ಪರಿಸರ ಜಾಗೃತಿಗೆ ನವೀನ್ ಕುಮಾರ್ ಪಂಜಾಬ್ ಗೆ 2,300 ಕಿ.ಮೀ. ಬೈಸಿಕಲ್ ಸವಾರಿ
Naveen Kumar cycles 2,300 km to Punjab for environmental awareness
ಹೂವಿನಹಡಗಲಿ 25: ಸ್ವಾತಂತ್ರ್ಯ ಹೋರಾಟ ಮಾಡಿದ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಅವರಂತಹ ಮಹನೀಯರ ಪ್ರಭಾವಕ್ಕೆ ಒಳಗಾದ ತಾಲೂಕಿನ ಮುದೇನೂರು ಗ್ರಾಮದ ನವೀನ್ ಕುಮಾರ ಕೆ. ಭಗತ್ ಸಿಂಗ್ ಅವರ ಜನ್ಮಸ್ಥಳಗಳಿಗೆ ತೆರಳಲು ಸುಮಾರು 2,300 ಕಿ.ಮೀ.ಬೈಸಿಕಲ್ ಸವಾರಿ ಆರಂಭಸಿದ್ದಾನೆ. ಈ ಹಿಂದೆ ಕೂಡಾ ಹೂವಿನಹಡಗಲಿ ಯಿಂದ ಸುಭಾಷ್ ಚಂದ್ರಭೋಷ ಅವರ ಜನ್ಮಸ್ಥಳ ಒಡಿಸ್ಸದ ಕಟಕ್ ಗೆ ಸುಮಾರು 1600 ಕಿ.ಮೀ ಬೈಸಿಕಲ್ ನಲ್ಲಿ ಪ್ರಯಾಣ ಮಾಡಿರುವುದಾಗಿ ಹೇಳಿದರು. ಈ ಬಾರಿಯೂ ಕೊಪ್ಪಳ ಜಿಲ್ಲೆ ಹೇರೆಸಿಂಧೋಗಿ ಗ್ರಾಮದ ಶಿವರಾಯಪ್ಪ ನೀರಲೋಟಿ ಇವರ ಜೊತೆಯಾಗಿದ್ದಾರೆ.
ಶಾಲೆ, ದೇವಸ್ಥಾನ ವಾಸ್ತವ್ಯ ಸೈಕಲ್ ಯಾತ್ರೆ ಪ್ರತಿದಿನ ಸುಮಾರು120 ರಿಂದ 150 ಕಿ.ಮೀ. ಪ್ರಯಾಣ ಮಾಡುತ್ತಾರೆ. ಮಾರ್ಗ ಮಧ್ಯದಲ್ಲಿ ಸಿಗುವ ಶಾಲೆ, ದೇವಸ್ಥಾನಗಳು ಹಾಗೂ ಪೆಟ್ರೋಲ್ ಬಂಕ್ ಗಳಲ್ಲಿ ವಾಸ್ತವ್ಯ ಮಾಡುತ್ತಾರೆ. ಇವರ ಕಾರ್ಯ ಕ್ಕೆ ಪೆಟ್ರೋಲ್ ಬಂಕ್ ನ ಮಾಲೀಕರು ವಸತಿ, ಊಟಕ್ಕೆ ವ್ಯವಸ್ಥೆ ಮಾಡಿ ಪ್ರೀತಿ ತೋರಿಸುತ್ತಾರೆ .ಉದ್ದೇಶಗಳು : ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಆದರ್ಶರಾದ ಹುತಾತ್ಮರ ಜನ್ಮಸ್ಥಳಕ್ಕೆ ಶ್ರಮದ ಮೂಲಕ ಸೈಕಲ್ ಯಾತ್ರೆಯ ಉದ್ದೇಶ. ಪರಿಸರ ಮತ್ತು ಜೀವವೈವಿಧ್ಯ ಅಭಿಯಾನ ಮೂಲಕ ಜಾಗೃತಿ ಮೂಡಿಸುವುದು ದೇಶಕ್ಕಾಗಿ ಮಾಡುವ ನನ್ನ ಅಳಿಲು ಸೇವೆ. ಇದ-ರಿಂದ ಅತ್ಯಂತ ಖುಷಿ ಹಾಗೂ ಆತ್ಮತೃಪ್ತಿ ಇದೆ ಎಂದು ಸಾಹಸಿ ಸೈಕಲ್ ಯಾತ್ರಿ ನವೀನ್ ಕುಮಾರ್ ಅಭಿಪ್ರಾಯ ತಿಳಿಸಿದರು.
ಚಳಿಯಿಂದ ರಕ್ಷಣೆಗಾಗಿ ಉಣ್ಣೆಯ ಸ್ಟೇಟರ್ ತಲೆಗೆ ಹೆಲೈಟ್ ಕೂಡ ಇರುತ್ತದೆ. ಮಾರ್ಗಗಳು: ಮುದೇನೂರು-ಹೂವಿನಹಡಗಲಿ-ಮುಂಡರಗಿ- ಹಿರೇಸಿಂದೋಗಿ-ಕೊಪ್ಪಳ-ಕುಷ್ಟಗಿ-ವಿಜಯಪುರ-ಸೊಲ್ಲಾಪುರ-ಬೀಡ್-ಛತ್ರಪತಿ ಸಂಭಾಜಿನಗರ-ಧುಲೆ-ಇಂದೋರ್-ಕೋಟಾ-ಜೈಪುರ-ನಾರನೌಲ್-ಭೀವಾನಿ-ಭರ್ವಾಲಾ-ಬರ್ನಾಲಾ-ಮೋಗಾ-ಅಮೃತಸರ-ಬಂಗಾ..ಈ ಯುವಕರ ಸೈಕಲ್ ಸವಾರಿ ಯಾತ್ರೆ ಮುಂದುವರೆಯಲಿ ಎಂದು ಗೆಳೆಯರು ಶುಭ ಕೋರಿದ್ದಾರೆ.ಈ ಕಾರ್ಯ ಇತರರಿಗೆ ಮಾದರಿ. ಇವರು ಕೈಗೊಂಡ ಪಂಜಾಬ್ ಸೈಕಲ್ ಯಾತ್ರೆ ಸುಖಕರವಾಗಿರಲಿ. ಇವರ ಕಾರ್ಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 