ರಾಷ್ಟ್ರೀಯ ಸೇವಾ ಶಿಬಿರಕ್ಕೆ ಚಾಲನೆ
National Service Camp kicks off
ಲೋಕದರ್ಶನ ವರದಿ
ಯಮಕನಮರಡಿ 26: ದೇಶದ ಪ್ರಗತಿಗೆ ಇಂದಿನ ಯುವಜನರು ವಿದ್ಯಾರ್ಥಿದೆಶೆಯಲ್ಲಿ ಸಮಾಜಮುಖಿ ಕಾರ್ಯಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಉತ್ತಮ ಆರೋಗ್ಯಕ್ಕೆ ಸ್ವಚ್ಛ ಪರಿಸರ ಪ್ರತಿಯೊಬ್ಬರು ಕಾಳಜಿ ವಹಿಸಬೇಕೆಂದು ವಿಶ್ವನಾಥ ಮ ಕತ್ತಿ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಬೆ.ಬಾಗೇವಾಡಿ ಪ್ರಾಚಾರ್ಯರಾದ ಡಾ ವಿ.ಎಸ್ ಹೂಗಾರ ಯುವ ಜನರಿಗೆ ಕರೆ ನೀಡಿದರು.
ಅವರು ಕಳೆದ ಸೋಮವಾರ 23 ಮಾರ್ಚ 2026 ರಂದು ಮೈ ಭಾರತ ಕೇಂದ್ರ ಬೆಳಗಾವಿ ಆಶಾದೀಪ ಸಮುದಾಯ ಕಲಾಕೇಂದ್ರ ಹಾಗೂ ಸ್ನೇಹ ಚೇತನ ಕಲಾಪ್ರೇರಣೆ ಸಮುದಾಯ ಸೇವಾ ಬಳಗ ಬೇಡಕಿಹಾಳ ಹಾಗೂ ಎನ್. ಎಸ್. ಎಸ್ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಝಂಗಟಿಹಾಳ ಗ್ರಾಮದಲ್ಲಿ ಜರುಗಿದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಶಾಹೀದಿ ದಿವಸ ಶ್ರಮದಾನ ಪಾದಯಾತ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್,ಎಸ್,ಎಸ್ ಅಧಿಕಾರಿಗಳಾದ ಆರ್ .ಎಸ್ ಹುದ್ದಾರ ಮಾತನಾಡಿ ಭಗತ ಸಿಂಗ ಶಿವರಾಮ ರಾಜಗುರು ಸುಖದೇವ ತಾಪರ ಅಂತಹಾ ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗಮಾಡಿದವರು ಅವರ ಪ್ರೇರಣೆ ಇಂದಿನ ಯುವ ಜನರಲ್ಲಿ ದೇಶ ಭಕ್ತಿ ಇರಬೇಕೆಂದು ಅಭಿವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಕಾರ್ಯದರ್ಶಿ ನಾಶಿರಕಾನ ಪಠಾಣ ಇವರು ಸಸಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಲಾವಿದ ಪ್ರಕಾಶ ಜನಮಟ್ಟಿ ಹಾಗೂ ಸ್ಥಳೀಯ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. ಗ್ರಾಮದಲ್ಲಿ ಯುವಜನರು ಸ್ವಚ್ಚತಾ ಸೇವೆ ಹಾಗೂ ಪಾದಯಾತ್ರೆ ಮಾಡುವ ಮುಖಾಂತರ ಜಾಗೃತಿ ಮೂಡಿಸಿದರು. ಶೀಮಾ ಗೋಲಭಾಂವಿ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಣ ಯಡ್ರಾಂವಿ ಸ್ವಾಗತಿಸಿ ವಂದಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 