ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನೇತಾಜಿ ಸುಭಾಸ್ ಚಂದ್ರಬೋಸ್ ಜಯಂತಿ ಆಚರಣೆ
Netaji Subhas Chandra Bose Jayanti Celebration at Ghanmatheshwar Educational Institute
ತಾಳಿಕೋಟಿ 23: ಪಟ್ಟಣದ ಶ್ರೀಘನಮಠೇಶ್ವರ ಶಿಕ್ಷಣಸಂಸ್ಥೆಯಲ್ಲಿ ದಿನಾಂಕ: 23/01/2026, ಶುಕ್ರವಾರ ದಂದು ನೇತಾಜಿ ಸುಭಾಸ್ ಚಂದ್ರಬೋಸ್ ಜಯಂತಿಯನ್ನು ಆಚರಣೆ ಮಾಡಲಾಯಿತು ಈಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್.ಎಂ.ಸಜ್ಜನ ಅವರು ಸುಭಾಸ್ ಚಂದ್ರ ಬೋಸ್ ಬಾಲ್ಯದಿಂದಲೇ ಬುದ್ಧಿವಂತ ಹಾಗೂ ದೇಶಭಕ್ತರಾಗಿದ್ದರು. ಅವರು ಕಟಕ್ ಮತ್ತು ನಂತರ ಕಲ್ಕತ್ತಾದಲ್ಲಿ ವಿದ್ಯಾಭ್ಯಾಸ ಮಾಡಿದರು. ಉನ್ನತ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ತೆರಳಿ ಋಖ (ಋಜಚಿಟಿ ಅತಟ ಖಜಡಿತಛಿಜ) ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದರು. ಆದರೆ ಬ್ರಿಟಿಷರ ಅಧೀನದಲ್ಲಿ ಕೆಲಸ ಮಾಡಲು ಇಚ್ಛಿಸದೇ ಆ ಹುದ್ದೆಗೆ ರಾಜೀನಾಮೆ ನೀಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಪಾತ್ರಬೋಸ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿ ನಾಯಕನಾಗಿ ಗುರುತಿಸಿ ಕೊಂಡರು. ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದು, ಎರಡು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಗಾಂಧೀಜಿ ಅವರ ಅಹಿಂಸಾ ಮಾರ್ಗಕ್ಕಿಂತ ಭಿನ್ನವಾಗಿ, ಬೋಸ್ ಅವರು ಸಶಸ್ತ್ರ ಹೋರಾಟದ ಮೂಲಕ ಸ್ವಾತಂತ್ರ್ಯ ಪಡೆಯಬೇಕು ಎಂದು ನಂಬಿದ್ದರು ಅಖ ಹುದ್ದೆಗೆ ರಾಜೀನಾಮೆಇಂಗ್ಲೆಂಡ್‌ನಲ್ಲಿ ಅತ್ಯುನ್ನತ ಋಖ ಪರೀಕ್ಷೆ ಪಾಸಾದರೂ, ಬ್ರಿಟಿಷರ ಆಡಳಿತದಲ್ಲಿ ಕೆಲಸ ಮಾಡುವುದನ್ನು ನಿರಾಕರಿಸಿ ರಾಜೀನಾಮೆ ನೀಡಿದರು. ಇದು ಅವರ ದೇಶಭಕ್ತಿಯ ಮಹತ್ವದ ಸಾಧನೆ.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು1938 (ಹರಿಪುರ) ಮತ್ತು 1939 (ತ್ರಿಪುರಿ) ಅಧಿವೇಶನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು.
ಆಜಾದ್ ಹಿಂದ್ ಫೌಜ್ ಪುನರ್‌ಸಂಘಟನೆವಿದೇಶದಲ್ಲಿದ್ದ ಭಾರತೀಯ ಯೋಧರನ್ನು ಒಟ್ಟುಗೂಡಿಸಿ ಆಜಾದ್ ಹಿಂದ್ ಫೌಜ್ (ಋಂ) ಅನ್ನು ಬಲಿಷ್ಠ ಸೇನೆಯಾಗಿ ರೂಪಿಸಿದರು.1943ರಲ್ಲಿ ವಿದೇಶದಲ್ಲೇ ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರ (ಂದಚಿಜ ಊಟಿಜ ಉಠಜಡಿಟಿಟಜಟಿಣ) ಸ್ಥಾಪಿಸಿದರು.ಮಹಿಳಾ ಸೇನಾ ದಳ ಹಿ ಝಾನ್ಸಿ ರಾಣಿ ಪಡೆಮಹಿಳೆಯರಿಗಾಗಿ ಪ್ರತ್ಯೇಕ ಸೇನಾ ದಳವನ್ನು ಸ್ಥಾಪಿಸಿದುದು ಕ್ರಾಂತಿಕಾರಿ ಸಾಧನೆ.ಸಶಸ್ತ್ರ ಹೋರಾಟಕ್ಕೆ ನೇತೃತ್ವಬ್ರಿಟಿಷರ ವಿರುದ್ಧ ಶಸ್ತ್ರಸಜ್ಜಿತ ಹೋರಾಟಕ್ಕೆ ಭಾರತೀಯರನ್ನು ಪ್ರೇರೇಪಿಸಿದರು.ಶಕ್ತಿಶಾಲಿ ಘೋಷಣೆಗಳು“ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ” ಎಂಬ ಘೋಷಣೆಯ ಮೂಲಕ ದೇಶಭಕ್ತಿಯನ್ನು ಜಾಗೃತಗೊಳಿಸಿದರು.ವಿದೇಶಿ ಸಹಕಾರದ ಮೂಲಕ ಹೋರಾಟ ಜರ್ಮನಿ ಮತ್ತು ಜಪಾನ್ ಸಹಾಯದಿಂದ ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರು.
ಯುವಕರಿಗೆ ಪ್ರೇರಣಾ ನಾಯಕ ಅವರ ತ್ಯಾಗ, ಧೈರ್ಯ ಮತ್ತು ನಾಯಕತ್ವವು ಇಂದಿಗೂ ಯುವಜನತೆಗೆ ಮಾರ್ಗದರ್ಶನ ನೀಡುತ್ತಿದೆ .ಈ ಸಮಯದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಆರ್.ಎಸ್.ದೇಸಾಯಿ, ದೈಹಿಕ ಶಿಕ್ಷಕಶಿ ವಾನಂದ ಸುಣಧೋಳಿ, ಸಿಬಿಎಸ್ ಇಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯಶ್ರೀಟಿ. ವ್ಹಿಶೆಟ್ಟಿ, ಜಿ.ಎನ್.ಪಾಟೀಲ, ಸರ್ವಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 