ಜೂನ್ 28 ರಂದು ರಾಷ್ಟ್ರೀಯ ಪಲ್ಸ್‌ ಪೋಲಿಯೊ ಅಭಿಯಾನ: ಐದು ವರ್ಷೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ

ಜೂನ್ 28 ರಂದು ರಾಷ್ಟ್ರೀಯ ಪಲ್ಸ್‌ ಪೋಲಿಯೊ ಅಭಿಯಾನ: ಐದು ವರ್ಷೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ  National Pulse Polio Campaign on June 28: Vaccination mandatory for children under five years of age

ವಿಜಯಪುರ 25 : ಹಡಗಲಿ, ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಜೂನ್ 28, 2026ರಂದು ಜರಗುವ ರಾಷ್ಟ್ರೀಯ ಪಲ್ಸ್‌ ಪೋಲಿಯೊ ಕಾರ್ಯಕ್ರಮದಂದು, ಕಡ್ಡಾಯವಾಗಿ ಐದು ವರ್ಷದ ಒಳಗಿನ ಮಕ್ಕಳಿಗೆ  ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಬೇಕೆಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎ. ಎಸ್‌. ಹನಗಂಡಿ ತಿಳಿಸಿದರು. ಹಡಗಲಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಜರುಗಿದ ರಾಷ್ಟ್ರೀಯ ಪಲ್ಸ್‌ ಪೋಲಿಯೊ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದವರು, ಹಿಂದೆ ನಾವು ನಮ್ಮ ಮಗುವಿಗೆ ಎಷ್ಟೇ ಬಾರಿ ಪೋಲಿಯೊ ಲಸಿಕೆಯನ್ನು ಹಾಕಿಸಿದರು ಕೂಡ, ಈಗ ಮತ್ತೆ ತಪ್ಪದೇ ಎರಡು ಹನಿ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು,

ಈಗಾಗಲೇ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಧ್ವನಿವರ್ಧಕಗಳ ಮೂಲಕ ಮತ್ತು ಡಂಗೂರ ಸಾರುವ ಮುಖಾಂತರ ಪ್ರಚಾರ ಕೈಗೊಂಡಿದ್ದೇವೆ, ಎಲ್ಲರ ಸಹಕಾರದೊಂದಿಗೆ ಪೋಲಿಯೋ ವಿರುದ್ಧ ನಿರಂತರ ಗೆಲುವು ಮುಂದುವರಿಸೋಣ ಎಂದು ತಿಳಿಸಿದರು. ನಂತರ ಮಾತನಾಡಿದ ಆರೋಗ್ಯ ನೀರೀಕ್ಷಣಾಧಿಕಾರಿ ಆರ್‌. ಎಸ್‌. ಪಾಟೀಲ್ ಹಡಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಹಡಗಲಿ ಮತ್ತು ಹಡಗಲಿ ತಾಂಡಾ ನಂಬರ್ 1 ,2 , ಮತ್ತು 3 ರಲ್ಲಿ 745 ಒಟ್ಟು ಐದು ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು ಗುರಿ ಹೊಂದಲಾಗಿದೆ. ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಒಂದು, ಮತ್ತು ತಾಂಡಾ ಗ್ರಾಮಗಳಲ್ಲಿ ಎರಡು ಪೋಲಿಯೋ ಬೂತಗಳನ್ನು ಪ್ರಾರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ, ಒಂದು ಮಗು ಕೂಡ ಲಸಿಕೆ ವಂಚಿತರಾಗದಂತೆ  ಕ್ರಮ ವಹಿಸಲಾಗುವುದು.  

ಪೋಲಿಯೊ ಭೂತಗಳನ್ನು ಜೂನ್ 28 ರಂದು ಭಾನುವಾರ ಬೆಳಿಗ್ಗೆ 7: 40ಕ್ಕೆ ಪ್ರಾರಂಭಿಸಲಾಗುವುದು ಎಲ್ಲ ಸಾರ್ವಜನಿಕರು ತಮ್ಮ ಐದು ವರ್ಷದ ಒಳಗಿನ ಎಲ್ಲ ಮಕ್ಕಳನ್ನು  ಪೋಲಿಯೋ ಭೂತಗೆ ಕರೆತಂದು, ಎರಡು ಹನಿ ಪೋಲಿಯೋ ಲಸಿಕೆಯನ್ನು ಯನ್ನು ಹಾಕಿಸಬೇಕು. ಭಾರತ ದೇಶ ಪೋಲಿಯೋ ಮುಕ್ತವಾಗಿದೆ, ಪೋಲಿಯೊ ಮುಕ್ತದೇಶ ವಿಜಯವನ್ನು ಮುಂದುವರಿಸೋಣ, ಎಲ್ಲ ಸಾರ್ವಜನಿಕರ ಸಹಕಾರ ಎಲ್ಲ ಇಲಾಖೆಗಳ ಸಹಕಾರದೊಂದಿಗೆ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದರು. ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ವೇದಮೂರ್ತಿ ನಿಂಗಯ್ಯ ಸ್ಥಾವರಮಠ ಗ್ರಾಮ ಪಂಚಾಯತಿಯ ಸಿಬ್ಬಂದಿವರಾದ ಭೀಮಾ ಲಂಬಾಣಿ, ಅಬ್ಬಾಸಲಿ ಕಲಬುರ್ಗಿ, ಶಿವಾನಂದ ಅಣಮಿ , ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯವರು, ಸಾರ್ವಜನಿಕರು ಪಾಲ್ಗೊಂಡಿದ್ದರು.