ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರಿಯ ಯುವ ದಿನಾಚರಣೆ

ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರಿಯ ಯುವ ದಿನಾಚರಣೆ National Youth Day celebration at Ghanamateshwar Educational Institute

                 ತಾಳಿಕೋಟಿ 12 : ಪಟ್ಟಣದ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಸ್ವಾಮಿವಿವೇಕಾನಂದರ ಜುಯಂತಿ ಹಾಗೂ ರಾಷ್ಟ್ರಿಯ ಯುವ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. 1863ರ ಜನವರಿ 12ರಂದು ಕೊಲ್ಕತ್ತಾ ಜನಿಸಿದರು. ಅವರ ಬಾಲ್ಯದ ಹೆಸರು ನರೇಂದ್ರನಾಥ ದತ್ತ.  ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದಎಸ್‌.ಎಂ.ಸಜ್ಜನ ಅವರು ಆದರ್ಶ ಸ್ವಾಮಿ ವಿವೇಕಾನಂದರು ತಮ್ಮ ಜೀವನವನ್ನು ತ್ಯಾಗ, ಸೇವೆ, ಶಿಸ್ತು ಮತ್ತು ಆತ್ಮವಿಶ್ವಾಸಗಳ ಆದರ್ಶದ ಮೇಲೆ ಕಟ್ಟಿಕೊಂಡ ಮಹಾನ್ ಚಿಂತಕ ಮತ್ತು ಯುಗಪುರುಷರು.ಸತ್ಯ ಮತ್ತು ಆತ್ಮಜ್ಞಾನಅವರು ಸತ್ಯಾನ್ವೇಷಣೆಗೆ ಜೀವನವನ್ನು ಅರ​‍್ಿಸಿದರು.

               “ನಿನ್ನೊಳಗಿನ ಶಕ್ತಿಯನ್ನು ಅರಿತುಕೋ” ಎಂದು ಪ್ರತಿಯೊಬ್ಬರಲ್ಲೂ ದೇವತ್ವವಿದೆ ಎಂಬ ವಿಚಾರವನ್ನು ಬೋಧಿಸಿದರು.ತಮ್ಮ ಗುರು ಶ್ರೀ ರಾಮಕೃಷ್ಣ ಪರಮಹಂಸರು ಅವರಿಗೆ ಅಪಾರ ಭಕ್ತಿ ಮತ್ತು ಗೌರವವನ್ನು ತೋರಿದರು. ಸಂನ್ಯಾಸ ಸ್ವೀಕರಿಸಿ ವೈಯಕ್ತಿಕ ಸುಖವನ್ನು ತ್ಯಜಿಸಿ, ಸಮಾಜ ಸೇವೆಯ ಮಾರ್ಗವನ್ನು ಆರಿಸಿದರು. ಅವರ ಜೀವನ ಸಂಪೂರ್ಣವಾಗಿ ಲೋಕಹಿತಕ್ಕಾಗಿ ಸಮರ​‍್ಿತವಾಗಿತ್ತು.“ಮಾನವಸೇವೆಯೇ ದೇವಸೇವೆ” ಎಂಬುದನ್ನು ಅವರು ತಮ್ಮ ಜೀವನದ ಆದರ್ಶವಾಗಿಸಿಕೊಂಡರು. ್ಥುೂಹ್ದ್ಘ್ಲಿ್ಚ್ಘೈ ಸೇವೆಯನ್ನು ಧರ್ಮದ ಮುಖ್ಯ ಅಂಶವೆಂದು ಕಂಡರು.ಎಲ್ಲಾ ಧರ್ಮಗಳೂ ಒಂದೇ ಸತ್ಯದ ವಿವಿಧ ಮಾರ್ಗಗಳು ಎಂದು ಬೋಧಿಸಿದರು. ಜಾತಿ, ಮತ, ವರ್ಗಭೇದವಿಲ್ಲದೆ ಸಮಾನತೆಯ ಜೀವನವನ್ನು ನಡೆಸಿದರು.

              ಯುವಜನತೆಗೆ ಪ್ರೇರಣೆಯುವಕರು ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಬಲಿಷ್ಠರಾಗಬೇಕು ಎಂದು ಬಯಸಿದರು.  “ಏಳಿರಿ, ಜಾಗೃತರಾಗಿರಿ, ಗುರಿ ಸಾಧಿಸುವವರೆಗೆ ನಿಲ್ಲಬೇಡಿ” ಎಂಬುದು ಅವರ ಜೀವನ ಸಂದೇಶ.ಭಾರತದ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಿದರು. ದೇಶೋದ್ಧಾರವೇ ಜೀವನದ ಗುರಿ ಎಂದು ಭಾವಿಸಿದರು.ಮಾತುಗಳುಇಂದಿನಯುವಭಾರತಕ್ಕೆಆದರ್ಶಗಳಾಗಿವೆಎಂದುಹೇಳಿದರು  ಈ ಸಮಯದಲ್ಲಿ ಸಂಸ್ಥೆಯ ಕಾಯದರ್ಶಿಗಳಾದ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಆರ್‌.ಎಸ್‌.ದೇಸಾಯಿ, ದೈಹಿಕಶಿಕ್ಷಕಶಿವಾನಂದಸುಣಧೋಳಿ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಡಾ. ಟಿ.ವ್ಹಿಶೆಟ್ಟಿ, ಜಿ.ಎನ್‌.ಪಾಟೀಲ, ಸರ್ವಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.