಕೂಡಾ ಹೇಳಿದ್ದಾರೆ.  
ಇಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ವ್ಯಾಪಾರ ನಿಂತು ಹೊಗುವ ಮೊದಲಿನ ಅಂದರೆ 2019ರ ಲೆಕ್ಕಾಚಾರಗಳು ಭಾರತ ಪಾಕಿಸ್ತಾನಕ್ಕೆ ಸುಮಾರು 52 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 370 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಭಾರತ ರು​‍್ತ ಮಾಡಿತ್ತು. ಪಾಕಿಸ್ತಾನದಿಂದ ಭಾರತಕ್ಕೆ ಸುಮಾರು 18 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಆಮದು ಆಗುತ್ತಿತ್ತು. ಇಲ್ಲಿಂದ ಪಾಕಿಸ್ತಾನಕ್ಕೆ ಅತಿ ಹೆಚ್ಚು ಹತ್ತಿ, ಸಕ್ಕರೆ, ಆರ್ಗ್ಯಾನಿಕ್ ಕೆಮಿಕಲ್, ತರಕಾರಿಗಳನ್ನು ರು​‍್ತ ಮಾಡಲಾಗಿತ್ತು. ಅಲ್ಲಿಂದ ಕಾಮಗಾರಿಯ ಕಚ್ಚಾ ವಸ್ತುಗಳು, ಹಣ್ಣು ಮಿನರಲ್ ಆಯಿಲ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು, ಅದು ಬಹಳಾನೆ ಕಡಿಮೆ ಪ್ರಮಾಣದಲ್ಲಿ. ಭಾರತವು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುವ ಪ್ರಮಾಣಕ್ಕಿಂತಲೂ ನಾವು ಅವರಿಗೆ ರು​‍್ತ ಮಾಡುತ್ತಿದ್ದ ಪ್ರಮಾಣವೇ ಹೆಚ್ಚು. ಆದರೂ ಪಾಕಿಸ್ತಾನ ನಾಯಿ ಬಾಲ ಡೊಂಕು ಅನ್ನುವ ಹಾಗೆ ವ್ಯಾಪಾರ ವಿಷಯದಲ್ಲಿಯೂ ಕೂಡಾ ಕಿರಿಕಿರಿ ಮಾಡುವುದನ್ನು ನಿಲ್ಲಿಸಿರಲಿಲ್ಲ. ಪುಲ್ವಾಮಾ ದಾಳಿಯ ಬೆನ್ನಲ್ಲೇ ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿದ್ದ ಸರಕುಗಳ ಮೇಲೆ ಶೇ50 ರಷ್ಟು ಸುಂಕ ವಿಧಿಸಲಾಯಿತು. ಅದಾದ ಬೆನ್ನಲ್ಲಿ ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾಯಿತಲ್ಲ, ಅದರ ಪ್ರತಿಕಾರವಾಗಿ ಪಾಕಿಸ್ತಾನ ಭಾರತದ ಜೊತೆಗಿನ ವ್ಯಾಪಾರವನ್ನು ಸಂಪೂರ್ಣವಾಗಿ ನಿಲ್ಲಿತ್ತು, ಪಾಕಿಸ್ತಾನ ನಮ್ಮೊಂದಿಗೆ ಮಾಡುತ್ತಿದ್ದುದ್ದೆ ಚಿಲ್ಲರೆ ವ್ಯಾಪಾರ, ಅದನ್ನು ನಿಲ್ಲಿಸಿದ್ದಕ್ಕೆ, ಅದರಿಂದ ಭಾರತಕ್ಕೆನೂ ನಷ್ಟ ಆಗಿರಲಿಲ್ಲ. ಹಾಗಾಗಿ ಭಾರತ ಸ್ವಲ್ಪವೂ ತಲೆ ಕೆಡಿಸಿಕೊಳ್ಳಲಿಲ್ಲ.  
ಆದರೆ ಭಾರತ ಪಾಕಿಸ್ತಾನಕ್ಕೆ ಹತ್ತಿಯನ್ನು ರು​‍್ತ ಮಾಡುವುದನ್ನು ನಿಲ್ಲಿಸಿದ್ದರ ಪರಿಣಾಮವಾಗಿ ಅಲ್ಲಿನ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಬಟ್ಟೆ ಗಿರಣಿಗಳು ಬಹಳ ನಷ್ಡಕ್ಕೆ ಈಡಾಗಿವೆ.  
ಸಕ್ಕರೆ, ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ರು​‍್ತ ಆಗುತ್ತಿತ್ತು, ಅದು ನಿಂತು ಹೊಗಿರುವುದರಿಂದಾಗಿ ಅದರ ಬೆಲೆಗಳು ಗಗನಕ್ಕೆರಿವೆ. ಅದರಿಂದಾಗಿ ಪಾಕಿಸ್ತಾನದ ವಿದೇಶಿ ವಿನಿಮಯ ಸಂಪೂರ್ಣ ಖಾಲಿ ಆಗಿಬಿಟ್ಟಿದೆ. ಸಾಲ ಕೊಡಲೂ ಯಾರೊಬ್ಬರೂ ದಿಕ್ಕಿಲ್ಲದಂತಾಗಿದೆ. ಭಾರತದ ಜೊತೆಗೆ ವ್ಯಾಪಾರ ವಹಿವಾಟುಗಳನ್ನು ಆರಂಭಿಸಿದರೆ ಮಾತ್ರ ಅಲ್ಲಿನ ದಿನನಿತ್ಯದ ವಸ್ತುಗಳು ಆಹಾರ ಧಾನ್ಯಗಳ ಬೆಲೆಯನ್ನು ನಿಯಂತ್ರಿಸಲು  ಪಾಕಿಸ್ತಾನಕ್ಕೆ ಮತ್ತೆ ಭಾರತ ಬೇಕಿದೆ. ಆದರೆ ಪಾಕಿಗಳು ಕಷ್ಟದಲ್ಲಿ ಇದ್ದಾರೆ ಅಂತ ಭಾರತ ಏನಾದರೂ ಇದೀಗ ಒಂದಿಷ್ಟು ಕಣಿಕರ ತೊರಿದರೆ ಏನಾಗುತ್ತೆ ಗೊತ್ತಾ? ’ಸಾಯುತ್ತಿರುವ ಹಾವಿಗೆ ಕಾಜು, ಬದಾಮ್ ತಿನ್ನಿಸಿ ಟ್ರಿಟ್ಮೇಂಟ್ ಕೊಟ್ಟು ಅದರಿಂದ ಮತ್ತೆ ಕಚ್ಚಿಸಿಕೊಳ್ಳೊದಕ್ಕೆ ಹೊಗುವುದು ಮೂರ್ಖತನ ಆಗುತ್ತದೆ’. ಬದಲಾಗಿ ಪಾಕಿಸ್ತಾನವನ್ನು ಹೀಗೇ ಬಿಟ್ಟು ಈಂಖಿಈ ಬ್ಲ್ಯಕ್ ಲಿಸ್ಟ್‌ ಗೆ ಸೇರೊದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿ ಮುಗಿಸುವುದು ಭಾರತದ ಜಾಣ್ಮೆ ಹಾಗೂ ಹಿತವಿದೆ.  
- * * * -