ರಾಷ್ಟ್ರೀಯ ಹಿಂದೂ ಆಂದೋಲನ ಪ್ರತಿಭಟನೆ

ಬೆಂಗಳೂರು, ಜ 29 :  ಪೌರತ್ವ ತಿದ್ದುಪಡಿ ಕಾಯ್ದೆ -ಸಿಎಎ ವಿರುದ್ಧ ದೇಶದ ಜನರನ್ನು ದಿಕ್ಕುತಪ್ಪಿಸಿ ರಾಷ್ಟ್ರ ವಿರೊಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ನಗರ ನಕ್ಸಲರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಹಿಂದೂ ಜಾಗರಣ ಸಮಿತಿ ಆಗ್ರಹಿಸಿದೆ.

ಪ್ರಗತಿಪರರ ಹೆಸರಿನಲ್ಲಿ ನಗರ ನಕ್ಸರು ಸಿಎಎ ವಿರುದ್ಧ ದೇಶದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಹಿಂಸೆಗೆ ಪ್ರಚೋದಿಸಿ ಷಡ್ಯಂತ್ರ ರೂಪಿಸುತ್ತಿದ್ದಾರೆ.

ಮತಾಂಧ ಧಾರ್ಮಿಕ ಸಂಘಟನೆ ಹಾಗೂ ಮಾವೋವಾದಿಗಳ ವಿರುದ್ಧ ರಾಷ್ಟ್ರೀಯ ತನಿಖಾದಳ -ಎನ್‌ಐಎ ನಿಂದ ವಿಚಾರಣೆ ನಡೆಸಬೇಕು ಹಾಗೂ ದೇಶದ್ರೋಹಿ ಪಿಎಫ್‌ಐ ದಾಖಲಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿ 'ರಾಷ್ಟ್ರೀಯ ಹಿಂದೂ ಆಂದೋಲನ' ಹೆಸರಿನಲ್ಲಿ ಜ.30ರಂದು ನಗರದ ಮೈಸೂರು ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ತಿಳಿಸಿದೆ.