ಹಡಗಲಿಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ
National Pulse Polio on board
ಹೂವಿನಹಡಗಲಿ 21: ತಾಲೂಕಿನಲ್ಲಿ ತಾಲೂಕ ಆಡಳಿತ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು ಇವರ ನೇತೃತ್ವದಲ್ಲಿ ಶ್ರೀ ತೇರು ಹನುಮಪ್ಪ ದೇವಸ್ಥಾನದ ಆವರಣದಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ತಾಲೂಕ ಆರೋಗ್ಯ ಅಧಿಕಾರಿ ಡಾ. ಅಶೋಕ್ ಚಾಲನೆ ನೀಡಿ ಮಾತನಾಡಿ ತಾಲೂಕಿನಾದ್ಯಂತ 198 ಬೂತ್ ಗಳಲ್ಲಿ 0-5 ವಯೋಮಾನದ 17,257 ಮಕ್ಕಳನ್ನು ಪೋಲಿಯೋ ಹಾಕಿಸುವ ಗುರಿ ಹೊಂದಿದ್ದು 434 ಸಿಬ್ಬಂದಿಗಳನ್ನು ನಿಯೋಜನೆ ಗೊಳಿಸಲಾಗಿದೆ ಜತೆಗೆ ವಲಸೆ ಬಂದಿರುವಂತಹ ಮತ್ತು ಕೂಲಿಗಾಗಿ ಬಂದಿರುವಂತಹ ಕುಟುಂಬಗಳನ್ನು ಪತ್ತೆ ಹಚ್ಚಿ ಕುಟುಂಬದಲ್ಲಿ ಇರುವಂತಹ ಮಕ್ಕಳಿಗೆ ಪೋಲಿಯೋ ಹಾನಿಯನ್ನು 03 ಮೊಬೈಲ್ ಟೀಮ್ ಗಳನ್ನು ನಿಯೋಜನೆಗೊಳಿಸಲಾಗಿದ್ದು ಪ್ರತಿಶತ ನೂರರಷ್ಟು ಸಾಧನೆ ಮಾಡುವ ಗುರಿ ಇದೆ ಎಂದರು.
ಪೋಲಿಯೋ ಭಾನುವಾರದಂದು ಬೂತಗಳಿಗೆ ಬರದೇ ಇರುವಂತಹ ಮಕ್ಕಳಿಗೆ ಮತ್ತು ತೀರ್ವ ಅನಾರೋಗ್ಯದ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಡಿ. 22,23 ಹಾಗೂ 24 ರಂದು ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಾಗುತ್ತದೆಲಸಿಕೆ ಯಿಂದ ವಂಚಿತ ಆಗಬಾರದು ಎಂದು ತಿಳಿಸಿದರು .ಈ ಸಂದರ್ಭದಲ್ಲಿ ಜಿಲ್ಲಾ ನೋಡಲ್ ಅಧಿಕಾರಿ ಡಾ.ಕೆ ರಾಧಿಕಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಾದ ಡಾ. ಕೊಟ್ರಮ್ಮ ಸಿ ಡಿ ಪಿ ಓ ರಾಮನಗೌಡ ಪುರಸಭೆ ಮುಖ್ಯಾಧಿಕಾರಿ ಇಮಾಮ್ ಸಾಹೇಬ್ , ಕ್ಷೇತ್ರ ಕಾರ್ಯಕ್ರಮ ವ್ಯವಸ್ಥಾಪಕ ಬೀರಬ್ಬಿ ಮಹೇಶ್, ತಾಲೂಕು ಲಸಿಕಾ ನಿರ್ವಹಣೆ ಅಧಿಕಾರಿ ವೈ ಶಿವಕುಮಾರ್, ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಜಿ ವಿ ಶಿವಕುಮಾರ ನೇತ್ರಾವತಿ ಪುರಸಭಾ ಆರೋಗ್ಯ ನೀರೀಕ್ಷಕ ಸೋಮಶೇಖರ್ ಹಾಗೂ ಆರೋಗ್ಯ ಇಲಾಖೆ ಮತ್ತು ಪುರಸಭೆ ಸಿಬ್ಬಂದಿ ವರ್ಗದವರು ಹಾಜರಿದ್ದು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಚಾಲನೆ ನೀಡಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 