ಮಾಂಜರಿ 24 : ಅನೇಕ ಕಾಲಗಳಿಂದ ಮಹಿಳೆಯರು ಸಂಘರ್ಷ ಎದುರಿಸುತ್ತಾ ಬಂದಿದ್ದಾರೆ. ಇಂದಿನ ಮಹಿಳೆಯರು ಅನುಕರಣೆ ಮಾಡುತ್ತಾ ಅನೇಕ ಹೆಜ್ಜೆ ಇಡುತ್ತಾ ಹೊರಟಿದ್ದಾರೆ. ಮೊಬೈಲ್ ವ್ಯಾಮೋಹ ಹೆಚ್ಚಾಗಿದ್ದರಿಂದ ಮಕ್ಕಳಗೆ ಸಂಸ್ಕಾರ ನೀಡುವಲ್ಲಿ ನಿರ್ಲಕ್ಷ್ಯವಾಗುತ್ತಿದೆ ಎಂದು ನೆರೆಯ ಮಹಾರಾಷ್ಟ್ರದ ಜಯಶಿಂಗಪುರ ಪಟ್ಟಣದ ತೇಜಶ್ವಿನಿ ರಜಪುತ ಹೇಳಿದರು.
ಸಮೀಪದ ಸೈನಿಕ ಮಲಿಕವಾಡ ಗ್ರಾಮದಲ್ಲಿ ್ಲ ಗ್ರಾಮ ಪಂಚಾಯತಿ ಹಾಗೂ ಮಹಿಳೆಯರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಜಯಶಿಂಗಪುರ ಪಟ್ಟಣದ ತೇಜಶ್ವಿನಿ ರಜಪುತ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಹಿಳೆಯರಲ್ಲಿ ಎಕತ್ರ ಕುಟುಂಬ ಪದ್ಧತಿ ಮಾಯವಾಗಿಬಿಟ್ಟಿದೆ, ಒಂದಾಗಿ ಕೂಡಿ ಬಾಳುವುದನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಎಂದ ಅವರು ಜಗತ್ತು ಬದಲಾಗುತ್ತಾ ಹೊರಟಿದ್ದು, ಏತನ್ಮಧ್ಯೆ ತಮ್ಮ ಅಸ್ತಿತ್ವ ಕಾಯ್ದುಕೊಳ್ಳಲು ಮಹಿಳೆಯರು ಪ್ರಯತ್ನಿಸಬೇಕು ಎಂದು ಹೇಳಿದರು.
ಪಲ್ಲವಿ ಪಾಟೀಲ, ಚಾಂದಬಿ ನದಾಫ, ಸನದಿ ಮತ್ತು ಸುಲೋಚನಾ ಕಟ್ಟಿಕರ, ಲಕ್ಕೋಳೆ, ಲಕ್ಷ್ಮೀ ನಡವಿನಮನಿ, ಸುಲೋಚನಾ ಸುಜಾತಾ ಶಿವಯ್ಯಾ ಹಿರೇಮಠ ಪ್ರಥಮ, ರೇಖಾ ಗಾಯತ್ರಿ ಪಾಟೀಲ ಸೇರಿದಂತೆ ಮಹಿಳೆಯರು ಬಹುಮಾನ ಪಡೆದರು.
ಗ್ರಾಪಂ ಅಧ್ಯಕ್ಷೆ ಅನೀತಾ ಇಂಗಳೆ ಅಧ್ಯಕ್ಷತೆ ವಹಿಸಿದ್ದರು. ವಿಜೇತರಿಗೆ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು.
ಹಮಿದಾಮುಲ್ಲಾ ಸ್ವಾಗತಿಸಿದರು, ಬಾಕಳೆ ನಿರೂಪಿಸಿದರು, ಸವಿತಾ ಭಾರತಿ ಠೋಂಬರೆ ವಂದಿಸಿದರು.