ರಾಷ್ಟ್ರೀಯ ವೈದ್ಯಕೀಯ ದಿನಾಚರಣೆ: ಸಾಧಕರೊಂದಿಗೆ ಸಂವಾದ
National Medical Day: Conversation with practitioners
ವಿಜಯಪುರ 01: ವಿಜಯಪುರದ ವಿದ್ಯಾವರ್ಧಕ ಸಂಘದ ವಿ.ಭ.ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜುಲೈ 1ರಂದು ರಾಷ್ಟ್ರೀಯ ವೈದ್ಯಕೀಯ ದಿನಾಚರಣೆ ಕಾರ್ಯಕ್ರಮ ಜರುಗಿತು.
ಯುಪಿಎಸ್‌ಸಿ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಬರೆದು ರಾಷ್ಟ್ರಮಟ್ಟದಲ್ಲಿ 532ನೇ ಶ್ರೇಯಾಂಕವನ್ನು ಪಡೆದಿರುವ ವಿಜಯಪುರದ ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಡಾ. ಮಹೇಶ ಮಡಿವಾಳರ, ಮಡಿಕೇಶ್ವರದ ವೈದ್ಯಕೀಯ ಕೇಂದ್ರದ ವೈದ್ಯಾಧಿಕಾರಿ ಅವರು ಮಾತನಾಡಿ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಅದನ್ನು ಸವಾಲಾಗಿ ಸ್ವೀಕರಿಸಿ ಉತ್ತಮ ಸಾಧನೆಗೈಯುವ ಮೂಲಕ ಮುಂದೆ ಇರುವ ವಿದ್ಯಾರ್ಥಿಗಳಿಗೆ ಶ್ರೇಷ್ಠ ಅವಕಾಶಗಳನ್ನು ಪ್ರಾಮಾಣಿಕತೆ, ಛಲ ಹಾಗೂ ಗುರುಗಳ ಮೇಲೆ ವಿಶ್ವಾಸ ನಿರಂತರವಾದ ಪರೀಕ್ಷೆಯನ್ನು ಎದುರಿಸುವ ಪೂರ್ವ ತಯಾರಿಯನ್ನು ಮಾಡಿ ಉತ್ತಮವಾದ ಅವಕಾಶಗಳನ್ನು ಹೇಗೆ ಪಡೆಯಬೇಕೆಂದು ಮನ ಮುಟ್ಟುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎಂತಹ ಕಷ್ಟಗಳು ಬಂದರೂ ಅದನ್ನು ಲೆಕ್ಕಿಸದೆ ಸಾಧಿಸಬೇಕೆಂಬ ಛಲದಿಂದ ಗುರಿಯನ್ನು ಮುಟ್ಟುವವರೆಗೆ ತಮ್ಮ ಪ್ರಯತ್ನವು ನಿರಂತರವಾಗಿ ಮಾಡಬೇಕು ಎಂದು ಹೇಳಿದರು.ಕಾಲೇಜಿನ ಪ್ರಾಚಾರ್ಯ ಟಿ. ಆರ್. ಕುಲಕರ್ಣಿ ಅವರು ಸ್ವಾಗತಿಸಿದರು. ಉಪನ್ಯಾಸಕ ಎಸ್. ಎಸ್. ಗೌರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ತಮ್ಮ ಶಿಷ್ಯರಾದ ಡಾ. ಮಹೇಶ ಮಡಿವಾಳ ಅವರ ವಿದ್ಯಾರ್ಥಿ ಜೀವನದ ಕುರಿತು ಮಾತನಾಡುತ್ತಾ ಸಾಧನೆಯ ಹಸಿವು ಇರುವವರಿಗೆ ಯಾವ ಅಡೆ ತಡೆಯೂ ಬಾಧಿಸುವದಿಲ್ಲ ಎಂದು ಹೇಳಿ ಅದಕ್ಕೆ ಜ್ವಲಂತ ಉದಾಹರಣೆಯೆಂದರೆ ಡಾ. ಮಹೇಶ ಮಡಿವಾಳ ಎಂದು ಹೇಳಿದರು.ಅಧ್ಯಕ್ಷತೆಯನ್ನು ವಹಿಸಿದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯ ವಿಕಾಸ ಕೆ. ದರಬಾರ ಸರ್ ಅವರು ಮಾತನಾಡಿ ಡಾ. ಮಹೇಶ ಮಡಿವಾಳ ಅವರಂತಹ ಉತ್ತಮ ಸಾಧಕರೊಂದಿಗೆ ಏರಿ್ಡಸಿದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಬಹಳ ಉಪಯುಕ್ತವಾಗಿದೆ ಹಾಗೂ ವಿದ್ಯಾರ್ಥಿಗಳ ಮುಂದಿನ ಜೀವನದಲ್ಲಿ ಇವರಂತೆ ಉತ್ತಮ ಸಾಧನೆಯನ್ನು ಮಾಡಿ ನಮ್ಮ ಸಂಸ್ಥೆಗೆ ಪಾಲಕರಿಗೆ ಹಾಗೂ ನಾಡಿಗೆ ದೊಡ್ಡ ಕೊಡುಗೆಯನ್ನು ನೀಡಬೇಕೆಂದು ವಿದ್ಯಾರ್ಥಿಗಳಲ್ಲಿ ಉತ್ತಮ ಸಾಧನೆಯನ್ನು ಮಾಡಲು ಉತ್ಸಾಹ ತುಂಬಿದರು.
ಭವಾನಿ ಹಾಗೂ ಮದನ ಮತ್ತು ಅನೇಕ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಉಪನ್ಯಾಸಕರಾದ ಎಂ. ಎಸ್. ಬಿರಾದಾರ ಅವರು ವಂದಿಸಿದರು. ಪಿ. ಜಿ. ಜೋಷಿ ಹಾಗೂ ಆರ್. ಜಿ. ದರಬಾರ ಮತ್ತು ವಿಜ್ಞಾನ ವಿಭಾಗದ 300 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 