ರಾಷ್ಟ್ರೀಯ ಗಣಿತ ದಿನಾಚರಣೆ
National Mathematics Day
ಹೂವಿನ ಹಡಗಲಿ 23: ಗಣಿತ ಎಲ್ಲಾ ವಿಜ್ಞಾನಗಳ ತಾಯಿ ಎಂದು ಮುಖ್ಯ ಗುರುಗಳಾದ ಸುರೇಶ ಅಂಗಡಿ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಸರ್ಕಾರಿ ತುಂಗಭದ್ರಾ ಅನುದಾನಿತ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭಾರತದ ಪ್ರಸಿದ್ಧ ಗಣಿತಜ್ಞರಾದ ಆರ್ಯಭಟ ಭಾಸ್ಕರ ಶ್ರೀನಿವಾಸ ರಾಮಾನುಜನ್ ಗಣಿತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.ಜನ ಸಾಮಾನ್ಯರ ದೈನಂದಿನ ಬದುಕಿನಲ್ಲಿ ಗಣಿತ ಹಾಸು ಹೊಕ್ಕಾಗಿದೆ. ವ್ಯಾಪಾರ ವಹಿವಾಟು ಕೃಷಿ ವಾಣಿಜ್ಯ ಬ್ಯಾಂಕ್ ವೈದ್ಯಕೀಯ ಶಿಕ್ಷಣ ಮೊದಲಾದ ಎಲ್ಲಾ ಕ್ಷೇತ್ರಗಳಲ್ಲೂ ಗಣಿತ ಅವಶ್ಯವಾಗಿ ಬೇಕು ಎಂದು ತಿಳಿಸಿದರು.ಚಿತ್ರಕಲಾ ಶಿಕ್ಷಕರಾದ ಎಸ್ ದ್ವಾರಕೀಶ್ ರೆಡ್ಡಿ ದೈಹಿಕ ಶಿಕ್ಷಕ ಸ್ವಾಮಿನಾಥ ರಾಮಸ್ವಾಮಿ ಶಿಕ್ಷಕರಾದ ಬಸಪ್ಪ ಕೆ ಆನಂದ್ ಜಿ ಗೀತಾ ಪಿ ಎಂ ಪ್ರತಿಮಾ ಎನ್ ಜಯಮ್ಮ ವೈ ಎಲ್ ಗಿಡ್ಡಾನಾಯ್ಕ್ ಸಂಗಮೇಶ ಸುಂಕದ ಪ್ರಸಾದ್ ಎಸ್ ಸಂತೋಷ್ ಕುಮಾರ್ ಇತರರು ಇದ್ದರು.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 