ರಾಷ್ಟ್ರೀಯ ಮಟ್ಟದ ಕಾರ್ಯಾಗಾರ

ರಾಷ್ಟ್ರೀಯ ಮಟ್ಟದ ಕಾರ್ಯಾಗಾರ National level workshop

ರಾಷ್ಟ್ರೀಯ ಮಟ್ಟದ ಕಾರ್ಯಾಗಾರ

ಇಂಡಿ 24 : ಶಾಂತೇಶ್ವರ ವಿದ್ಯಾವರ್ಧಕ ಸಂಘ ಇಂಡಿ ಜಿ ಆರ್ ಜಿ ಕಲಾ  ವಾಯ್ ಎ ಪಿ ವಾಣಿಜ್ಯ ಹಾಗೂ ಎಂ.ಪಿ ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯ ಇಂಡಿ, ಇವರ ಸಂಯುಕ್ತ ಆಶ್ರಯದಲ್ಲಿ ಇಂಡಿ ಡಿಗ್ರಿ ಕಾಲೇಜು ಆವರಣದಲ್ಲಿ ನ್ಯಾಕ್ ನ ನೂತನ ಬೈನರಿ ಮಾನ್ಯತೆಯ ಮಾರ್ಗಸೂಚಿಗಳ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರವನ್ನು ಇಂಡಿ ಶಾಸಕರಾದ ಶ್ರೀ ಯಶವಂತರಾಯಗೌಡ ಪಾಟೀಲ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಆದುನಿಕ ಯುಗದಲ್ಲಿ ಶಿಕ್ಷಣ ಅಗತ್ಯವಾದ್ದು.ಹಾಗೂ ಈ ಸಂಘವನ್ನು ಕಟ್ಟಿ ಬೆಳಿಸಿ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುವಂತ ಶ್ರಮಿಸಿದ ಮಹನಿಯರಿಗೆ ಧನ್ಯವಾದಗಳು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಂತೇಶ್ವರ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ರಾಘವೇಂದ್ರ ಕುಲಕರ್ಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಯು ಜಿ ಸಿ ವ್ಯಾಪ್ತಿಯ ಉನ್ನತ ಶಿಕ್ಷಣ ಸಂಸ್ಥೆಗಳ ಮೌಲ್ಯಮಾನ ಕೇಂದ್ರವಾದ ಬೆಂಗಳೂರಿನ ರಾಜ್ಯ ಮಟ್ಟದ ನೋಡಲ್ ಅಧಿಕಾರಿ ಡಾ. ವಿಕ್ರಮ ಹಾಗೂ ಶಾಂತೇಶ್ವರ ವಿದ್ಯಾ ವರ್ಧಕ ಸಂಘದ ಅಧ್ಯಕ್ಷರಾದ ನೀಲಕಂಠಗೌಡ ಪಾಟೀಲ  ಮಾತನಾಡಿ ಒಂದು ದಿನ ರಾಷ್ಟ್ರೀಯ ಕಾರ್ಯಾಗಾರ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದು ಹೇಳಿದರು.ಐಕ್ಯೂ ಸಂಯೋಜಕರಾದ ಜಯಪ್ರಕಾಶ್ ಕೆ ಸೇರಿದಂತೆ ಅನೇಕರು ಮಾತನಾಡಿದರು.ಈ ಸಂದರ್ಭದಲ್ಲಿ ಶಾಂತೇಶ್ವರ ವಿದ್ಯಾ ವರ್ಧಕ ಸಂಘದ ಉಪಾಧ್ಯಕ್ಷರಾದ ಆದರ್ಶ ಪ್ರಭಾಕರ ಬಗಲಿ ಸದಸ್ಯರಾದ ಬಸವರಾಜ ತಾಂಬೆ ಭೀಮನಗೌಡ ಪಾಟೀಲ ಸಚೀನಕುಮಾರ ಗಾಂಧಿ  ವರರ್ಧ ಜೋಶಿ ರಾಜಕುಮಾರ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಸಿ ಎಸ್ ಬಿರಾದಾರ, ಎ ಸಿ ನಡವಿನಮನಿ, ಪಿ ಕೆ ರಾಠೋಡ ವಿಶ್ವಾಸ ಕೊರವಾರ ಮಲ್ಲಿಕಾರ್ಜುನ ಕೋಣದೆ ಎಸ್ ಯು ರಾಠೋಡ ಸುರೇಂದ್ರ, ಕೆ ಶೃತಿ ಪಾಟೀಲ ಪಂರಜ ಕುಲಕರ್ಣಿ ಶೃತಿ ಬಿರಾದಾರ, ಪಿ ಎಸ್ ಅಜಮನಿ ಪ್ರಶಾಂತ ಆನಂದ ತಾಂಬೆ.ಈ ಕಾರ್ಯಕ್ರಮವನ್ನು ಪ್ರಾಧ್ಯಾಪಕರಾದ ಭೀಮನಗೌಡ ಬಗಲಿ ನಿರೂಪಿಸಿದರು ಹಾಗೂ ಶ್ವೇತಾ ಕಾಂತ ವಂದಿಸಿದರು.