ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ
ಹಾವೇರಿ: ಭಾರತದ ಖ್ಯಾತ ವಿಜ್ಞಾನಿ ಹಾಗೂ ಸಾಂಖ್ಯಿಕ ತಜ್ಞರಾದ ಪ್ರೊ. ಪಿ.ಸಿ ಮಹಾಲನೋಬಿಸ್ ಅವರ ಜನ್ಮದಿನದ ಅಂಗವಾಗಿ 13 ನೇ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಯಲ್ಲಿ ಶನಿವಾರ ಆಚರಿಸಲಾಗಿದೆ.
ಉಪನ್ಯಾಸಕರಾಗಿ ಭಾಗವಹಿಸಿದ ಶಿಗ್ಗಾಂವಿ ಸಕರ್ಾರಿ ಪ್ರಥಮ ದಜರ್ೆ ಪದವಿ ಮಹಾವಿದ್ಯಾಲಯದ ಪ್ರೊ. ಶ್ರೀಮತಿ. ಎಸ್.ವಿ. ಪಾಟೀಲ ಅವರು ಮಾತನಾಡಿ, ಸಪ್ಟಂಬರ್-2015 ರಲ್ಲಿ ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಸುಸ್ಥಿರ ಅಭಿವೃಧ್ದಿ ಸಾಧಿಸಲು 17 ಗುರಿಗಳನ್ನು ನಿಗದಿಪಡಿಸಿ, 2030ರೊಳಗೆ ಸಾರ್ವಜನಿಕರಿಗೆ ಉತ್ತಮ ಶಿಕ್ಷಣ, ಆರೋಗ್ಯ, ಬಡತನ ನಿಮರ್ೂಲನೆ, ಲಿಂಗತಾರತಮ್ಯವಿಲ್ಲದ ಜೀವನ, ಉತ್ತಮ ಹವಾಮಾನ, ನೀರಿನ ಸದ್ಬಳಕೆ, ನಿರುದ್ಯೋಗ ನಿವಾರಣೆ ಮುಂತಾದ ಉತ್ತಮ ಧ್ಯೇಯಗಳನ್ನು ಒದಗಿಸಲು ಹಾಕಿಕೊಂಡ ಗುರಿಗಳನ್ನು ವಿವರವಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕುಮಾರ ಮಣ್ಣವಡ್ಡರ ಅವರು ಪ್ರೊ.ಪಿ.ಸಿ ಮಹಾಲನೋಬಿಸ್ರವರ ಸಾಧನೆಗಳ ಬಗ್ಗೆ ಹಾಗೂ ಸುಸ್ಥಿರ ಅಭಿವೃಧ್ದಿ ಗುರಿಗಳ ಬಗ್ಗೆ ಮಾತನಾಡಿದರು.
ಸಹಾಯಕ ಸಾಂಖ್ಯಿಕ ಅಧಿಕಾರಿ ಜೆ.ಆರ್.ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀಮತಿ. ಭಾರತಿ ಪಾಟೀಲ ಹಾಗೂ ಪ್ರೇಮಾ ಸಿಂಗಾಪೂರ, ವಿವಿಧ ಇಲಾಖೆಗಳ ಸಾಂಖ್ಯಿಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಇಲಾಖೆಯ ಎಲ್ಲಾ ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 