ಧಾರವಾಡ 11: ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಜಿಲ್ಲಾ ಮಟ್ಟದ ನೆಟಬಾಲ್ ಪಂದ್ಯಾವಳಿಗಳಲ್ಲಿ ಧಾರವಾಡದ ಜೆ.ಎಸ್.ಎಸ್ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಮೃತ್ಯುಂಜಯ ನಗರ, ಧಾರವಾಡ. 14 ವರ್ಷ ವಯೋಮಿತಿಯ ಬಾಲಕರು ಪ್ರಥಮ ಸ್ಥಾನ ಪಡೆದಿದ್ದಾರೆ. ಹ್ಯಾಂಡ್ ಬಾಲ್ ಸ್ಪಧರ್ೆಯಲ್ಲಿ 14 ವರ್ಷ ವಯೋಮಿತಿಯ ಬಾಲಕರು ಮತ್ತು 17 ವರ್ಷ ವಯೋಮಿತಿಯ ಬಾಲಕರು ದ್ವಿತಿಯ ಸ್ಥಾನ ಪಡೆದಿದ್ದಾರೆ. ನೆಟಬಾಲ್ ಪಂದ್ಯಾವಳಿಗಳಲ್ಲಿ 14 ವರ್ಷ ವಯೋಮಿತಿಯ ಬಾಲಕಿಯರು ಪ್ರಥಮ ಸ್ಥಾನ ಪಡೆದರೆ, 17 ವರ್ಷ ವಯೋಮಿತಿಯ ಬಾಲಕಿಯರು ದ್ವೀತಿಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾಥರ್ಿಗಳ ಈ ಸಾಧನೆಗೆ ಧರ್ಮಸ್ಥಳದ ಧಮರ್ಾಧಿಕಾರಿ ಹಾಗೂ ಜನತಾ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಆಶೀರ್ವದಿಸಿದ್ದಾರೆ.
ವಿದ್ಯಾಥರ್ಿಗಳಿಗೆ ಜನತಾ ಶಿಕ್ಷಣ ಸಂಸ್ಥೆಯ ಕಾರ್ಯದಶರ್ಿ ಡಾ. ನ ವಜ್ರಕುಮಾರ, ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಹಾಗೂ ಶಾಲೆಯ ಪ್ರಾಚಾರ್ಯ ತ್ರಿವೇಣಿ ಆರ್, ದೈಹಿಕ ಶಿಕ್ಷಕರುಗಳಾದ ನಾಗರಾಜ ತೋಟಗೇರ ಮತ್ತು ಅರುಣ ಸವಣೂರ, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
ಹುಬ್ಬಳ್ಳಿಯ ಚೇತನ ಪಬ್ಲಿಕ್ ಶಾಲೆಗೆ ಪ್ರಥಮ ಸ್ಥಾನ: ರಸಪ್ರಶ್ನೆಯ ಸ್ಪಧರ್ೆಯಲ್ಲಿ ಜಿಲ್ಲೆಯ 193 ಶಾಲೆಗಳಿಂದ 386 ವಿದ್ಯಾಥರ್ಿಗಳು ಸ್ಪಧರ್ೆಯಲ್ಲಿ ಭಾಗವಹಿಸಿದ್ದರು. ಮೊದಲ ಸುತ್ತಿನಲ್ಲಿ ಲಿಖಿತ ಪರೀಕ್ಷೆಯ ಮೂಲಕ ಅತಿಹೆಚ್ಚು ಅಂಕ ಪಡೆದ ಆರು ತಂಡಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು. ಅಂತಿಮ ಸುತ್ತಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹುಬ್ಬಳ್ಳಿಯ ಚೇತನ ಪಬ್ಲಿಕ್ ಶಾಲೆಯ ವಿದ್ಯಾಥರ್ಿಗಳು ಪ್ರಥಮ ಸ್ಥಾನ ಗಳಿಸಿ, 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಪಡೆದರು. ಧಾರವಾಡದ ಜೆಎಸ್ಎಸ್ ಮಂಜನಾಥೇಶ್ವರ ಪ್ರೌಢ ಶಾಲೆಯ ವಿದ್ಯಾಥರ್ಿಗಳು ದ್ವಿತೀಯ ಸ್ಥಾನ ಗಳಿಸಿ 07 ಸಾವಿರ ರೂ.ನಗದು ಬಹುಮಾನ ಗಳಿಸಿದರು. ಜೆಎಸ್ಎಸ್ ಪಬ್ಲಿಕ್ ಶಾಲೆಯ ವಿದ್ಯಾಥರ್ಿಗಳು ತೃತೀಯ ಸ್ಥಾನದೊಂದಿಗೆ 05 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಪಡೆದರು. ಬೆಂಗಳೂರಿನ ವಾಲ್ನಟ್ ಸಂಸ್ಥೆಯ ಅನಘ ಶ್ರೀಧರ ಹಾಗೂ ವಿಂಧ್ಯಾ ಕ್ವಿಜ್ ನಿರ್ವಹಿಸಿದರು.